Avatar 2: ಕನ್ನಡಿಗರ ಒತ್ತಾಯಕ್ಕೆ ಮಣಿದ ಹಾಲಿವುಡ್​ ನಿರ್ಮಾಪಕ; ಕನ್ನಡದಲ್ಲೂ ತೆರೆ ಕಾಣಲಿದೆ ‘ಅವತಾರ್​ 2’ ಚಿತ್ರ

Avatar 2 in Kannada: ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಅವತಾರ್​ 2’ ಚಿತ್ರದ ನಿರ್ಮಾಪಕರು ಈಗ ಕನ್ನಡದಲ್ಲೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್​ 16ರಂದು ಈ ಚಿತ್ರ ರಿಲೀಸ್​ ಆಗಲಿದೆ.

Avatar 2: ಕನ್ನಡಿಗರ ಒತ್ತಾಯಕ್ಕೆ ಮಣಿದ ಹಾಲಿವುಡ್​ ನಿರ್ಮಾಪಕ; ಕನ್ನಡದಲ್ಲೂ ತೆರೆ ಕಾಣಲಿದೆ ‘ಅವತಾರ್​ 2’ ಚಿತ್ರ
‘ಅವತಾರ್ 2’
Follow us
TV9 Web
| Updated By: ಮದನ್​ ಕುಮಾರ್​

Updated on:Nov 11, 2022 | 7:32 AM

ಬಹುನಿರೀಕ್ಷಿತ ‘ಅವತಾರ್​ 2’ (Avatar 2) ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಜಗತ್ತಿನ ಹಲವು ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಬಗ್ಗೆ ಇಡೀ ಪ್ರಪಂಚದ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಕನ್ನಡಿಗರಿಗೆ ಮಾತ್ರ ನಿರಾಸೆ ಆಗಿತ್ತು. ‘ಅವತಾರ್​ 2’ (Avatar: The Way Of Water) ಚಿತ್ರದ ಕನ್ನಡ ವರ್ಷನ್​ ರಿಲೀಸ್​ ಮಾಡುವ ನಿರ್ಧಾರದಿಂದ ನಿರ್ಮಾಪಕರು ಹಿಂದೆ ಸರಿದಿದ್ದರು. ಅದಕ್ಕಾಗಿ ಕನ್ನಡಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಕನ್ನಡ ಪ್ರೇಕ್ಷಕರ ಒತ್ತಾಯಕ್ಕೆ ‘ಅವತಾರ್​ 2’ ನಿರ್ಮಾಪಕರು ಮಣಿದಿದ್ದಾರೆ. ಕನ್ನಡದಲ್ಲೂ (Avatar 2 in Kannada) ಈ ಸಿನಿಮಾವನ್ನು ರಿಲೀಸ್​ ಮಾಡುವುದಾಗಿ ತಿಳಿಸಿದ್ದಾರೆ. ಕನ್ನಡ ವರ್ಷನ್​ ಟ್ರೇಲರ್​ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಕನ್ನಡದಲ್ಲಿ ‘ಅವತಾರ್​ 2’ ರಿಲೀಸ್​ ಮಾಡಬೇಕು ಎಂಬ ಪ್ಲ್ಯಾನ್​ ಆರಂಭದಲ್ಲಿ ಇತ್ತು. ಅದಕ್ಕಾಗಿ ಚಿಕ್ಕ ಟೀಸರ್​ ಅನ್ನು ಕನ್ನಡ ವರ್ಷನ್​ನಲ್ಲೂ ರಿಲೀಸ್​ ಮಾಡಲಾಗಿತ್ತು. ಆದರೆ ಟ್ರೇಲರ್​​ ಬಿಡುಗಡೆ ಸಮಯದಲ್ಲಿ ನಿರ್ಮಾಪಕರ ಮನಸ್ಸು ಬದಲಾಯಿತು. ಕೇವಲ ಇಂಗ್ಲಿಷ್​, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಟ್ರೇಲರ್​ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳಲಾಯಿತು. ಆಗ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಯಿತು.

ಇದನ್ನೂ ಓದಿ
Image
Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​
Image
Justin Bieber: ವೈರಸ್​ನಿಂದ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು; ಖ್ಯಾತ ಗಾಯಕನಿಗೆ ಕಾಡುತ್ತಿದೆ ಗಂಭೀರ ಸಮಸ್ಯೆ
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Image
Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

ಕನ್ನಡಿಗರು ಮೂಲ ಭಾಷೆಯಲ್ಲಿಯೇ ಎಲ್ಲ ಸಿನಿಮಾವನ್ನು ನೋಡುತ್ತಾರೆ ಎಂಬ ವಾದ ಇದೆ. ಅದನ್ನೇ ನಂಬಿಕೊಂಡು ಪರಭಾಷೆಯ ಕೆಲವು ನಿರ್ಮಾಣ ಸಂಸ್ಥೆಗಳು ತಮ್ಮ ಚಿತ್ರವನ್ನು ಕನ್ನಡಕ್ಕೆ ಡಬ್​ ಮಾಡುವುದಿಲ್ಲ. ಮಾರ್ಕೆಟ್​ ದೃಷ್ಟಿಯಿಂದ ‘ಅವತಾರ್​ 2’ ಚಿತ್ರದ ನಿರ್ಮಾಪಕರು ಕೂಡ ಹಾಗೆಯೇ ಮಾಡಿದ್ದರೆ ಅದು ಕನ್ನಡದ ಪ್ರೇಕ್ಷಕರಿಗೆ ತೋರಿದ ಅಗೌರವ ಆಗುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಅವತಾರ್​ 2’ ಚಿತ್ರದ ನಿರ್ಮಾಣ ಸಂಸ್ಥೆಯಾದ ‘20th Century Studios’ ಈಗ ಕನ್ನಡದಲ್ಲೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಡಿಸೆಂಬರ್​ 16ರಂದು ಈ ಸಿನಿಮಾದ ಕನ್ನಡ ವರ್ಷನ್​ ಕೂಡ ರಿಲೀಸ್​ ಆಗಲಿದೆ. ಯೂಟ್ಯೂಬ್​ನಲ್ಲಿ ಕನ್ನಡ ಟ್ರೇಲರ್​ ನೋಡಿದ ಪ್ರೇಕ್ಷಕರು ನಿರ್ಮಾಣ ಸಂಸ್ಥೆಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. 2000 ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Fri, 11 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ