ಟಾಲಿವುಡ್​​ನ ಈ ಸ್ಟಾರ್ ನಟರ ಬಳಿ ಇದೆ ಸ್ವಂತ ವಿಮಾನ; ಶ್ರೀಮಂತ ನಟರ ವಿವರ ಇಲ್ಲಿದೆ..

ಟಾಲಿವುಡ್​ನ 7 ಸ್ಟಾರ್​ ನಟರ ಬಳಿ ಖಾಸಗಿ ಜೆಟ್​ ಇದೆ. ಸಿನಿಮಾ ಪ್ರಚಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಅವರು ಇದೇ ವಿಮಾನವನ್ನು ಬಳಕೆ ಮಾಡಿಕೊಳ್ಳುತ್ತಾರೆ.

ಟಾಲಿವುಡ್​​ನ ಈ ಸ್ಟಾರ್ ನಟರ ಬಳಿ ಇದೆ ಸ್ವಂತ ವಿಮಾನ; ಶ್ರೀಮಂತ ನಟರ ವಿವರ ಇಲ್ಲಿದೆ..
ವಿಮಾನ ಹೊಂದಿರೋ ನಟರು

Updated on: Jun 02, 2023 | 12:57 PM

ಸ್ಟಾರ್​ ನಟರ ಸಂಭಾವನೆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುತ್ತದೆ. ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಪಡೆದುಕೊಳ್ಳುವ ಅವರು, ಅದನ್ನು ಬೇರೆಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ಕಾರಣಕ್ಕೆ ಹಲವು ಸ್ಟಾರ್​ ನಟರ ಆಸ್ತಿ ನೂರಾರು ಕೋಟಿ ರೂಪಾಯಿ ಮೇಲಿದೆ. ಇನ್ನು, ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಕಾರ್​ ಕ್ರೇಜ್​ ಇದೆ. ಹಲವು ಐಷಾರಾಮಿ ಕಾರನ್ನು ಖರೀದಿ ಮಾಡಿ, ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದೇ ರೀತಿ ಟಾಲಿವುಡ್​ನ 7 ಸ್ಟಾರ್​ (Tollywood Stars) ನಟರ ಬಳಿ ಖಾಸಗಿ ಜೆಟ್ (Private Jet)​ ಇದೆ. ಸಿನಿಮಾ ಪ್ರಚಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಅವರು ಇದೇ ವಿಮಾನವನ್ನು ಬಳಕೆ ಮಾಡಿಕೊಳ್ಳುತ್ತಾರೆ.

ಅಕ್ಕಿನೇನಿ ನಾಗಾರ್ಜುನ

ಅಕ್ಕಿನೇನಿ ನಾಗಾರ್ಜುನ ಟಾಲಿವುಡ್​ನ ದೊಡ್ಡ ಸ್ಟಾರ್​. ಸಿನಿಮಾ ರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಹೆಚ್ಚು ಗೌರವ ಇದೆ. ಅವರು ತಮ್ಮದೇ ವಿಮಾನ ಹೊಂದಿದ್ದಾರೆ. ಫ್ಯಾಮಿಲಿ ಜತೆ ಅವರು ಇದೇ ವಿಮಾನದಲ್ಲಿ ರಜೆಯ ಮಜ ಕಳೆಯೋಕೆ ಹಲವು ಕಡೆಗಳಲ್ಲಿ ತಿರುಗಾಡಿದ ಉದಾಹರಣೆ ಇದೆ.

ಅಲ್ಲು ಅರ್ಜುನ್​

ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಇವರ ಬಳಿ ಪ್ರೈವೇಟ್​ ಜೆಟ್​ ಇದೆ. ಅಲ್ಲು ಸ್ನೇಹಾ ರೆಡ್ಡಿ ಮದುವೆ ಆದ ನಂತರದಲ್ಲಿ ಪ್ರೈವೇಟ್​ ಜೆಟ್​ಅನ್ನು ಅಲ್ಲು ಖರೀದಿ ಮಾಡಿದ್ದಾರೆ. ‘ರೇಸ್​ ಗುರಮ್​’ ಸಿನಿಮಾ ಪ್ರಮೋಷನ್​ ಸಂದರ್ಭದಲ್ಲಿ ಅವರು ಇದೇ ವಿಮಾನದಲ್ಲಿ ಹಾರಾಟ ನಡೆಸಿದ್ದರು. ‘ಪುಷ್ಪ’ ಸಿನಿಮಾ ಪ್ರಚಾರಕ್ಕೆ ಇದೇ ವಿಮಾನ ಬಳಕೆ ಮಾಡಿಕೊಂಡಿದ್ದರು.

ಚಿರಂಜೀವಿ

ಮೆಗಾಸ್ಟಾರ್​ ಚಿರಂಜೀವಿ ಅವರು ನಟನೆ ಜತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಈಗ ರಾಜಕೀಯ ತೊರೆದು ಚಿತ್ರರಂಗದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಬಳಿಯೂ ಚಾರ್ಟರ್​ ಪ್ಲೇನ್​ ಇದೆ. ಸಿನಿಮಾ ಪ್ರಚಾರಕ್ಕೆ ಹಾಗೂ ಕುಟುಂಬದ ಜತೆ ಸಮಯ ಕಳೆಯೋಕೆ ಅವರು ಈ ವಿಮಾನ ಬಳಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಈ ಫೋಟೋದಲ್ಲಿರೋ ಇಬ್ಬರೂ ಸ್ಟಾರ್​ಗಳೇ; ಇವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್

ಪವನ್​ ಕಲ್ಯಾಣ್​

ಪವನ್​ ಕಲ್ಯಾಣ್​ ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ತೊಡಗಿಕೊಂಡಿದ್ದಾರೆ. ಅವರು ಖಾಸಗಿ ವಿಮಾನ ಹೊಂದಿದ್ದಾರೆ.

ಇದನ್ನೂ ಓದಿ: Niveditha Gowda: ನೀರಿನೊಳಗೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ರೊಮ್ಯಾನ್ಸ್​; ವೈರಲ್​ ವಿಡಿಯೋ ನೋಡಿ ಜನ ಹೇಳಿದ್ದೇನು?

ಜ್ಯೂ.ಎನ್​ಟಿಆರ್

ಜ್ಯೂ.ಎನ್​ಟಿಆರ್​ ಬಳಿ 80 ಕೋಟಿ ಮೌಲ್ಯದ ವಿಮಾನ ಇದೆ. ಇದನ್ನು ಹೈದರಾಬಾದ್​ನ ಶಮ್ಶಾಬಾದ್​ ವಿಮಾನ ನಿಲ್ದಾಣದಲ್ಲಿ ಪಾರ್ಕ್​ ಮಾಡಿರಲಾಗುತ್ತದೆ. ಹಲವು ಬಾರಿ ಅವರು ಈ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಮ್​ ಚರಣ್​

ರಾಮ್​ ಚರಣ್​ ಅವರು ಪ್ರೈವೇಟ್​ ಜೆಟ್ ಹೊಂದಿದ್ದಾರೆ. ಇದರಲ್ಲಿ ಪ್ರಯಾಣಿಸೋಕೆ ಇಷ್ಟಪಡುತ್ತಾರೆ. ಪತ್ನಿ ಉಪಾಸನಾ ಕೊನಿಡೆಲ್ಲಾ ಜತೆ ಅವರು ಸಾಕಷ್ಟು ಬಾರಿ ಈ ವಿಮಾನದಲ್ಲಿ ಸುತ್ತಾಟ ನಡೆಸಿದ್ದಾರೆ.

ಮಹೇಶ್​ ಬಾಬು

ಮಹೇಶ್​ ಬಾಬು ಅವರು ಟಾಲಿವುಡ್​ನ ಬೇಡಿಕೆಯ ನಟ. ಅವರು ಸಿನಿಮಾ ಜತೆಗೆ ಕುಟುಂಬಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮದೇ ವಿಮಾನದಲ್ಲಿ ಅವರು ಹಲವು ಕಡೆಗಳಲ್ಲಿ ಕುಟುಂಬದ ಜತೆ ಸುತ್ತಾಟ ನಡೆಸಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:57 pm, Fri, 2 June 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us