‘ಅವತಾರ್ 2’ ಚಿತ್ರವನ್ನು ಕೇವಲ 200 ರೂಪಾಯಿಗೆ ನೋಡಬಹುದು; ಹೊಸ ನಿಯಮ ಜಾರಿಗೆ ತರಲು ಚಿಂತನೆ

Avatar: The way of Water: ಸಿನಿಮಾ ದಿನ ಆಚರಣೆ ವೇಳೆ ಟಿಕೆಟ್ ದರವನ್ನು 75 ರೂಪಾಯಿ ನಿಗದಿ ಮಾಡಲಾಯಿತು. ಆ ದಿನ ಬಹುತೇಕ ಮಲ್ಟಿಪ್ಲೆಕ್ಸ್​ಗಳು ತುಂಬಿ ತುಳುಕಿದವು. ಈಗ ಇದೇ ತಂತ್ರವನ್ನು ‘ಅವತಾರ್​ 2’ ಮಾಡಲು ಹೊರಟಿದೆ.

‘ಅವತಾರ್ 2’ ಚಿತ್ರವನ್ನು ಕೇವಲ 200 ರೂಪಾಯಿಗೆ ನೋಡಬಹುದು; ಹೊಸ ನಿಯಮ ಜಾರಿಗೆ ತರಲು ಚಿಂತನೆ
ಅವತಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 27, 2022 | 7:13 AM

‘ಅವತಾರ್​: ದಿ ವೇ ಆಫ್​ ವಾಟರ್​’ (Avatar: The way of Water) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಹೊಸ ಜಗತ್ತನ್ನೇ ತೆರೆದಿಟ್ಟಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಅವತಾರ್ 2ಭಾರತದ ಬಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟಾರೆ ಚಿತ್ರದ ಕಲೆಕ್ಷನ್ 7000 ಸಾವಿರ ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಈ ಮೂಲಕ ಸಿನಿಮಾ ಶೀಘ್ರವೇ 1 ಬಿಲಿಯನ್ ಡಾಲರ್ ಗಳಿಕೆ ಮಾಡಲಿದೆ. ಈಗ ಭಾರತದಲ್ಲಿ ಈ ಸಿನಿಮಾದ ಟಿಕೆಟ್ ದರ ಇಳಿಸಲು ಡಿಸ್ನಿ (Disney) ಚಿಂತನೆ ನಡೆಸಿದೆ ಎನ್ನಲಾಗಿದೆ. ಸೋಮವಾರದಿಂದ ಈ ನಿಯಮ ಜಾರಿಗೆ ಬರುವ ಸೂಚನೆ ಇದೆ.

ಜನರು ಚಿತ್ರಮಂದಿರಕ್ಕೆ ಬರದೆ ಇರಲು ಟಿಕೆಟ್ ದರ ಹೆಚ್ಚಳವೇ ಕಾರಣ ಎಂಬುದು ಅನೇಕರ ವಾದ. ಇದನ್ನು ಒಪ್ಪುವ ಘಟನೆ ಕೂಡ ನಡೆಯಿತು. ಸಿನಿಮಾ ದಿನ ಆಚರಣೆ ವೇಳೆ ಟಿಕೆಟ್ ದರವನ್ನು 75 ರೂಪಾಯಿ ನಿಗದಿ ಮಾಡಲಾಯಿತು. ಆ ದಿನ ಬಹುತೇಕ ಮಲ್ಟಿಪ್ಲೆಕ್ಸ್​ಗಳು ತುಂಬಿ ತುಳುಕಿದವು. ಆ ಸಂದರ್ಭದಲ್ಲಿ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ಇದೇ ತಂತ್ರವನ್ನು ‘ಅವತಾರ್​ 2’ ಮಾಡಲು ಹೊರಟಿದೆ.

ಸದ್ಯ ಹಲವು ಚಿತ್ರಮಂದಿರಗಳಲ್ಲಿ ‘ಅವತಾರ್ 2’ ಟಿಕೆಟ್ ದರ ಕೈಗೆಟಕುವ ರೀತಿಯಲ್ಲಿ ಇಲ್ಲ. ವಾರದ ದಿನಗಳಲ್ಲೂ ‘ಅವತಾರ್ 2’ ಚಿತ್ರದ ಟಿಕೆಟ್ ಬೆಲೆ 300ರಿಂದ ಆರಂಭವಾಗಿ 1000 ರೂಪಾಯಿವರೆಗೆ ಇದೆ. ಇದರಿಂದ ಅನೇಕರು ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಹೀಗಾಗಿ 3ಡಿ ವರ್ಷನ್​ನ ಟಿಕೆಟ್ ದರವನ್ನು 150 ರೂಪಾಯಿಗೆ ಇಳಿಕೆ ಮಾಡಿ, 3ಡಿ ಗ್ಲಾಸ್​ಗೆ ಹೆಚ್ಚುವರಿಯಾಗಿ 20ರಿಂದ 50 ರೂಪಾಯಿ ಮಾತ್ರ ಚಾರ್ಜ್​ ಮಾಡುವಂತೆ ತನ್ನ ಸ್ಥಳೀಯ ಹಂಚಿಕೆದಾರರಿಗೆ ಡಿಸ್ನಿ ಸೂಚನೆ ನೀಡುವ ಸಾಧ್ಯತೆ ಇದೆ. ಇದರಿಂದ 200 ರೂಪಾಯಿಗೆ ‘ಅವತಾರ್​: ದಿ ವೇ ಆಫ್ ವಾಟರ್​’ ಸಿನಿಮಾ ವೀಕ್ಷಿಸಬಹುದು.

ಇದನ್ನೂ ಓದಿ
Image
Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ
Image
Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ
Image
Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು
Image
‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  

ಇದನ್ನೂ ಓದಿ: BBK 9 FInale: ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​​; ಈ ಬಾರಿ ಭಾನುವಾರ ನಡೆಯಲ್ಲ ಫಿನಾಲೆ

ಹೀಗಾದಲ್ಲಿ ವಾರದ ದಿನಗಳಲ್ಲೂ ‘ಅವತಾರ್​: ದಿ ವೇ ಆಫ್​ ವಾಟರ್​’ ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಕ್ಕೆ ಬರಲಿದ್ದಾರೆ. ಇದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚಲಿದೆ. ಈಗಾಗಲೇ ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ 300 ಕೋಟಿ ರೂಪಾಯಿ ತಲುಪಿದೆ. ಕ್ರಿಸ್​ಮಸ್​ ಸಂದರ್ಭದಲ್ಲಿ ಬಂದಿರುವುದರಿಂದ ಚಿತ್ರಕ್ಕೆ ಹೆಚ್ಚು ಲಾಭ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ