AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿರೋ ಇಬ್ಬರೂ ಸ್ಟಾರ್​ಗಳೇ; ಇವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್

ಈ ನಟನಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುತ್ತಾರೆ. ಲವ್​, ಕಾಮಿಡಿ, ಆ್ಯಕ್ಷನ್.. ಹೀಗೆ ಯಾವುದೇ ಪ್ರಕಾರದ ಸಿನಿಮಾ ಕೊಟ್ಟರೂ ಅವರು ಮಿಂಚುತ್ತಾರೆ.

ಈ ಫೋಟೋದಲ್ಲಿರೋ ಇಬ್ಬರೂ ಸ್ಟಾರ್​ಗಳೇ; ಇವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್
ಸ್ಟಾರ್ ಹೀರೋಗಳು
ರಾಜೇಶ್ ದುಗ್ಗುಮನೆ
|

Updated on:Jun 02, 2023 | 12:15 PM

Share

ಮೇಲಿನ ಫೋಟೋದಲ್ಲಿರೋದು ಸ್ಟಾರ್ ಹೀರೋ ಅಜಿತ್ ಕುಮಾರ್ (Ajith Kumar). ಅವರು ತಮಿಳಿನಲ್ಲಿ ಸಖತ್ ಫೇಮಸ್. ಅವರ ಪಕ್ಕದಲ್ಲಿರುವ ತೆಳ್ಳಗಿನ ವ್ಯಕ್ತಿ ಬಗ್ಗೆ ನಿಮಗೆ ಗೊತ್ತಾ? ಅಂದು ನೋಡಲು ತುಂಬಾ ಸಿಂಪಲ್ ಆಗಿದ್ದ ಹುಡುಗ ಈಗ ದಕ್ಷಿಣ ಭಾರತದ ಪ್ರತಿಭಾವಂತ ನಾಯಕ. ಈ ನಟನಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುತ್ತಾರೆ. ಲವ್​, ಕಾಮಿಡಿ, ಆ್ಯಕ್ಷನ್.. ಹೀಗೆ ಯಾವುದೇ ಪ್ರಕಾರದ ಸಿನಿಮಾ ಕೊಟ್ಟರೂ ಅವರು ಮಿಂಚುತ್ತಾರೆ. ಅವರು ಬೇರಾರೂ ಅಲ್ಲ ನಟ ವಿಜಯ್ ಸೇತುಪತಿ (Vijay Sethupathi).

ತಮಿಳಿನ ಧನುಷ್ ಅವರಂತಹ ಸ್ಟಾರ್ ಹೀರೋಗಳ ಜೊತೆ ಸಣ್ಣ ಪುಟ್ಟ ಪಾತ್ರಗಳ ಮಾಡಿ ಚಿತ್ರರಂಗದಲ್ಲಿ ವಿಜಯ್ ಸೇತುಪತಿ ಗುರುತಿಸಿಕೊಂಡರು. ಆ ನಂತರ ಸೋಲೋ ಹೀರೋ ಆಗಿ ತಮ್ಮಪಪ್ರತಿಭೆಯನ್ನು ಸಾಬೀತುಪಡಿಸಿದರು. ನಾಯಕನಾಗಿ ಮಾತ್ರವಲ್ಲದೆ ಖಳನಟನಾಗಿ, ವಿಶೇಷ ಪಾತ್ರಗಳಲ್ಲಿಯೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ವಿಜಯ್ ಸದ್ದು ಮಾಡಿದ್ದಾರೆ.

ವಿಜಯ್ ಸೇತುಪತಿ ಅವರು ಅಜಿತ್ ಕುಮಾರ್ ಜೊತೆ ನಿಂತಿದ್ದ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರೂ ಸ್ಟಾರ್ ಹೀರೋ ಆಗಿ ಮೆರೆಯುತ್ತಿದ್ದಾರೆ ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೆರೆಮೇಲೆ ಬರಲಿದೆ ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್; ವಿಜಯ್ ಸೇತುಪತಿ ಕಾಲ್​ಶೀಟ್ ಕೇಳಿದ ತಂಡ

ಈ ವರ್ಷ ವಿಜಯ್ ಸೇತುಪತಿ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ‘ಮುಂಬೈಕರ್’ ಚಿತ್ರ ಜಿಯೋ ಸಿನಿಮಾ ಮೂಲಕ ಪ್ರಸಾರ ಕಂಡಿದೆ. ಸದ್ಯ ವಿಜಯ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಶಾರುಖ್ ಖಾನ್ ಅಭಿನಯದ ‘ಜವಾನ್’, ‘ಮೇರಿ ಕ್ರಿಸ್‌ಮಸ್’, ‘ಗಾಂಧಿ ಟಾಕ್ಸ್’ ಚಿತ್ರಗಳ ಚಿತ್ರೀಕರಣದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ಫರ್ಜಿ’ ವೆಬ್ ಸೀರಿಸ್ ಮೆಚ್ಚುಗೆ ಪಡೆದಿದೆ. ರಾಜ್ ಹಾಗೂ ಡಿಕೆ ಇದನ್ನು ನಿರ್ದೇಶಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:13 am, Fri, 2 June 23