Niveditha Gowda: ನೀರಿನೊಳಗೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ರೊಮ್ಯಾನ್ಸ್​; ವೈರಲ್​ ವಿಡಿಯೋ ನೋಡಿ ಜನ ಹೇಳಿದ್ದೇನು?

Niveditha Gowda Reels: ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರ ಈ ವಿಡಿಯೋ ವೈರಲ್​ ಆಗಿದೆ. ಅಂಡರ್​ ವಾಟರ್​ ಶೂಟ್​ ಮಾಡಿರುವ ಅವರಿಬ್ಬರು ಪರಸ್ಪರ ಆಪ್ತವಾಗಿ ನಡೆದುಕೊಂಡಿದ್ದಾರೆ.

Niveditha Gowda: ನೀರಿನೊಳಗೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ರೊಮ್ಯಾನ್ಸ್​; ವೈರಲ್​ ವಿಡಿಯೋ ನೋಡಿ ಜನ ಹೇಳಿದ್ದೇನು?
ಚಂದನ್​ ಶೆಟ್ಟಿ, ನಿವೇದಿತಾ ಗೌಡ
Follow us
ಮದನ್​ ಕುಮಾರ್​
|

Updated on: Jun 01, 2023 | 5:07 PM

ಚಂದನವನದಲ್ಲಿ ನಟಿ ನಿವೇದಿತಾ ಗೌಡ ಹಾಗೂ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರದ್ದು ಕ್ಯೂಟ್​ ಜೋಡಿ. ಬಿಗ್​ ಬಾಸ್​ ಶೋನಲ್ಲಿ ಪರಿಚಯವಾದ ಅವರು ನಂತರ ಪರಸ್ಪರ ಪ್ರೀತಿಸಿ ಮದುವೆಯಾದರು. ಇಬ್ಬರೂ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ನಿವೇದಿತಾ ಗೌಡ (Niveditha Gowda) ಅವರು ಸುದ್ದಿ ಆಗುತ್ತಾರೆ. ಹಲವು ಬಗೆಯ ರೀಲ್ಸ್​ ಮಾಡಿ ಅವರು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಕಲರ್​ಫುಲ್​ ಆಗಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಾರೆ. ಪ್ರತಿ ಬಾರಿ ಅವರನ್ನು ಕೆಲವರು ಟ್ರೋಲ್​ ಮಾಡುತ್ತಾರೆ. ಹಾಗಂತ ಟ್ರೋಲ್​ಗಳಿಗೆ ನಿವೇದಿತಾ ಗೌಡ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಈಗ ಅವರೊಂದು ಹೊಸ ವಿಡಿಯೋ (Underwater Reels) ಹಂಚಿಕೊಂಡಿದ್ದಾರೆ. ನೀರಿನ ಒಳಗೆ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಅವರು ರೊಮ್ಯಾಂಟಿಕ್​ ಆಗಿ ಕಾಲ ಕಳೆದಿದ್ದಾರೆ. ಇದನ್ನು ಕಂಡು ನೆಟ್ಟಿಗರು ವಿಧವಿಧವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರ ಈ ವಿಡಿಯೋ ವೈರಲ್​ ಆಗಿದೆ. ಅಂಡರ್​ ವಾಟರ್​ ಶೂಟ್​ ಮಾಡಿರುವ ಅವರಿಬ್ಬರು ಪರಸ್ಪರ ಆಪ್ತವಾಗಿ ನಡೆದುಕೊಂಡಿದ್ದಾರೆ. ಇಬ್ಬರೂ ಕಿಸ್​ ಮಾಡಿದ ರೊಮ್ಯಾಂಟಿಕ್​ ದೃಶ್ಯ ಇದರಲ್ಲಿದೆ. ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರ ಅಭಿಮಾನಿಗಳಿಗೆ ಈ ವಿಡಿಯೋ ಇಷ್ಟ ಆಗಿದೆ. ಲಕ್ಷಾಂತರ ಬಾರಿ ಇದು ವೀಕ್ಷಣೆ ಕಂಡಿದೆ. ಸಾವಿರಾರು ಜನರು ಲೈಕ್​ ಮಾಡಿದ್ದಾರೆ. ಕೆಲವರು ನೆಗೆಟಿವ್​ ಕೆಮೆಂಟ್​ ಕೂಡ ಮಾಡಿದ್ದಾರೆ.

ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್​ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಕೆಲವು ನೆಟ್ಟಿಗರು ಟೀಕೆ ಮಾಡಿದ್ದಾರೆ. ಅಪ್ಪಟ ಅಭಿಮಾನಿಗಳು ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಸಪೋರ್ಟ್​ ಮಾಡಿದ್ದಾರೆ. ‘ಇದನ್ನೆಲ್ಲ ಬೇರೆಯವರು ಮಾಡಿದರೆ ಚಂದ. ಆದರೆ ಚಂದನ್​ ಶೆಟ್ಟಿ-ನಿವೇದಿತಾ ಮಾಡಿದರೆ ಮಾತ್ರ ಜನರು ತಪ್ಪು ಎನ್ನುತ್ತಾರೆ’ ಎಂಬ ಕಮೆಂಟ್​ ಕೂಡ ಬಂದಿದೆ. ‘ತುಂಬ ಕ್ಯೂಟ್​ ಜೋಡಿ’ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಅವರನ್ನು 16 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಅವರಿಗೆ 10 ಲಕ್ಷ ಫಾಲೋವರ್ಸ್​ ಇದ್ದಾರೆ.

ಇದನ್ನೂ ಓದಿ: ‘ಗಿಚ್ಚಿ ಗಿಲಿಗಿಲಿ 2’: ‘ಅವತಾರ್​’ ಲುಕ್​ನಲ್ಲಿ ನಗಿಸಿದ ನಿವೇದಿತಾ ಗೌಡ-ವಿನೋದ್ ಗೊಬ್ಬರಗಾಲ

ಗಾಯಕನಾಗಿ, ಗೀತರಚನಕಾರನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದನ್​ ಶೆಟ್ಟಿ ಅವರು ಈಗ ನಟನಾಗಿಯೂ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಎರಡನೇ ಸಿನಿಮಾ ಸೆಟ್ಟೇರಿತು. ಚಂದನ್ ಶೆಟ್ಟಿ ಅವರ ಮೊದಲ ಸಿನಿಮಾದ ಶೀರ್ಷಿಕೆ ‘ಎಲ್ರ ಕಾಲೆಳೆಯುತ್ತೆ ಕಾಲ’. ಆ ಚಿತ್ರದಲ್ಲಿ ಅವರಿಗೆ ರೆಟ್ರೋ ಲುಕ್​ ಇರಲಿದೆ. ಎರಡನೇ ಸಿನಿಮಾ ‘ಸೂತ್ರಧಾರಿ’ಯಲ್ಲಿ ಪೊಲೀಸ್​ ಪಾತ್ರವನ್ನು ಚಂದನ್​ ಶೆಟ್ಟಿ ಮಾಡಲಿರುವುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ