AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಿಚ್ಚಿ ಗಿಲಿಗಿಲಿ 2’: ‘ಅವತಾರ್​’ ಲುಕ್​ನಲ್ಲಿ ನಗಿಸಿದ ನಿವೇದಿತಾ ಗೌಡ-ವಿನೋದ್ ಗೊಬ್ಬರಗಾಲ

ನಿವೇದಿತಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಈ ನಾಟಕ ಮಾಡಿದ್ದಾರೆ. ನಿವೇದಿತಾ ಗೌಡ ಅವರು ‘ಬಿಗ್ ಬಾಸ್​’ ಮೂಲಕ ಫೇಮಸ್ ಆದವರು. ಅವರು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.

‘ಗಿಚ್ಚಿ ಗಿಲಿಗಿಲಿ 2’: ‘ಅವತಾರ್​’ ಲುಕ್​ನಲ್ಲಿ ನಗಿಸಿದ ನಿವೇದಿತಾ ಗೌಡ-ವಿನೋದ್ ಗೊಬ್ಬರಗಾಲ
ನಿವೇದಿತಾ ಗೌಡ
TV9 Web
| Edited By: |

Updated on:Feb 06, 2023 | 10:13 AM

Share

‘ಅವತಾರ್​’ ಸರಣಿ ಹಿಟ್ ಆಗಿದೆ. ಇತ್ತೀಚೆಗೆ ರಿಲೀಸ್ ಆದ ‘ಅವತಾರ್​ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಬರೋ ಪಾತ್ರಗಳು ಎಲ್ಲರ ಗಮನ ಸೆಳೆದಿವೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ‘ಅವತಾರ್​ 2’ ಸಿನಿಮಾ (Avatar 2) ಬಿಡುಗಡೆ ಆಗಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈಗ ಇದೇ ಚಿತ್ರದಲ್ಲಿ ಬರೋ ಪಾತ್ರಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ‘ಗಿಚ್ಚಿ ಗಿಲಿಗಿಲಿ 2’ನಲ್ಲಿ (Gichchi Giligili) ಡ್ರಾಮಾ ಮಾಡಲಾಗಿದೆ. ಈ ನಾಟಕ ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಭಾನುವಾರ (ಫೆಬ್ರವರಿ 5) ಈ ಎಪಿಸೋಡ್ ಪ್ರಸಾರ ಆಗಿದೆ.

ನಿವೇದಿತಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ‘ಗಿಚ್ಚಿ ಗಿಲಿಗಿಲಿ 2’ ವೇದಿಕೆ ಮೇಲೆ ಈ ನಾಟಕ ಮಾಡಿದ್ದಾರೆ. ನಿವೇದಿತಾ ಗೌಡ ಅವರು ‘ಬಿಗ್ ಬಾಸ್​’ ಮೂಲಕ ಫೇಮಸ್ ಆದವರು. ಅವರು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ವಿನೋದ್ ಗೊಬ್ಬರಗಾಲ ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ‘ಮಜ ಭಾರತ’ ಮೂಲಕ ಫೇಮಸ್ ಆಗಿದ್ದ ಅವರಿಗೆ ‘ಬಿಗ್ ಬಾಸ್​’ನಿಂದ ಮತ್ತಷ್ಟು ಜನಪ್ರಿಯತೆ ಸಿಕ್ಕಿದೆ. ಈಗ ನಿವೇದಿತಾ ಹಾಗೂ ವಿನೋದ್ ಅವತಾರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ನಿವೇದಿತಾ ಅವರು ಅತಿಥಿಯಾಗಿ ಆಗಮಿಸಿದ್ದರು. ಮಾವಿನ್​​ಮುತ್ತು ಕದಿಯೋದು ವಿನೋದ್ ಪ್ಲ್ಯಾನ್. ಈ ಮಾವಿನ​ಮುತ್ತು ತಿಂದವರು ತೆಳ್ಳಗಾಗುತ್ತಾರೆ. ಪ್ರೀತಿಸುತ್ತಿರುವ ಹುಡುಗಿ ದಪ್ಪಗಿದ್ದಾಳೆ ಅನ್ನೋ ಕಾರಣಕ್ಕೆ ಈ ಮಾವಿನಮುತ್ತ ತರಲು ಅವತಾರ ಲೋಕಕ್ಕೆ ಬಂದ ವಿನೋದ್​ಗೆ ನಿವೇದಿತಾ ಮೇಲೆ ಪ್ರೀತಿ ಆಗುತ್ತದೆ. ಅವರಿಬ್ಬರೂ ಮದುವೆ ಆಗುತ್ತಾರೆ. ಇತ್ತ ಪ್ರೀತಿಸಿದ ಹುಡುಗಿ ಈತನಿಗಾಗಿ ಕಾಯುತ್ತಾ ಕುಳಿತು ಮುದುಕಿ ಆಗುತ್ತಾಳೆ. ಇದನ್ನು ಸಖತ್ ಫನ್ನಿಯಾಗಿ ಮಾಡಿದ್ದಾರೆ. ಈ ನಾಟಕ ನೋಡಿ ಎಲ್ಲರೂ ನಕ್ಕಿದ್ದಾರೆ. ನಿವೇದಿತಾ ಲುಕ್ ಗಮನ ಸೆಳೆದಿದೆ.

‘ನಾನು ಅವತಾರ್ ಜಗತ್ತಿನ ಕ್ವೀನ್​’ ಎಂದು ವೇದಿಕೆ ಮೇಲೆ ಖುಷಿಯಿಂದ ಹೇಳಿಕೊಂಡರು ನಿವೇದಿತಾ. ‘ನಿಮ್ಮ ಬಟ್ಟೆ ತುಂಬಾ ಚೆನ್ನಾಗಿತ್ತು. ಸುನಿತಾ ಸೂಪರ್ ಆಗಿ ನಟಿಸಿದ್ದಾರೆ. ಆಭಾಸಗಳನ್ನು ತುಂಬಾ ಎಂಜಾಯ್ ಮಾಡ್ತಾ ಇದ್ವಿ’ ಎಂದು ಕಾರ್ಯಕ್ರಮದ ಜಡ್ಜ್​ ಸೃಜನ್ ಲೋಕೇಶ್ ಹೇಳಿದರು. ಜಡ್ಡ್​ ಸ್ಥಾನದಲ್ಲಿರುವ ಶ್ರುತಿ ಕೂಡ ಈ ಕಾರ್ಯಕ್ರಮವನ್ನು ತುಂಬಾನೇ ಎಂಜಾಯ್ ಮಾಡಿದರು.

ವಿಡಿಯೋ ಹಂಚಿಕೊಂಡ ನಿವೇದಿತಾ

ನಿವೇದಿತಾ ಗೌಡ ಅವರು ಅವತಾರ್ ಲೋಕದ ಕ್ವೀನ್. ಈ ಅವತಾರ ತಾಳೋಕೆ ಅವರಿಗೆ ಸಾಕಷ್ಟು ಸಮಯ ಬೇಕಾಗಿದೆ. ಅವರು ಈ ಲುಕ್ ಪಡೆದಿದ್ದು ಹೇಗೆ ಎಂಬ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರಿಗೆ ಸಾಕಷ್ಟು ಸಮಯ ಬೇಕಾಗಿದೆ. ‘ನಾನು ಶೂಟ್​ಗೆ ರೆಡಿ ಆಗಿದ್ದು ಹೀಗೆ. ಅದು ಅಷ್ಟು ಸುಲಭ ಆಗಿರಲಿಲ್ಲ’ ಎಂದು ನಿವೇದಿತಾ ಬರೆದುಕೊಂಡಿದ್ದಾರೆ. ‘ಈ ರೀತಿ ಸಿದ್ಧಗೊಳ್ಳೋದು ಅಷ್ಟು ಸುಲಭ ಅಲ್ಲ. ನಿಮಗೆ ಹ್ಯಾಟ್ಸ್ ಆಫ್​’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

‘ಗಿಚ್ಚಿ ಗಿಲಿಗಿಲಿ’ ಮೊದಲ ಸೀಸನ್ ಯಶಸ್ಸು ಕಂಡಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ ಸೀಸನ್ 2’ ಬಂದಿದೆ. ನಿರಂಜನ್​ ದೇಶಪಾಂಡೆ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸೃಜನ್ ಲೋಕೇಶ್, ಶ್ರುತಿ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಈ ಸೀಸನ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ.

ಶ್ರೀಲಕ್ಷ್ಮಿ ಎಚ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:04 am, Mon, 6 February 23

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ