ಟಾಲಿವುಡ್ನ ಸ್ಟಾರ್ ನಟ ಎನಿಸಿಕೊಂಡಿರುವ ಮಹೇಶ್ ಬಾಬು ಅವರಿಗೆ ಇಂದು (ಆಗಸ್ಟ್ 9) ಹುಟ್ಟಿದ ದಿನ. ಟಾಲಿವುಡ್ನಲ್ಲಿ ಅವರು ಪ್ರಿನ್ಸ್ ಎಂದು ಫೇಮಸ್ ಆಗಿದ್ದಾರೆ. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಟಾಲಿವುಡ್ ನಟ ಹಾಗೂ ನಿರ್ಮಾಪಕ ಕೃಷ್ಣ ಅವರ ಮಗ. 1975ರಲ್ಲಿ ಜನಿಸಿದ ಅವರು ನಾಲ್ಕೇ ವರ್ಷಗಳಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಅನ್ನುವುದು ವಿಶೇಷ. ಅವರ ಬಗ್ಗೆ, ಅವರ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಹೇಶ್ ಬಾಬು ಅವರು 1979ರಲ್ಲಿ ‘ನೀದಾ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರು. ಆ ಬಳಿಕ ಕೆಲವು ಸಿನಿಮಾಗಳಲ್ಲಿ ಅವರು ಬಾಲ ಕಲಾವಿದನಾಗಿ ಮಿಂಚಿದರು. 1999ರಲ್ಲಿ ರಿಲೀಸ್ ಆದ ‘ರಾಜಕುಮಾರುಡು’ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಆ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಮಹೇಶ್ ಬಾಬು ನೀಡಿದ್ದಾರೆ.
ಮಹೇಶ್ ಬಾಬು ಅವರ ಆಸ್ತಿ 330 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಟಾಲಿವುಡ್ನ ಶ್ರೀಮಂತ ಹೀರೋಗಳಲ್ಲಿ ಒಬ್ಬರು. ಅವರು ಪ್ರತಿ ಚಿತ್ರಕ್ಕೆ 50-80 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಮಹೇಶ್ ಬಾಬು ಸದ್ಯ ರಾಜಮೌಳಿ ಚಿತ್ರದಲ್ಲಿ ನಟಿಸುತ್ತಿದ್ದು ಇದಕ್ಕಾಗಿ 125 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಮೊದಲ ಚಿತ್ರಕ್ಕೆ ಮಹೇಶ್ ಬಾಬು ಪಡೆದಿದ್ದು ಕೇವಲ 75 ಲಕ್ಷ ರೂಪಾಯಿ. ಈಗ ಅವರು ನುರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ‘ಶ್ರೀಮಂತುಡು’, ‘ಭರತನೆ ನೇನು’, ‘ಸರ್ಕಾರು ವಾರಿ ಪಾಠ’ ಸಿನಿಮಾಗಳು ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿವೆ. ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಚಿತ್ರಕ್ಕೆ ಅವರು ಚಾರ್ಜ್ ಮಾಡಿದ್ದು 78 ಕೋಟಿ ರೂಪಾಯಿ.
ಮಹೇಶ್ ಬಾಬು ಅವರು ಹೈದರಾಬಾದ್ನ ಜುಬ್ಲೀ ಹಿಲ್ಸ್ನಲ್ಲಿ ಮನೆ ಹೊಂದಿದ್ದು, ಇದರ ಬೆಲೆ 30 ಕೋಟಿ ರೂಪಾಯಿ. ಅವರು ನಟಿ ಹಾಗೂ ಉದ್ಯಮಿ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ದಾನ ಮಾಡೋ ಹಣದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ಮಾಡಬಹುದು
ಮಹೇಶ್ ಬಾಬು ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ಐಷಾರಾಮಿ ಕಾರುಗಳಲ್ಲಿ ಅವರು ಓಡಾಟ ನಡೆಸುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾದ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಬಗ್ಗೆ ಫ್ಯಾನ್ಸ್ಗೆ ಸಖತ್ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:15 am, Fri, 9 August 24