ಟಾಮ್ ಹಿಡ್ಲಸ್ಟನ್ ಅವರು ಮಾರ್ವೆಲ್ ಸರಣಿಯಲ್ಲಿ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಲೋಕಿ’ ಹೆಸರಿನಲ್ಲೇ ಸೀರಿಸ್ ಬಂದಿದೆ. ಇಂದಿನಿಂದ ಈ ಸೀರೀಸ್ನ ಪ್ರಸಾರ ಆರಂಭವಾಗಿದೆ. ವಿಶೇಷ ಎಂದರೆ, ಟಾಮ್ ಅವರಿಗೆ ಚೆನ್ನೈ ನಂಟಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಡಿಸ್ನಿ ಹಾಟ್ಸ್ಟಾರ್ ಟ್ವಿಟರ್ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಒಂದು ಶಬ್ದವನ್ನು ನೀಡಲಾಗುತ್ತದೆ. ಅದನ್ನು ನೋಡಿದ ತಕ್ಷಣ ಅವರ ಮನಸ್ಸಿನಲ್ಲಿ ಏನು ಬರುತ್ತದೆ ಎನ್ನುವುದನ್ನು ಟಾಮ್ ಹೇಳಬೇಕು. ಈ ವೇಳೆ ಭಾರತ ಎನ್ನುವ ಶಬ್ದವನ್ನು ಹೇಳಲಾಯಿತು. ಆಗ ಟಾಮ್ ‘ಶಾರುಖ್ ಖಾನ್’ ಎಂದು ಉತ್ತರಿಸಿದರು. ಇನ್ನು, ಬಾಲಿವುಡ್ ಎಂದಾಗಲೂ ಅವರು ಹೇಳಿದ್ದು ಶಾರುಖ್ ಖಾನ್ ಹೆಸರನ್ನೇ.
ಶಾರುಖ್ ಖಾನ್ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಜಗತ್ತಿಗೇ ಪರಿಚಯವಾಗಿದ್ದಾರೆ. ಹೀಗಾಗಿ, ಶಾರುಖ್ ಹೆಸರು ಟಾಮ್ ಬಾಯಲ್ಲಿ ಬಂದಿದೆ.
Tom Hiddleston’s cheekbones and wit cut sharper than glass and we are here for it! ?? Watch #Loki streaming June 9 pic.twitter.com/FodbnUS61j
— Disney+HotstarPremium (@DisneyplusHSP) June 8, 2021
ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರ ಇದೆ. ಚೆನ್ನೈಗೂ ಟಾಮ್ಗೂ ಕನೆಕ್ಷನ್ ಇದೆ. ಭಾರತದ ನಗರ ಎನ್ನುವ ಶಬ್ದವನ್ನು ಟಾಮ್ ಮುಂದೆ ಇಟ್ಟಾಗ, ‘ಚೆನ್ನೈ’ ಎನ್ನುವ ಉತ್ತರ ಬಂತು. ‘ಮೈ ಅಕ್ಕಾ ಲಿವ್ಸ್ ದೇರ್. (ನನ್ನ ಅಕ್ಕ ಅಲ್ಲಿ ವಾಸವಾಗಿದ್ದಾರೆ) ನಾನು ಅಲ್ಲಿಗೆ ಅನೇಕ ಬಾರಿಗೆ ತೆರಳಿದ್ದೇನೆ. ಚೆನ್ನೈ ಅದ್ಭುತವಾಗಿದೆ’ ಎಂದರು.
ಲೋಕಿ ಮಾರ್ವೆಲ್ನ ಅವೆಂಜರ್ಸ್ ಸರಣಿಯಲ್ಲಿ ಕಾಣಿಸಿಕೊಳ್ಳುವ ವಿಲನ್ ಪಾತ್ರ. 2012ರಲ್ಲಿ ಮೊದಲ ಬಾರಿಗೆ ಅವರು ದಿ ಅವೇಂಜರ್ಸ್ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಸಾಕಷ್ಟು ಅವೇಂಜರ್ಸ್ ಸರಣಿಯಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾಗೆ ಬಂತು ಮ್ಯಾರೇಜ್ ಪ್ರಪೋಸಲ್; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?