‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  

TV9kannada Web Team

TV9kannada Web Team | Edited By: Rajesh Duggumane

Updated on: Nov 08, 2022 | 8:09 PM

2009ರಲ್ಲಿ ‘ಅವತಾರ್​’ ಸಿನಿಮಾ ತೆರೆಗೆ ಬಂತು. ಒಟ್ಟೂ ಐದು ಭಾಗಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ನಾಲ್ಕು ಭಾಗಗಳಿಗೆ ಒಟ್ಟೂ 8 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ.

‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  
ಅವತಾರ್

2009ರಲ್ಲಿ ರಿಲೀಸ್ ಆದ ‘ಅವತಾರ್​’ ಸಿನಿಮಾ (Avatar Movie) ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಚಿತ್ರ ಈವರೆಗೆ ಬಾಕ್ಸ್ ಆಫೀಸ್​ನಲ್ಲಿ ಸುಮಾರು 23 ಸಾವಿರ ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡು ಸಾವಿರ ಕೋಟಿ ಆಸುಪಾಸಿನಲ್ಲಿ ಸಿದ್ಧವಾದ ಈ ಸಿನಿಮಾ ಈ ಮಟ್ಟಕ್ಕೆ ಗಳಿಕೆ ಮಾಡಿದೆ ಎಂದರೆ ಅದು ಸಣ್ಣ ಸಾಧನೆ ಅಲ್ಲವೇ ಅಲ್ಲ. ಇದೇ ಹುಮ್ಮಸ್ಸಿನಲ್ಲಿ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್ (James Cameron) ಅವರು ‘ಅವತಾರ್ 2’ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ 16ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಬಜೆಟ್ ಬಗ್ಗೆ ಜೇಮ್ಸ್ ಮಾತನಾಡಿದ್ದಾರೆ.

2009ರಲ್ಲಿ ‘ಅವತಾರ್​’ ಸಿನಿಮಾ ತೆರೆಗೆ ಬಂತು. ಒಟ್ಟೂ ಐದು ಭಾಗಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ನಾಲ್ಕು ಭಾಗಗಳಿಗೆ ಒಟ್ಟೂ 8 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ. ‘ಅವತಾರ್​: ದಿ ವೇ ಆಫ್ ವಾಟರ್’ ಚಿತ್ರಕ್ಕೆ ಸುಮಾರು 2000 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಒಂದೊಮ್ಮೆ ಈ ಚಿತ್ರದಿಂದ ಲಾಭ ಬರದೆ ಇದ್ದರೆ ‘ಅವತಾರ್​ 3’ನಲ್ಲಿ ಕಥೆಯನ್ನು ಪೂರ್ಣಗೊಳಿಸುವ ಆಲೋಚನೆಯಲ್ಲಿ ನಿರ್ದೇಶಕರು ಇದ್ದಾರೆ.

‘ಕೊರೊನಾ ಕಾಣಿಸಿಕೊಂಡ ನಂತರ ನೋಡುಗರ ಆಲೋಚನೆ ಬದಲಾಗಿದೆ. ನಾವು ಬೇರೆ ಜಗತ್ತಿನಲ್ಲಿ ಇದ್ದೇವೆ. ಹೀಗಾಗಿ, ಅದಕ್ಕೆ ತಕ್ಕ ರೀತಿಯಲ್ಲಿ ಸಿನಿಮಾ ನೀಡಬೇಕು. ‘ಅವತಾರ್​: ದಿ ವೇ ಆಫ್ ವಾಟರ್ ಸಿನಿಮಾದ ಬಜೆಟ್ ಮಿತಿಮೀರಿ ಹೆಚ್ಚಿದೆ. ಸಿನಿಮಾಗಾಗಿ ನಾವು ಸಾಕಷ್ಟು ಸಮಯ ನೀಡಿದ್ದೇವೆ’ ಎಂದಿದ್ದಾರೆ ಜೇಮ್ಸ್.

‘ಸಿನಿಮಾ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ನಾವು ಒಂದು ಅದ್ಭುತ ಅನುಭವವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಎಂಬುದಷ್ಟೇ ಹೇಳುತ್ತಿದ್ದೇವೆ. ಒಂದೊಮ್ಮೆ ಲಾಭದಾಯಕ ಆಗಿಲ್ಲ ಎಂದರೆ, ನಾವು ಮೂರನೇ ಭಾಗಕ್ಕೆ ಸಿನಿಮಾದ ಕಥೆಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಲಾಭ ಆಗದಿದ್ದರೆ ಸೀಕ್ವೆಲ್ ಕೈಬಿಡುವ ಆಲೋಚನೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

‘ಅವತಾರ್​: ದಿ ವೇ ಆಫ್ ವಾಟರ್​’ ಚಿತ್ರದ ಅವಧಿ ಮೂರು ಗಂಟೆ 10 ನಿಮಿಷ ಇರಲಿದೆ. ಈ ಸಿನಿಮಾದಲ್ಲಿ ಹೆಚ್ಚಿನ ಪಾತ್ರಗಳು ಬರಲಿವೆ. ಈ ಕಾರಣಕ್ಕೆ ಚಿತ್ರದ ಅವಧಿ ಹೆಚ್ಚಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: Avatar 2: ಬೇರೆ ಭಾಷೆಗೆ ಕೊಟ್ಟ ಗೌರವವನ್ನು ಕನ್ನಡಕ್ಕೆ ಕೊಡಲಿಲ್ಲ ‘ಅವತಾರ್​ 2’ ಚಿತ್ರ; ಸಿಡಿದೆದ್ದ ಕನ್ನಡಿಗರು

ಇದನ್ನೂ ಓದಿ

ಐದು ಸಿನಿಮಾಗಳು ‘ಅವತಾರ’ ಸರಣಿಯಿಂದ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು.  ‘ಅವತಾರ್ 2’ ಡಿಸೆಂಬರ್ 16, ‘ಅವತಾರ್ 3’ 2024ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ‘ಅವತಾರ್ 4’ ಡಿಸೆಂಬರ್ 18, 2026ರಂದು ರಿಲೀಸ್ ಆಗುತ್ತಿದೆ. ‘ಅವತಾರ್ 5’ 2028ರ ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada