AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Avatar 2: ‘ಅವತಾರ್​ 2’ ಸಿನಿಮಾ ಟಿಕೆಟ್​ ಬುಕಿಂಗ್​ ಶುರು; ಬೆಂಗಳೂರಲ್ಲೂ ಜೋರಾಗಿದೆ ಕ್ರೇಜ್​

Avatar 2 Movie Advance Ticket Booking: ಬಹುನಿರೀಕ್ಷಿತ ‘ಅವತಾರ್​ 2’ ಚಿತ್ರದ ಅಡ್ವಾನ್ಸ್​ ಬುಕಿಂಗ್​ ಓಪನ್​ ಆಗಿದೆ. ಬೆಂಗಳೂರಿನ ಹಲವು ಪರದೆಗಳಲ್ಲಿ ಈಗಾಗಲೇ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ.

Avatar 2: ‘ಅವತಾರ್​ 2’ ಸಿನಿಮಾ ಟಿಕೆಟ್​ ಬುಕಿಂಗ್​ ಶುರು; ಬೆಂಗಳೂರಲ್ಲೂ ಜೋರಾಗಿದೆ ಕ್ರೇಜ್​
ಅವತಾರ್ 2
TV9 Web
| Edited By: |

Updated on: Nov 23, 2022 | 3:33 PM

Share

ಹಾಲಿವುಡ್​ ಸಿನಿಮಾಗಳಿಗೆ ವಿಶ್ವಾದ್ಯಂತ ಮಾರುಕಟ್ಟೆ ಇದೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬರುವ ಇಂಗ್ಲಿಷ್​ ಸಿನಿಮಾಗಳನ್ನು ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರು ಇಷ್ಟಪಡುತ್ತಾರೆ. ಈಗ ‘ಅವತಾರ್​ 2’ (Avatar 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್​ 16ರಂದು ಪ್ರಪಂಚದ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಚಿತ್ರ ಅಬ್ಬರಿಸಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವುದು ಖಚಿತ ಎಂಬುದಕ್ಕೆ ಸೂಚನೆ ಸಿಗುತ್ತಿದೆ. 24 ದಿನಗಳ ಮುನ್ನವೇ ‘ಅವತಾರ್​ 2’ ಚಿತ್ರದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್ (Avatar 2 Advance Booking)​ ಓಪನ್​ ಆಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ವೇಗವಾಗಿ ಎಲ್ಲ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿವೆ.

ಖ್ಯಾತ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರು ‘ಅವತಾರ್​ 2’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರ ಮೇಲೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಭರವಸೆ ಇದೆ. 13 ವರ್ಷಗಳ ಹಿಂದೆ ‘ಅವತಾರ್​’ ಚಿತ್ರ ತೆರೆಕಂಡು ದಾಖಲೆ ಬರೆದಿತ್ತು. ಬಳಿಕ ಆ ಚಿತ್ರಕ್ಕೆ ಸೀಕ್ವೆಲ್​ ಅನೌನ್ಸ್​ ಆಯಿತು. ಈಗ ‘ಅವತಾರ್​ 2’ ಚಿತ್ರವನ್ನು ನೋಡುವ ಸಮಯ ಹತ್ತಿರವಾಗುತ್ತಿದೆ. ಈ ಸಿನಿಮಾ ಮೇಲೆ ಜನರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಟಿಕೆಟ್​ ಬುಕಿಂಗ್​ ಆಗುತ್ತಿರುವುದೇ ಸಾಕ್ಷಿ.

ಇದನ್ನೂ ಓದಿ
Image
Avatar 2: ಕನ್ನಡಿಗರ ಒತ್ತಾಯಕ್ಕೆ ಮಣಿದ ಹಾಲಿವುಡ್​ ನಿರ್ಮಾಪಕ; ಕನ್ನಡದಲ್ಲೂ ತೆರೆ ಕಾಣಲಿದೆ ‘ಅವತಾರ್​ 2’ ಚಿತ್ರ
Image
‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  
Image
ಅಚ್ಚರಿಗಳ ಲೋಕವಾಯಿತು ‘ಅವತಾರ್ 2’ ಸಿನಿಮಾ ಟ್ರೇಲರ್; ಹೊಸ ಜಗತ್ತು ಪರಿಚಯಿಸಿದ ಜೇಮ್ಸ್ ಕ್ಯಾಮೆರಾನ್
Image
13 ವರ್ಷಗಳ ಬಳಿಕ ಬರುತ್ತಿದೆ ‘ಅವತಾರ್’ ಸೀಕ್ವೆಲ್​; ವರ್ಷಾಂತ್ಯಕ್ಕೆ ‘ಅವತಾರ್​ 2’, 2028ಕ್ಕೆ ‘ಅವತಾರ್​ 5’

ಪ್ರಪಂಚದ ಹಲವು ಭಾಷೆಗಳಿಗೆ ಡಬ್ ಆಗಿ ‘ಅವತಾರ್​ 2’ ತೆರೆಕಾಣುತ್ತಿದೆ. ಭಾರತದಲ್ಲಿ ಹಿಂದಿ, ಇಂಗ್ಲಿಷ್​, ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ. ಕನ್ನಡದಲ್ಲಿ ರಿಲೀಸ್​ ಮಾಡಲು ನಿರ್ಮಾಣ ಸಂಸ್ಥೆ ಹಿಂದೇಟು ಹಾಕಿತ್ತು. ಆದರೆ ಕರ್ನಾಟಕದಲ್ಲಿನ ಪ್ರೇಕ್ಷಕರಿಂದ ಕಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡದಲ್ಲೂ ಈಗ ಬಿಡುಗಡೆ ಮಾಡಲಾಗುತ್ತಿದೆ.

3ಡಿ, ಇಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ನಗಳಲ್ಲಿ ‘ಅವತಾರ್​ 2’ ಪ್ರದರ್ಶನ ಆಗಲಿದೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವಲ್ಲಿ ಫೇಮಸ್​ ಆದವರು ಜೇಮ್ಸ್​ ಕ್ಯಾಮೆರಾನ್​. ದಶಕಗಳ ಹಿಂದೆಯೇ ಅವರು ದೊಡ್ಡ ಪರದೆಯಲ್ಲಿ ಜಾದೂ ಮಾಡಿದ್ದರು. ಈಗ ಅವರು ಪ್ರೇಕ್ಷಕರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಟ್ರೇಲರ್​ ಗಮನ ಸೆಳೆದಿದೆ. ಫೈನಲ್​ ಟ್ರೇಲರ್​ ಕೂಡ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕೌತುಕ ಹೆಚ್ಚಿಸಿದೆ.

24 ದಿನಗಳಿಗೂ ಮುನ್ನವೇ ‘ಅವತಾರ್​ 2’ ಚಿತ್ರದ ಅಡ್ವಾನ್ಸ್​ ಬುಕಿಂಗ್​ ಓಪನ್​ ಆಗಿದೆ. ಬೆಂಗಳೂರಿನ ಹಲವು ಪರದೆಗಳಲ್ಲಿ ಈಗಾಗಲೇ ಟಿಕೆಟ್​ ಸೋಲ್ಟ್​ ಔಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ