Jio Cinema: ಜಿಯೋ ಸಿನಿಮಾದಲ್ಲಿ ‘ಇನ್‌ಸ್ಟೆಕ್ಟರ್ ಅವಿನಾಶ್’ ಚಿತ್ರ; ಇದರಲ್ಲಿದೆ ರಿಯಲ್ ಕಹಾನಿ
Inspector Avinash: ಮೇ 18ರಂದು ಈ ಸಿನಿಮಾ ಉಚಿತವಾಗಿ ಬಿತ್ತರ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ. ರಣದೀಪ್ ಹೂಡ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಮೊದಲ ಲಾಕ್ ಡೌನ್ ಬಳಿಕ ಪ್ರೇಕ್ಷಕರಲ್ಲಿ ಒಟಿಟಿ (OTT) ಬಳಕೆ ಜಾಸ್ತಿ ಆಯಿತು. ಹಲವು ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಹೊಸ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಮೂಲಕ ಜನರನ್ನು ಸೆಳೆಯಲು ಎಲ್ಲ ಒಟಿಟಿಗಳು ಪ್ರಯತ್ನಿಸುತ್ತಿವೆ. ಈ ಸಾಲಿಗೆ ‘ಜಿಯೋ ಸಿನಿಮಾ’ ಕೂಡ ಸೇರ್ಪಡೆ ಆಗಿದೆ. ಇದರಲ್ಲಿ ಹಲವು ಸಿನಿಮಾಗಳು ಲಭ್ಯವಾಗಿವೆ. ಈಗ ಹೊಸದೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ವಿಕ್ರಮ್ ವೇದ’ ಸಿನಿಮಾದ ಪ್ರೀಮಿಯರ್ ನಂತರ, ಜಿಯೋ ಸಿನಿಮಾ ಈಗ ಥ್ರಿಲ್ಲಿಂಗ್ ಆ್ಯಕ್ಷನ್ ಡ್ರಾಮಾ ‘ಇನ್‌ಸ್ಟೆಕ್ಟರ್ ಅವಿನಾಶ್’ (Inspector Avinash) ಚಿತ್ರದ ಪ್ರೀಮಿಯರ್ಗೆ ಸಜ್ಜಾಗಿದೆ. ಪ್ರತಿಭಾವಂತ ನಟ ರಣದೀಪ್ ಹೂಡಾ (Randeep Hooda) ಅವರು ಈ ಸಿನಿಮಾದಲ್ಲಿ ಇನ್‌ಸ್ಟೆಕ್ಟರ್ ಅವಿನಾಶ್ ಆಗಿ ಕಾಣಿಸಿಕೊಂಡಿದ್ದಾರೆ. ನೀರಜ್ ಪಾಠಕ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಊರ್ವಶಿ ರೌಟೇಲ, ಅಮಿತ್ ಸೈಲ್, ಅಭಿಮನ್ಯು ಸಿಂಘ್, ಶಲಿನ್ ಬನೋಟ್, ಫ್ರೆಡ್ಡಿ ದಾರುವಾಲಾ, ರಾಹುಲ್ ಮಿತ್ರಾ ಮತ್ತು ಅಧ್ಯಾಯನ್ ಸುಮನ್ ಅವರು ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಅವಿನಾಶ್ ಮಿಶ್ರಾ ಅವರು ಅಪರಾಧಗಳ ವಿರುದ್ಧ ನಡೆಸಿದ ಹೋರಾಟದಿಂದ ಪ್ರೇರಿತವಾಗಿ ಈ ಸಿನಿಮಾ ಮೂಡಿಬಂದಿದೆ.
ಉತ್ತರ ಪ್ರದೇಶದಲ್ಲಿ 90ರ ದಶಕದಲ್ಲಿ ಇದ್ದ ಪಾತಕ ಮತ್ತು ಭ್ರಷ್ಟಾಚಾರದ ಜಗತ್ತನ್ನು ಪ್ರೇಕ್ಷಕರಿಗೆ ಈ ಸಿನಿಮಾ ಪರಿಚಯಿಸುತ್ತದೆ. ಮಾಫಿಯಾ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಯ ವಿರುದ್ಧ ಧೈರ್ಯ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಅವಿನಾಶ್ ಮಿಶ್ರ ಅವರು ತಮ್ಮ ತಂಡದೊಂದಿಗೆ ಹೋರಾಡುವ ಕಥೆಯನ್ನು ಈ ಸಿನಿಮಾ ವಿವರಿಲಿದೆ. ಜಿಯೋ ಸ್ಟೂಡಿಯೋಸ್ ಮತ್ತು ಗೋಲ್ಡ್ ಮೌಂಟೇನ್ ಪಿಕ್ಚರ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿವೆ.
‘ಇನ್‌ಸ್ಟೆಕ್ಟರ್ ಅವಿನಾಶ್’ ಚಿತ್ರದ ಕಥೆ ಏನು?
ಅಪರಾಧರಹಿತ ರಾಜ್ಯವನ್ನಾಗಿಸಲು ಇನ್‌ಸ್ಟೆಕ್ಟರ್ ಅವಿನಾಶ್, ತನ್ನ ಅದ್ಭುತ ಸಂಪರ್ಕಜಾಲವಾದ ‘ಮಾಯಾಜಾಲ’ದ ಮೂಲಕ ಹೋರಾಡುವುದನ್ನು ಈ ಸಿನಿಮಾ ತೋರಿಸುತ್ತದೆ. ಭ್ರಷ್ಟ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಹೋರಾಡುವ ಪೊಲೀಸ್ ಅಧಿಕಾರಿಗೆ ಎದುರಾಗುವ ಅಡೆತಡೆಗಳು ಮತ್ತು ಅದನ್ನು ಎದುರಿಸಿ ಗ್ಯಾಂಗ್ಸ್ಟರ್ಗಳ ಜೊತೆಗೆ ಹೋರಾಡುವ ಅವನ ಶೌರ್ಯ, ತ್ಯಾಗ ಮತ್ತು ಅಪಾಯಗಳನ್ನು ಈ ಸಿನಿಮಾ ಕಟ್ಟಿಕೊಡುತ್ತದೆ.
ಇದನ್ನೂ ಓದಿ: ಜಿಯೋಸಿನಿಮಾದಲ್ಲಿ 1,300 ಕೋಟಿಗೂ ಅಧಿಕ ಐಪಿಎಲ್ ವಿಡಿಯೋಗಳ ವೀಕ್ಷಣೆ! ಟಾಟಾ ಐಪಿಎಲ್ 2023 ಮೊದಲ 5 ವಾರಗಳಲ್ಲಿ ಭರ್ಜರಿ ದಾಖಲೆ!
ಮೇ 18ರಂದು ಈ ಸಿನಿಮಾ ಉಚಿತವಾಗಿ ಬಿತ್ತರ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ. ರಣದೀಪ್ ಹೂಡ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಒಬ್ಬ ನಟನಾಗಿ ನನಗೆ ಯಾವಾಗಲೂ ನೈಜ ಬದುಕಿನ ಎಲೆಮರೆಯ ಹೀರೊಗಳ ಕಥೆಗಳು ಆಸಕ್ತಿ ಹುಟ್ಟಿಸುತ್ತವೆ. ಭಾರತದ ನೆಲದ ಕಥೆಗಳನ್ನು, ನಮ್ಮ ಜನರ ಹೋರಾಟ ಮತ್ತು ವಿಜಯಗಳನ್ನು ಚಿತ್ರಿಸುವ ಕಥೆಗಳನ್ನು ಹೇಳುವುದು ತುಂಬ ಮುಖ್ಯ. ಅಪರಾಧಗಳ ವಿರುದ್ಧ ಹೋರಾಡುವ, ಸತ್ಯದ ಪರ ನಿಲ್ಲುವ ಮಿಶ್ರಾ ಅವರ ಜೀವನದ ಕಥೆ ಆಧುನಿಕ ಕಾಲದ ರಾಬಿನ್‌ಹುಡ್ ಕಥೆಗಿಂತ ಏನೂ ಕಡಿಮೆ ಇಲ್ಲ’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.