ಕೊವಿಡ್ ವಿಚಾರದಲ್ಲಿ ಕೇಂದ್ರದ ವಿರುದ್ಧ ಮಾತನಾಡಿದ್ದ ಲಕ್ಷದ್ವೀಪದ ಮಾಡೆಲ್ ಹಾಗೂ ನಟಿ ಐಷಾ ಸಲ್ತಾನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು ಟ್ವಿಟರ್ನಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ.
ಐಷಾ ಇತ್ತೀಚೆಗೆ ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗಿಯಾಗಿದ್ದರು. ಮಾತಿನ ಭರದಲ್ಲಿ, ‘ಲಕ್ಷದ್ವೀಪದಲ್ಲಿ ಕೊರೊನಾ ಹೆಚ್ಚಲು ಇಲ್ಲಿನ ಅಡ್ಮಿನಿಸ್ಟ್ರೇಟರ್ ಪ್ರಫುಲ್ ಪಟೇಲ್ ಅವರ ನಿರ್ಧಾರವೇ ಕಾರಣ. ಮತ್ತು ಲಕ್ಷದ್ವೀಪದ ವಿರುದ್ಧ ಕೇಂದ್ರ ಸರ್ಕಾರ ಬಯೋ ವೆಪನ್ ಬಳಕೆ ಮಾಡಿದೆ. ಆರಂಭದಲ್ಲಿ ಇಲ್ಲಿ ಕೊವಿಡ್ ಕೇಸ್ಗಳು ಇರಲೇ ಇಲ್ಲ. ಈಗ ನಿತ್ಯ ನೂರು ಪ್ರಕರಣಗಳು ಬರುತ್ತಿವೆ’ ಎಂದು ಹೇಳಿದ್ದರು.
ಐಷಾ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಇದು ವಿವಾದಾತ್ಮಕ ಹೇಳಿಕೆ ಎಂದು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ದೇಶದ್ರೋಹ ಪ್ರಕರಣ ದಾಖಲಿಸಿದೆ.
Aiysha Sultana, budding filmmaker, booked under sedition charges. Crime: Dared to describe admin policy a bio-weapon . Reason: Laccadives did not have a single case of Covid for a year until admin removed mandatory quarantine for travellers. Now Covid rages. Some sedition indeed! pic.twitter.com/oZU9m7hBGX
— Thomas Isaac (@drthomasisaac) June 11, 2021
‘ನನ್ನ ವಿರುದ್ಧ ಬಿಜೆಪಿ ಕಾರ್ಯಕರ್ತರು ದೇಶದ್ರೋಹದ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಯಾವಾಗಲೂ ಸತ್ಯವೇ ಗೆಲುವು ಕಾಣುತ್ತದೆ. ನಾನು ಹುಟ್ಟಿದ ಭೂಮಿಗಾಗಿ ಫೈಟ್ ಮಾಡುತ್ತೇನೆ. ನನ್ನಲ್ಲಿ ಈಗ ಯಾವುದೇ ಭಯ ಉಳಿದುಕೊಂಡಿಲ್ಲ. ನನ್ನ ಧ್ವನಿ ಮತ್ತಷ್ಟು ದೊಡ್ಡದಾಗಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
1/3 In our democracy, criticism of Govt that does not involve incitement to violence is not seditious, a principle the Supreme Court has repeatedly upheld & that various state police forces have more repeatedly ignored. The case should be dropped. https://t.co/iQp7uTs3VQ
— Shashi Tharoor (@ShashiTharoor) June 11, 2021