AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪದ್ದಿಗೆ ಈ ಹೀರೋನೇ ನನ್ನ ಮೊದಲ ಆಯ್ಕೆ’; ಮೌನ ಮುರಿದ ನಿರ್ದೇಶಕ

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4ರಂದು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ರಾಮ್ ಚರಣ್ ನಾಯಕರಾಗಿರುವ ಈ ಚಿತ್ರದ ಕಥೆಯನ್ನು ಜೂನಿಯರ್ ಎನ್​ಟಿಆರ್​ಗಾಗಿ ಮಾಡಲಾಗಿತ್ತು ಎಂಬ ವರದಿಗಳನ್ನು ನಿರ್ದೇಶಕರು ಅಲ್ಲಗಳೆದಿದ್ದಾರೆ. ಸಂಪೂರ್ಣವಾಗಿ ರಾಮ್ ಚರಣ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆ ಇದಾಗಿದೆ ಎಂದು ಬುಚ್ಚಿ ಬಾಬು ಸ್ಪಷ್ಟಪಡಿಸಿದ್ದಾರೆ.

‘ಪದ್ದಿಗೆ ಈ ಹೀರೋನೇ ನನ್ನ ಮೊದಲ ಆಯ್ಕೆ’; ಮೌನ ಮುರಿದ ನಿರ್ದೇಶಕ
ಜೂನಿಯರ್ ಎನ್​​ಟಿಆರ್​-ರಾಮ್ ಚರಣ್
ರಾಜೇಶ್ ದುಗ್ಗುಮನೆ
|

Updated on:Jun 03, 2026 | 2:41 PM

Share

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ (Peddi Movie) ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ಭಾಷೆಯ ಜೊತೆಗೆ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಾಮ್ ಚರಣ್ ಹೀರೋ. ಆದರೆ, ಈ ಚಿತ್ರದ ಕಥೆಯನ್ನು ಮೊದಲು ಜೂನಿಯರ್ ಎನ್​​ಟಿಆರ್​​ಗಾಗಿ ಸಿದ್ಧಪಡಿಸಲಾಗಿತ್ತು ಎಂಬ ಮಾತಿದೆ. ಈ ವಿಷಯದ ಕುರಿತು ಬುಚ್ಚಿ ಬಾಬು ಸನಾ ಅವರು ಮಾತನಾಡಿದ್ದಾರೆ.

‘ಪೆದ್ದಿ’ ಸಿನಿಮಾ ಪಕ್ಕಾ ಕ್ರೀಡಾಧಾರಿತ ಚಿತ್ರ. ಸಿನಿಮಾದ ಟ್ರೇಲರ್​​ನಲ್ಲಿ ತೋರಿಸಿದಂತ ರಾಮ್ ಚರಣ್ ಅವರು ಹಲವು ರೀತಿಯ ಕ್ರೀಡೆಗಳನ್ನು ಆಡುತ್ತಾರೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಥೆಯನ್ನು ಜೂನಿಯರ್ ಎನ್​​ಟಿಆರ್ ಅವರನ್ನು ಇಟ್ಟುಕೊಂಡು ಮಾಡಲಾಗಿತ್ತು ಎಂಬ ವರದಿ ಇದೆ. ಆದರೆ, ಕಾಲ್​​ಶೀಟ್ ಸಿಗದ ಕಾರಣ ರಾಮ್ ಚರಣ್ ಮೊರೆ ಹೋಗಬೇಕಾಯಿತು ಎಂದು ವರದಿ ಆಗಿತ್ತು.

ಆದರೆ, ಇದನ್ನು ಬುಚ್ಚಿ ಬಾಬು ಸನಾ ಅವರು ಅಲ್ಲಗಳೆದಿದ್ದಾರೆ. ಸಂಪೂರ್ಣವಾಗಿ ರಾಮ್ ಚರಣ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆ ಇದಾಗಿದೆ. ಜೂನಿಯರ್ ಎನ್​​​ಟಿಆರ್ ಸಿಕ್ಕಿಲ್ಲ, ಅದಕ್ಕೆ ರಾಮ್ ಚರಣ್​​ಗೆ ಕಥೆ ಹೇಳಬೇಕಾಯಿತು ಎಂಬುದೆಲ್ಲ ಸುಳ್ಳು ಎಂಬುದನ್ನು ಬುಚ್ಚಿ ಬಾಬು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ಗೆ ಹೆದರಿದ ವರುಣ್ ಧವನ್ ಸಿನಿಮಾ? ಮೊದಲ ದಿನವೇ ಟಿಕೆಟ್​ ಮೇಲೆ ಶೆ.50 ಆಫರ್

‘ಪೆದ್ದಿ’ ಸಿನಿಮಾಗೆ ಮತ್ತೊಂದು ಟ್ರೇಲರ್ ಬರಲಿದೆ ಎಂದು ಕೂಡ ವರದಿ ಆಗಿತ್ತು. ಆದರೆ, ನಿರ್ಮಾಪಕರಿಗೆ ಸದ್ಯಕ್ಕಂತೂ ಆ ರೀತಿಯ ಯೋಜನೆ ಇಲ್ಲ. ಈ ಚಿತ್ರದಲ್ಲಿ ದಿವ್ಯೇಂದು ಶರ್ಮ, ಜಾನ್ವಿ ಕಪೂರ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ತೆಲುಗು ಜೊತೆಗೆ ಹಿಂದಿ ಭಾಷೆಯಲ್ಲೂ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಹಿಂದಿ ಭಾಷೆಯ ಸಿನಿಮಾಗಳಿಗೂ ‘ಪೆದ್ದಿ’ ಸ್ಪರ್ಧೆ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:40 pm, Wed, 3 June 26

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ