ಕನ್ನಡದಲ್ಲಿ ನಟಿಸಿದ ಯುವ ನಟಿಗೆ ಬಾಡಿ ಶೇಮಿಂಗ್; ಖಿನ್ನತೆಗೆ ಒಳಗಾಗಿದ್ದ ಹೀರೋಯಿನ್ ಕೊಟ್ಟ ಉತ್ತರ ಏನು?
ಸನುಶಾ ದೇಹದ ತೂಕ ಮಿತಿಮೀರಿ ಹೆಚ್ಚಿದ್ದರಿಂದ ಟೀಕೆಗೆ ಒಳಗಾಗಿದ್ದರು. ಈಗ ಅವರು, ಕಷ್ಟಪಟ್ಟು ತೂಕ ಇಳಿಸಿಕೊಂಡಿದ್ದಾರೆ. ಆದಾಗ್ಯೂ ಅನೇಕರು ಸನುಶಾ ಅವರ ದೇಹದ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಚಿತ್ರರಂಗದ ಸಾಕಷ್ಟು ನಟಿಯರು ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಕೆಲವರು ಈ ಬಗ್ಗೆ ಕಠಿಣವಾಗಿ ಉತ್ತರಿಸಿದರೆ, ಇನ್ನೂ ಕೆಲವರು ಆ ಗೋಜಿಗೆ ಹೋಗದೆ ಸುಮ್ಮನಿದ್ದಾರೆ. ಕನ್ನಡದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದಲ್ಲಿ ನಟಿಸಿದ್ದ ಸನುಶಾ ಈಗ ಅಭಿಮಾನಿಗಳಿಂದ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಇದಕ್ಕೆ ಅವರ ಕಡೆಯಿಂದ ತಕ್ಕ ಉತ್ತರ ಕೂಡ ಬಂದಿದೆ.
ಈ ಮೊದಲು ಸನುಶಾ ಆತ್ಮಹತ್ಯೆ ಚಿಂತನೆ ಬಗ್ಗೆ ಮಾತನಾಡಿದ್ದರು. ‘ಕೆಲ ದಿನಗಳಿಂದ ನಾನು ವೈಯಕ್ತಿಕವಾಗಿ ಹಾಗೂ ವೃತ್ತಿ ಜೀವನದಲ್ಲಿ ಕಷ್ಟ ಎದುರಿಸುತ್ತಿದ್ದೇನೆ. ನನ್ನಲ್ಲಿರುವ ಮೌನ ಮತ್ತು ಕತ್ತಲಿಗೆ ಹೇಗೆ ಉತ್ತರಿಸಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಯಾರ ಜತೆಯೂ ಮಾತನಾಡಲು ಇಷ್ಟವಿಲ್ಲ. ನನ್ನಲ್ಲಿ ಆತ್ಮಹತ್ಯೆ ಆಲೋಚನೆ ಬರುತ್ತಿದೆ’ ಎಂದು ಅವರು ಹೇಳಿದ್ದರು.
ಸನುಶಾ ದೇಹದ ತೂಕ ಮಿತಿಮೀರಿ ಹೆಚ್ಚಿದ್ದರಿಂದ ಟೀಕೆಗೆ ಒಳಗಾಗಿದ್ದರು. ಈಗ ಅವರು, ಕಷ್ಟಪಟ್ಟು ತೂಕ ಇಳಿಸಿಕೊಂಡಿದ್ದಾರೆ. ಆದಾಗ್ಯೂ ಅನೇಕರು ಸನುಶಾ ಅವರ ದೇಹದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇದನ್ನು ಸಹಿಸದ ನಟಿ ತಕ್ಕ ಉತ್ತರ ನೀಡಿದ್ದಾರೆ. ‘ನನ್ನ ದೇಹದ ತೂಕದ ಬಗ್ಗೆ ಯಾರೂ ಇಷ್ಟೊಂದು ಯೋಚನೆ ಮಾಡಿರಲಿಕ್ಕಿಲ್ಲ. ನೀವು ಅದನ್ನು ಮಾಡಿದ್ದೀರಿ. ತೂಕ ಹೆಚ್ಚಾದರೆ ನೀವು ಚಿಂತಿಸಬೇಡಿ. ನೀವು ಯಾರ ಕಡೆಗಾದರೂ ಬೊಟ್ಟು ಮಾಡುತ್ತಿದ್ದೀರಿ ಎಂದರೆ, ಉಳಿದ ಬೆರಳುಗಳು ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಕಡೆಗೆ ಇರುತ್ತದೆ ಎಂಬುದು ನೆನಪಿರಲಿ. ನಿಮ್ಮ ಬಗ್ಗೆ ಮತ್ತು ನಿಮ್ಮ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಿ’ ಎಂದಿದ್ದಾರೆ ಸನುಶಾ.
ಸನುಶಾ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2012ರಲ್ಲಿ ಅವರು ನಟಿಯಾಗಿ ಬಡ್ತಿ ಪಡೆದರು. 2016ರಲ್ಲಿ ತೆರೆಗೆ ಬಂದ ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ಸನುಶಾ ನಟಿಸಿದ್ದರು. 2019ರಲ್ಲಿ ರಿಲೀಸ್ ಆದ ತೆಲುಗಿನ ಹಿಟ್ ಚಿತ್ರ ‘ಜೆರ್ಸಿ’ಯೇ ಕೊನೆ. ಅದಾದ ನಂತರದಲ್ಲಿ ಸನುಶಾ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಅವರಿಗೆ ಈವರೆಗೆ ಬ್ರೇಕ್ ಕೊಡುವಂತಹ ಯಾವುದೇ ಸಿನಿಮಾ ಸಿಕ್ಕಿಲ್ಲ.
ಇದನ್ನೂ ಓದಿ: Bigg Boss Kannada 8: ‘ಬಿಗ್ ಬಾಸ್ ಕನ್ನಡ ಸೀಸನ್ 8’ ಬಗ್ಗೆ ಬಿಗ್ ಅಪ್ಡೇಟ್; ಇನ್ನೂ ಮುಗಿದಿಲ್ಲ ಶೋ?