Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ

James Cameron Meets SS Rajamouli: ಹತ್ತು ನಿಮಿಷಗಳ ಕಾಲ ರಾಜಮೌಳಿ ಮತ್ತು ಜೇಮ್ಸ್​ ಕ್ಯಾಮೆರಾನ್​ ಮಾತುಕತೆ ನಡೆಸಿದ್ದಾರೆ. ಈ ವೇಳೆ ‘ಆರ್​ಆರ್​ಆರ್​’ ಚಿತ್ರವನ್ನು ಜೇಮ್ಸ್​ ಕ್ಯಾಮೆರಾನ್ ಹೊಗಳಿದ್ದಾರೆ. ಈ ಭೇಟಿಯಿಂದ ರಾಜಮೌಳಿಗೆ ತುಂಬ ಖುಷಿ ಆಗಿದೆ.

Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ
ಜೇಮ್ಸ್ ಕ್ಯಾಮೆರಾನ್, ರಾಜಮೌಳಿ
Follow us
ಮದನ್​ ಕುಮಾರ್​
|

Updated on:Jan 21, 2023 | 4:34 PM

ನಿರ್ದೇಶಕ ಎಸ್​ಎಸ್​ ರಾಜಮೌಳಿ (SS Rajamouli) ಅವರು ಈಗ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ಅವರ ‘ಆರ್​ಆರ್​ಆರ್​’ ಸಿನಿಮಾ (RRR Movie) ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುತ್ತ ಸದ್ದು ಮಾಡುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭಗಳ ಸಲುವಾಗಿ ಅಮೆರಿಕಕ್ಕೆ ತೆರಳಿರುವ ರಾಜಮೌಳಿ ಮತ್ತು ಅವರ ತಂಡದವರು ಅಲ್ಲಿನ ಅನೇಕ ದಿಗ್ಗಜ ನಿರ್ದೇಶಕರನ್ನು ಭೇಟಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಸ್ಟೀವನ್​ ಸ್ಪೀಲ್​ಬರ್ಗ್​ ಅವರನ್ನು ರಾಜಮೌಳಿ ಭೇಟಿ ಆಗಿದ್ದರು. ಈಗ ಜೇಮ್ಸ್​ ಕ್ಯಾಮೆರಾನ್​ (James Cameron) ಅವರನ್ನು ಭೇಟಿ ಆಗುವ ಅವಕಾಶ ರಾಜಮೌಳಿಗೆ ಸಿಕ್ಕಿದೆ. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಜೇಮ್ಸ್ ಕ್ಯಾಮೆರಾನ್​ ಎಂದರೆ ವಿಶ್ವದ ಅಸಂಖ್ಯಾತ ಸಿನಿಮಾ ಮಂದಿಗೆ ಸ್ಫೂರ್ತಿ. ರಾಜಮೌಳಿ ಅವರಿಗೂ ಈ ನಿರ್ದೇಶಕನನ್ನು ಕಂಡರೆ ಎಲ್ಲಿಲ್ಲದ ಅಭಿಮಾನ. ಈ ಇಬ್ಬರು ಘಟಾನುಘಟಿಗಳು ಭೇಟಿ ಆಗಿದ್ದನ್ನು ನೋಡುವುದೇ ಅಭಿಮಾನಿಗಳ ಪಾಲಿನ ಸಂಭ್ರಮ. ‘ಟರ್ಮಿನೇಟರ್​’, ‘ಟೈಟಾನಿಕ್’, ‘ಅವತಾರ್​’, ‘ಅವತಾರ್​ 2’ ಮುಂತಾದ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡ ಜೇನ್ಸ್​ ಕ್ಯಾಮೆರಾನ್​ ಅವರಿಗೆ ‘ಆರ್​ಆರ್​ಆರ್​’ ಚಿತ್ರ ಸಖತ್​ ಇಷ್ಟ ಆಗಿದೆ. ಅವರು ಈ ಸಿನಿಮಾವನ್ನು 2 ಬಾರಿ ನೋಡಿದ್ದಾರೆ!

ಇದನ್ನೂ ಓದಿ
Image
SS Rajamouli: ​ಅಮೆರಿಕಾದಲ್ಲಿ ‘ಆರ್​ಆರ್​ಆರ್’ಗೆ ವಿಶೇಷ ಮನ್ನಣೆ: ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
Image
Rajamouli: ‘ಸ್ಟಾರ್​ ವಾರ್ಸ್​’ ನಿರ್ದೇಶಕನ ಭೇಟಿ ಆದ ರಾಜಮೌಳಿ; ಹಾಲಿವುಡ್​ ಅಂಗಳದಲ್ಲೂ ಭರ್ಜರಿ ಹವಾ
Image
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
Image
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ

ಇದನ್ನೂ ಓದಿ: SS Rajamouli: ‘RRR ಬಾಲಿವುಡ್​ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ

ರಾಜಮೌಳಿ ಅವರನ್ನು ಭೇಟಿ ಆದಾಗ ‘ಆರ್​ಆರ್​ಆರ್​’ ಸಿನಿಮಾದ ಬಗ್ಗೆ ಜೇಮ್ಸ್​ ಕ್ಯಾಮೆರಾನ್​ ಅವರು ವಿವರವಾಗಿ ಮಾತನಾಡಿದ್ದಾರೆ. ಈ ಚಿತ್ರವನ್ನು ಕಟ್ಟಿಕೊಟ್ಟ ರೀತಿ ತಮಗೆ ಇಷ್ಟವಾಯಿತು ಎಂದು ಅವರು ತಿಳಿಸಿದ್ದಾರೆ. ಹಾಲಿವುಡ್​ನ ದಿಗ್ಗಜ ನಿರ್ದೇಶಕ ‘ಆರ್​ಆರ್​ಆರ್​’ ಸಿನಿಮಾವನ್ನು ಇಷ್ಟು ಸೂಕ್ಷ್ಮವಾಗಿ ಗ್ರಹಿಸಿದ್ದಕ್ಕೆ ರಾಜಮೌಳಿ ಅವರಿಗೆ ಸಖತ್​ ಖುಷಿ ಆಗಿದೆ. ಎಂಎಂ ಕೀರವಾಣಿ ಅವರ ಸಂಗೀತದ ಬಗ್ಗೆಯೂ ಜೇಮ್ಸ್​ ಕ್ಯಾಮೆರಾನ್​ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Vijayendra Prasad: ‘ನಾನು ಕಥೆ ಕದಿಯುತ್ತೇನೆ’; ಯಶಸ್ಸಿನ ರಹಸ್ಯ ಬಿಚ್ಚಿಟ್ಟ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​

ಎಲ್ಲಕ್ಕಿಂತ ಅಚ್ಚರಿ ಏನೆಂದರೆ, ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ಜೇಮ್ಸ್​ ಕ್ಯಾಮೆರಾನ್​ ಅಹ್ವಾನ ನೀಡಿದ್ದಾರೆ! ಹತ್ತು ನಿಮಿಷಗಳ ಕಾಲ ರಾಜಮೌಳಿ ಮತ್ತು ಜೇಮ್ಸ್​ ಕ್ಯಾಮೆರಾನ್​ ಮಾತುಕತೆ ನಡೆಸಿದ್ದಾರೆ. ಈ ಭೇಟಿಯಿಂದ ರಾಜಮೌಳಿ ಅವರಿಗೆ ತುಂಬ ಖುಷಿ ಆಗಿದೆ. ಹಾಲಿವುಡ್​ನಲ್ಲಿ ಸಿನಿಮಾ ಮಾಡುವಂತೆ ರಾಜಮೌಳಿಗೆ ಜೇಮ್ಸ್​ ಕ್ಯಾಮೆರಾನ್​ ಪ್ರೋತ್ಸಾಹ ನೀಡಿದ್ದಾರೆ. ‘ಎಂದಾದರೂ ನೀವು ಇಲ್ಲಿ ಸಿನಿಮಾ ಮಾಡುವುದಾದರೆ, ಬನ್ನಿ ಮಾತನಾಡೋಣ’ ಎಂದು ಅವರು ಆಹ್ವಾನ ನೀಡಿದ್ದಾರೆ.

View this post on Instagram

A post shared by RRR Movie (@rrrmovie)

ಈ ಖುಷಿಯ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ‘ಆರ್​ಆರ್​ಆರ್​’ ತಂಡ ಹಂಚಿಕೊಂಡಿದೆ. ರಾಜಮೌಳಿ ಅವರು ಆದಷ್ಟು ಬೇಗ ಹಾಲಿವುಡ್​ನಲ್ಲಿ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Sat, 21 January 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ