Avatar 2: ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಅದ್ದೂರಿ ರಿಲೀಸ್; ಆದರೆ ಮೊದಲ ದಿನವೇ ಪೈರಸಿ ಕಾಟ
Avatar The Way of Water | Avatar 2 Piracy: ವಿಶ್ವದ ಹಲವು ಭಾಷೆಗಳಿಗೆ ‘ಅವತಾರ್ 2’ ಸಿನಿಮಾ ಡಬ್ ಆಗಿದೆ. ಭಾರತದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ.
ಹಾಲಿವುಡ್ ಸಿನಿಪ್ರಿಯರು ಬಹಳ ವರ್ಷಗಳಿಂದ ಕಾದಿದ್ದ ‘ಅವತಾರ್ ದಿ ವೇ ಆಫ್ ವಾಟರ್’ (Avatar The Way of Water) ಸಿನಿಮಾ ಬಿಡುಗಡೆ ಆಗಿದೆ. ಭಾರತದಲ್ಲಿ ಇಂದು (ಡಿ.16) ಪ್ರದರ್ಶನ ಆರಂಭ ಆಗಿದೆ. ಹಲವು ರಾಷ್ಟ್ರಗಳಲ್ಲಿ ಗುರುವಾರವೇ (ಡಿ.15) ಈ ಚಿತ್ರ ಬಿಡುಗಡೆ ಆಯಿತು. ಅನೇಕ ಪೈರಸಿ ವೆಬ್ಸೈಟ್ಗಳಲ್ಲಿ ಥಿಯೇಟರ್ ಪ್ರಿಂಟ್ ಲಭ್ಯವಾಗಿದೆ. ಕಳಪೆ ಗುಣಮಟ್ಟದ ಈ ನಕಲಿ ಕಾಪಿಗಳನ್ನು ಡೌನ್ಲೋಡ್ ಮಾಡಿದರೆ ಕಂಪ್ಯೂಟರ್ಗೆ ಹಾನಿ ಮಾಡುವಂತಹ ವೈರಸ್ಗಳು ದಾಳಿ ಇಡುವ ಅಪಾಯ ಹೆಚ್ಚಿದೆ. ಪೈರಸಿ ಕಾಟ ಎಷ್ಟೇ ಇದ್ದರೂ ‘ಅವತಾರ್ 2’ (Avatar 2) ಚಿತ್ರದ ಬಿಸ್ನೆಸ್ಗೆ ಹೊಡೆತ ಬಿದ್ದಿಲ್ಲ. ವಿಶ್ವಾದ್ಯಂತ ಈ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜೇಮ್ಸ್ ಕ್ಯಾಮೆರಾನ್ (James Cameron) ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.
‘ಟೈಟಾನಿಕ್’, ‘ಅವತಾರ್’ ಮುಂತಾದ ಸಿನಿಮಾಗಳ ಮೂಲಕ ದಾಖಲೆ ಬರೆದವರು ನಿರ್ದೇಶಕ ಜೇಮ್ಸ್ ಕ್ಯಾಮೆರಾನ್. ಪ್ರತಿ ಬಾರಿ ಅವರ ಹೊಸ ಸಿನಿಮಾ ರಿಲೀಸ್ ಆದಾಗಲೂ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಅದು ಈ ಬಾರಿಯೂ ಮುಂದುವರಿದಿದೆ. ವಿಶ್ವಾದ್ಯಂತ 52 ಸಾವಿರ ಪರದೆಗಳಲ್ಲಿ ‘ಅವತಾರ್ 2’ ರಿಲೀಸ್ ಆಗಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿ ‘ಅವತಾರ್’ ಸಿನಿಮಾಗಿದೆ. ಆ ದಾಖಲೆಯನ್ನು ‘ಅವತಾರ್ 2’ ಮುರಿಯಲಿದೆಯೇ ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್ 2’ ಟಿಕೆಟ್ ಬೆಲೆ; ಆದ್ರೂ ಮುಗಿಬಿದ್ದು ಬುಕ್ ಮಾಡುತ್ತಿರುವ ಪ್ರೇಕ್ಷಕರು
ಈಗಾಗಲೇ ಅನೇಕ ಸೆಲೆಬ್ರಿಟಿಗಳು ‘ಅವತಾರ್ 2’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಭಾರತದ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜಿಸಲಾಗಿತ್ತು. ಅಕ್ಷಯ್ ಕುಮಾರ್ ಅವರಿಗೆ ಈ ಚಿತ್ರ ತುಂಬ ಇಷ್ಟವಾಗಿದೆ. ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರ ಪ್ರತಿಭೆಗೆ ಅಕ್ಷಯ್ ಕುಮಾರ್ ಭೇಷ್ ಎಂದಿದ್ದಾರೆ. ಸಾವಿರಾರ ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ತಯಾರಾಗಿದೆ.
ಇದನ್ನೂ ಓದಿ: Avatar 2: ಕನ್ನಡಿಗರ ಒತ್ತಾಯಕ್ಕೆ ಮಣಿದ ಹಾಲಿವುಡ್ ನಿರ್ಮಾಪಕ; ಕನ್ನಡದಲ್ಲೂ ತೆರೆ ಕಾಣಲಿದೆ ‘ಅವತಾರ್ 2’ ಚಿತ್ರ
ವಿಶ್ವದ ಹಲವು ಭಾಷೆಗಳಿಗೆ ‘ಅವತಾರ್ 2’ ಸಿನಿಮಾ ಡಬ್ ಆಗಿದೆ. ಭಾರತದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ. 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ.
Watched #AvatarTheWayOfWater last night and Oh boy!!MAGNIFICENT is the word. Am still spellbound. Want to bow down before your genius craft, @JimCameron. Live on!
— Akshay Kumar (@akshaykumar) December 14, 2022
ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ತಯಾರಾಗಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಟಿಕೆಟ್ ಬೆಲೆ ದುಬಾರಿ ಆಗಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡಿದ್ದಾರೆ. ಮೊದಲ ದಿನ ಬಹುತೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 am, Fri, 16 December 22