Avatar 3: ಗೆದ್ದು ಬೀಗಿದ ‘ಅವತಾರ್​ 2’: ಇನ್ನುಳಿದ ಸೀಕ್ವೆಲ್​ ಮಾಡಲು ಮುಂದಾದ ಜೇಮ್ಸ್​ ಕ್ಯಾಮೆರಾನ್​

Avatar Sequels | Avatar The Way of Water: ‘ಅವತಾರ್​ 2’ ಸೋತರೆ ಇನ್ನುಳಿದ ಸೀಕ್ವೆಲ್​ಗಳನ್ನು ಮಾಡುವುದಿಲ್ಲ ಎಂದು ಜೇಮ್ಸ್​ ಕ್ಯಾಮೆರಾನ್ ಈ ಹಿಂದೆ​ ಹೇಳಿದ್ದರು. ಆದರೆ ಈಗ ಈ ಚಿತ್ರ ಗೆದ್ದಿರುವುದರಿಂದ ‘ಅವತಾರ್​ 3’ ಮತ್ತು ಇನ್ನುಳಿದ ಸೀಕ್ಚೆಲ್​ ಮಾಡುವುದು ಖಚಿತ ಎಂದಿದ್ದಾರೆ.

Avatar 3: ಗೆದ್ದು ಬೀಗಿದ ‘ಅವತಾರ್​ 2’: ಇನ್ನುಳಿದ ಸೀಕ್ವೆಲ್​ ಮಾಡಲು ಮುಂದಾದ ಜೇಮ್ಸ್​ ಕ್ಯಾಮೆರಾನ್​
ಅವತಾರ್ 2
Follow us
TV9 Web
| Updated By: ಮದನ್​ ಕುಮಾರ್​

Updated on: Jan 09, 2023 | 7:30 AM

ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ (James Cameron) ಅವರು ಮಾಡುವ ಪ್ರತಿ ಸಿನಿಮಾಗಳು ದಾಖಲೆ ಬರೆಯುತ್ತವೆ. ಗ್ರಾಫಿಕ್ಸ್​ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅವರಿಗೆ ಬೇರಾರೂ ಸಾಟಿ ಇಲ್ಲ ಎನ್ನಬಹುದು. ಹಾಲಿವುಡ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಮಾಡುವ ಎದೆಗಾರಿಕೆ ತೋರಿದ ಅವರು ಈಗ ‘ಅವತಾರ್​: ದಿ ವೇ ಆಫ್​ ವಾಟರ್’ (Avatar: The Way of Water) ಸಿನಿಮಾ ಮೂಲಕ ಗೆದ್ದು ಬೀಗುತ್ತಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 1.5 ಬಿಲಿಯನ್​ ಡಾಲರ್​ಗಿಂತಲೂ ಅಧಿಕ ಕಲೆಕ್ಷನ್​ ಮಾಡಿದೆ. ಈ ಕಲೆಕ್ಷನ್​ನಿಂದಾಗಿ ಚಿತ್ರತಂಡಕ್ಕೆ ಭರವಸೆ ಮೂಡಿದೆ. ಹಾಗಾಗಿ ‘ಅವತಾರ್​’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್​ಗಳನ್ನು ಮಾಡಲು ಜೇಮ್ಸ್​ ಕ್ಯಾಮೆರಾನ್​​ ಮುಂದೆಬಂದಿದ್ದಾರೆ.

‘ಅವತಾರ್​ 2’ ಸಿನಿಮಾ 2022ರ ಡಿಸೆಂಬರ್​ 16ರಂದು ತೆರೆಕಂಡಿತು. ಈ ಸಿನಿಮಾದ ರಿಲೀಸ್​ಗೂ ಮುನ್ನ ಜೇಮ್ಸ್​ ಕ್ಯಾಮೆರಾನ್​ ಒಂದು ಮಾತು ಹೇಳಿದ್ದರು. ಒಂದು ವೇಳೆ ‘ಅವತಾರ್​ 2’ ಸೋತರೆ ಇನ್ನುಳಿದ ಸೀಕ್ವೆಲ್​ಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಈಗ ‘ಅವತಾರ್​ 2’ ಚಿತ್ರ ಗೆದ್ದಿರುವುದರಿಂದ ‘ಅವತಾರ್​ 3’ ಸಿನಿಮಾ ಮಾಡುವುದು ಅನಿವಾರ್ಯ ಆಗಿದೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ‘ಅವತಾರ್ 2’ ಚಿತ್ರವನ್ನು ಕೇವಲ 200 ರೂಪಾಯಿಗೆ ನೋಡಬಹುದು; ಹೊಸ ನಿಯಮ ಜಾರಿಗೆ ತರಲು ಚಿಂತನೆ

ಇದನ್ನೂ ಓದಿ
Image
Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ
Image
Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ
Image
Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು
Image
‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  

‘ಈ ಸಿನಿಮಾಗೆ ಹಾಕಿದ ಬಂಡವಾಳ ಇನ್ನು ಕೆಲವೇ ದಿನಗಳಲ್ಲಿ ವಾಪಸ್​ ಬರಲಿದೆ ಎನಿಸುತ್ತದೆ. ಹಾಗಾಗಿ ನಾನು ಇನ್ನುಳಿದ ಸೀಕ್ವೆಲ್​ಗಳನ್ನು ಮಾಡಲೇಬೇಕಾಗಿದೆ. ಮುಂದಿನ 6 ಅಥವಾ 7 ವರ್ಷಗಳ ಕಾಲ ನಾನು ಏನು ಮಾಡುತ್ತೇನೆ ಎಂಬುದು ನನಗೆ ತಿಳಿದಿದೆ’ ಎಂದು ಜೇಮ್ಸ್​ ಕ್ಯಾಮೆರಾನ್​ ಹೇಳಿದ್ದಾರೆ. ಮೂರನೇ ಸೀಕ್ವೆಲ್​ ಸಲುವಾಗಿ ಅವರು ನಿರ್ಮಾಣ ಸಂಸ್ಥೆಯ ಮುಖ್ಯಸ್ಥರ ಜೊತೆ ಶೀಘ್ರದಲ್ಲೇ ಮೀಟಿಂಗ್​ ಮಾಡಲಿದ್ದಾರೆ.

ಇದನ್ನೂ ಓದಿ: Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ

ಅಚ್ಚರಿ ಎಂದರೆ, ‘ಅವತಾರ್​ 3’ ಸಿನಿಮಾದ ಬಹುತೇಕ ದೃಶ್ಯಗಳನ್ನು ಅವರು ಈಗಾಗಲೇ ಚಿತ್ರಿಸಿಕೊಂಡಿದ್ದಾರೆ. ಇನ್ನೇನಿದ್ದರೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳತ್ತ ಗಮನ ಹರಿಸಬೇಕಷ್ಟೇ. ಗ್ರಾಫಿಕ್ಸ್​ ಕೆಲಸಗಳು ಹೆಚ್ಚಿರುವುದರಿಂದ ಅದಕ್ಕೆ ಜಾಸ್ತಿ ಸಮಯ ಹಿಡಿಯಲಿದೆ. ಇನ್ನುಳಿದಂತೆ ‘ಅವತಾರ್​ 4’ ಮತ್ತು ‘ಅವತಾರ್​ 5’ ಚಿತ್ರಗಳಿಗೆ ಈಗಾಗಲೇ ಅವರು ಸ್ಕ್ರಿಪ್ಟ್​ ಸಿದ್ಧಪಡಿಸಿದ್ದಾರೆ.

‘ಅವತಾರ್​ 2’ ಸಿನಿಮಾ ಎಷ್ಟು ಕಲೆಕ್ಷನ್​ ಮಾಡುತ್ತದೆ ಎಂಬ ಬಗ್ಗೆ ಜೇಮ್ಸ್​ ಕ್ಯಾಮೆರಾನ್​ ಅವರಿಗೆ ಅನುಮಾನ ಇತ್ತು. ಒಂದು ವೇಳೆ ಸಿನಿಮಾ ಸೋತರೆ ಸೀಕ್ವೆಲ್​ಗಳ ಸಹವಾಸ ಬೇಡ ಎಂದು ಅವರು ಆಲೋಚಿಸಿದ್ದರು. ಆದರೆ ಈಗ ‘ಅವತಾರ್​ 2’ ಸಿನಿಮಾ ಗೆದ್ದಿರುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ