ಜಿಯೋಸಿನಿಮಾದಲ್ಲಿ 1,300 ಕೋಟಿಗೂ ಅಧಿಕ ಐಪಿಎಲ್ ವಿಡಿಯೋಗಳ ವೀಕ್ಷಣೆ! ಟಾಟಾ ಐಪಿಎಲ್ 2023 ಮೊದಲ 5 ವಾರಗಳಲ್ಲಿ ಭರ್ಜರಿ ದಾಖಲೆ!
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.
ಮುಂಬೈ, ಮೇ 11: ಟಾಟಾ ಐಪಿಎಲ್ 2023ರ (IPL 2023) ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋಸಿನಿಮಾ, ಡಿಜಿಟಲ್ ಕ್ರೀಡಾ ವೀಕ್ಷಣೆಯ (IPL Broadcasting) ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದನ್ನು ಮುಂದುವರಿಸಿದೆ. ಟಾಟಾ ಐಪಿಎಲ್ 2023ರ ಮೊದಲ ಐದು ವಾರಗಳಲ್ಲಿ ಜಿಯೋಸಿನಿಮಾದಲ್ಲಿ 1,300 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಮಾಡಲಾಗಿದೆ. ಜಿಯೋಸಿನಿಮಾದ ಅಭಿಮಾನಿ-ಕೇಂದ್ರಿತ ಪ್ರಸ್ತುತಿಯಿಂದಾಗಿ ವೀಕ್ಷಕರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಅಂಟಿಕೊಂಡಿದ್ದಾರೆ ಮತ್ತು ಪ್ರತಿ ವೀಕ್ಷಕರ ಸರಾಸರಿ ವೀಕ್ಷಣೆ ಸಮಯ 60 ನಿಮಿಷಗಳನ್ನು ತಲುಪಿದೆ. ಟಾಟಾ ಐಪಿಎಲ್ 2023 ಎಚ್ಡಿ ಟಿವಿಗಿಂತ ಕನೆಕ್ಟೆಡ್ ಟಿವಿಯಲ್ಲಿ ಎರಡು ಪಟ್ಟು ಹೆಚ್ಚು ವೀಕ್ಷಕರನ್ನು ತಲುಪಲು ಸಾಧ್ಯವಾಗಿದೆ.
‘ಜಿಯೋಸಿನಿಮಾ ಪ್ರತಿ ವಾರ ಶಕ್ತಿಯುತವಾಗಿ ಬೆಳೆಯುತ್ತಲೇ ಇದೆ ಮತ್ತು ಗ್ರಾಹಕರು ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಡಿಜಿಟಲ್ ಫ್ಲಾಟ್‌ಫಾರ್ಮ್ಅನ್ನು ತಮ್ಮ ಮೊದಲ ಆಯ್ಕೆಯಾಗಿ ಮಾಡಿಕೊಂಡಿರುವುದರಿಂದ ಇದು ಸಾಧ್ಯವಾಗಿದೆ. ಅತ್ಯುತ್ತಮ ಕ್ರಿಕೆಟ್ ಆಕ್ಷನ್ಗಳ ಸಂಯೋಜನೆ ಮತ್ತು ಉತ್ತಮ ಆರಂಭಿಕ ವಾರಾಂತ್ಯವು ಮುಂಬರುವ ದೊಡ್ಡ ವಿಷಯಗಳ ಪ್ರಾರಂಭವಾಗಿದೆ ಎಂಬ ನಮ್ಮ ಬಲವಾದ ನಂಬಿಕೆಯನ್ನು ಸಾಬೀತುಪಡಿಸಿದೆ. ನಾವು ಪ್ರತಿ ಅಭಿಮಾನಿಗಳಿಗೆ ಟಾಟಾ ಐಪಿಎಲ್ ವೀಕ್ಷಣೆಯ ಅನುಭವವನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತಿರುವಾಗ ನಮ್ಮಲ್ಲಿ ಇಟ್ಟಿರುವ ನಂಬಿಕೆಗಾಗಿ ನಮ್ಮ ಎಲ್ಲಾ ಪ್ರಾಯೋಜಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ’ ಎಂದು ವಯಾಕಾಮ್18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
ಜಿಯೋಸಿನಿಮಾ ಐದು ದಿನಗಳ ಅವಧಿಯಲ್ಲಿ ಟಾಟಾ ಐಪಿಎಲ್ನ ಗರಿಷ್ಠ ವೀಕ್ಷಣೆಯ ದಾಖಲೆಯನ್ನು ಎರಡು ಬಾರಿ ಮುರಿದಿದೆ. ಏಪ್ರಿಲ್ 12ರಂದು ನಡೆದ ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ಗರಿಷ್ಠ 2.23 ಕೋಟಿ ಜನರ ವೀಕ್ಷಣೆ ದಾಖಲಾಗಿತ್ತು. ಐದು ದಿನಗಳ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ಕಿಂಗ್ಸ್ ನಡುವೆ ಬೆಂಗಳೂರಿನಲ್ಲಿ ನಡೆದ ಪಂದ್ಯದ ಸಮಯದಲ್ಲಿ ಜಿಯೋಸಿನಿಮಾದಲ್ಲಿ ಮತ್ತೆ ಗರಿಷ್ಠ 2.4 ಕೋಟಿ ಜನರ ವೀಕ್ಷಣೆಯ ತನ್ನದೇ ಆದ ಹೊಸ ದಾಖಲೆ ಸೃಷ್ಟಿಯಾಗಿತ್ತು.
ಕ್ರಿಕೆಟ್ ಪ್ರೇಮಿಗಳ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ಜಿಯೋಸಿನಿಮಾ, 360-ಡಿಗ್ರಿ ವೀಕ್ಷಣೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಇನ್ನಷ್ಟು ಸಂತೋಷಪಡಿಸಿದೆ. ಈ ಮೂಲಕ ಅಭಿಮಾನಿಗಳನ್ನು ಡಿಜಿಟಲ್ ವೇದಿಕೆಯಲ್ಲಿ ಹಿಡಿದಿಡುವ ಶಕ್ತಿಯನ್ನು ಪ್ರದರ್ಶಿಸಿದೆ. ವೀಕ್ಷಕರು ಕನ್ನಡ, ಭೋಜ್‌ಪುರಿ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಸೇರಿದಂತೆ ವಿವಿಧ ಭಾಷಾ ಫೀಡ್ಗಳನ್ನು ಆನಂದಿಸಿದ್ದಾರೆ ಮತ್ತು ಮಲ್ಟಿ-ಕ್ಯಾಮ್, 4ಕೆ, ಹೈಪ್ ಮೋಡ್‌ನಂಥ ಡಿಜಿಟಲ್ ವೈಶಿಷ್ಟ್ಯಗಳನ್ನೂ ಸಂಭ್ರಮಿಸಿದ್ದಾರೆ. ಜೊತೆಗೆ, ವೀಕ್ಷಕರಿಗೆ ಹಲವು ವಿಶೇಷವಾದ ಕಂಟೆಂಟ್ಗಳನ್ನೂ ನೀಡಲಾಗುತ್ತಿದೆ. ಪ್ರಮುಖ ಐಪಿಎಲ್ ತಂಡಗಳೊಂದಿಗೆ ಪಾಲುದಾರಿಕೆಯ ಮೂಲಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಫಾಫ್ ಡು ಪ್ಲೆಸಿಸ್, ರಶೀದ್ ಖಾನ್, ಡೇವಿಡ್ ಮಿಲ್ಲರ್ ಅವರಂಥ ಸ್ಟಾರ್ ಆಟಗಾರರೊಂದಿಗೆ ಸಂದರ್ಶನಗಳು, ವಿವಿಧ ಪಂದ್ಯಗಳ ಪ್ರಮುಖಾಂಶಗಳನ್ನು ಒದಗಿಸಲಾಗುತ್ತಿದೆ.
ಜಿಯೋಸಿನಿಮಾದಲ್ಲಿ ಜಾಹೀರಾತುದಾರರ ಸಂಖ್ಯೆಯು ಸಹ ಹೊಸ ದಾಖಲೆಯಾಗಿದೆ. ಅಲ್ಲದೆ, ಈ ಅವಧಿಯಲ್ಲಿ ದಾಖಲಾದ ಆದಾಯವೂ ಕಳೆದ ವರ್ಷಕ್ಕೆ ಹೋಲಿಸಿದರೆ ದಾಖಲೆಯ ಮಟ್ಟ ತಲುಪಿದೆ. ಡಿಜಿಟಲ್ ಬ್ಯಾಂಡ್‌ವ್ಯಾಗನ್‌ಗೆ ಸೇರಿರುವ ಬ್ರ್ಯಾಂಡ್‌ಗಳ ಪಟ್ಟಿಯು ಇನ್ನಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.
ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್ಪೆ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಇಝಿಯೊ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 2023ರ ಆವೃತ್ತಿಗೆ ಮುಂಚಿತವಾಗಿಯೇ ಜಿಯೋಸಿನಿಮಾದೊಂದಿಗೆ ವಿಶೇಷ ಪಾಲುದಾರಿಕೆಯನ್ನು ಘೋಷಿಸಿದ್ದವು. ಗ್ಲೋಬಲ್ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್, ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಮತ್ತು ನಾಲ್ಕು ಬಾರಿಯ ಐಪಿಎಲ್ ವಿಜೇತ ಎಂಎಸ್ ಧೋನಿ, ವಿಶ್ವ ನಂ. 1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದನಾ ಅವರು ವಿಶ್ವ ದರ್ಜೆಯ ಡಿಜಿಟಲ್-ಫಸ್ಟ್ ಟಾಟಾ ಐಪಿಎಲ್ ಪ್ರಸ್ತುತಿಯನ್ನು ಹೆಚ್ಚಿಸಲು ಜಿಯೋಸಿನಿಮಾದೊಂದಿಗೆ ಕೈ ಜೋಡಿಸಿದ್ದಾರೆ.
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Thu, 11 May 23