- Kannada News Photo gallery Samantha Ruth Prabhu and Vijay Deverakonda BTS photos during Kushi movie shooting
Vijay Deverakonda: ಸಮಂತಾ-ವಿಜಯ್ ದೇವರಕೊಂಡ ನಡುವೆ ಆಪ್ತತೆ ಹೆಚ್ಚಿದ್ದಕ್ಕೆ ಈ ಫೋಟೋಗಳೇ ಸಾಕ್ಷಿ
Samantha Ruth Prabhu: ‘ಖುಷಿ’ ಸಿನಿಮಾದಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಅವರಿಬ್ಬರು ಹೆಚ್ಚು ಕ್ಲೋಸ್ ಆಗಿದ್ದಾರೆ.
Updated on: May 12, 2023 | 2:45 PM

ನಟಿ ಸಮಂತಾ ರುತ್ ಪ್ರಭು ಅವರು ಈಗ ಸಿಂಗಲ್ ಆಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಅವರ ಗಮನವೆಲ್ಲ ಸಿನಿಮಾಗಳ ಮೇಲಿದೆ. ‘ಖುಷಿ’ ಚಿತ್ರದ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ.

‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರು ಜೋಡಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಯಿತು. ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.

ವಿಜಯ್ ದೇವರಕೊಂಡ ಮತ್ತು ಸಮಂತಾ ನಡುವೆ ಆಪ್ತತೆ ಬೆಳೆದಿದೆ. ‘ಖುಷಿ’ ಸಿನಿಮಾದ ಶೂಟಿಂಗ್ ವೇಳೆ ಅವರಿಬ್ಬರ ಒಡನಾಟ ಹೆಚ್ಚಾಗಿದೆ. ಈ ಪರಿ ಸ್ನೇಹ ಹೆಚ್ಚಾಗಲು ಕಾರಣ ಏನು ಎಂದು ಗಾಸಿಪ್ ಮಂದಿ ಪ್ರಶ್ನಿಸುತ್ತಿದ್ದಾರೆ.

ಖುಷಿ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಸಮಂತಾ ಮತ್ತು ವಿಜಯ್ ದೇವರಕೊಂಡ ಎಷ್ಟು ಆಪ್ತವಾಗಿದ್ದರು ಎಂಬುದನ್ನು ವಿವರಿಸುವಂತಹ ಫೋಟೋಗಳು ಲಭ್ಯವಾಗಿದೆ. ಇಬ್ಬರ ಜೋಡಿ ಚೆನ್ನಾಗಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಖುಷಿ’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಸಮಂತಾ ಅವರಿಗೆ ಅನಾರೋಗ್ಯ ಕಾಡಿದ್ದರಿಂದ ಶೂಟಿಂಗ್ ವಿಳಂಬ ಆಯಿತು. ಬಳಿಕ ಅವರು ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡರು.
























