AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ

ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಕಂಟೆಂಟ್ ಕ್ರಿಯೇಟರ್​ಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಲಾವಿದರ ವಿಡಿಯೋ, ಚಿತ್ರಗಳನ್ನು ಬಳಿಸಿಕೊಂಡು ಮೀಮ್, ಟ್ರೋಲ್, ವಿಡಿಯೋಗಳನ್ನು ಹಂಚಿಕೊಳ್ಳುವ ಕಂಟೆಂಟ್ ಕ್ರಿಯೇಟರ್​ಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ
ಮಂಚು ವಿಷ್ಣು
ಮಂಜುನಾಥ ಸಿ.
|

Updated on: Jul 11, 2024 | 11:33 AM

Share

ಕೆಲವು ದಿನಗಳ ಹಿಂದಷ್ಟೆ ತೆಲುಗು ಯೂಟ್ಯೂಬರ್ ಒಬ್ಬ ತನ್ನ ವಿಡಿಯೋನಲ್ಲಿ ತಂದೆ-ಮಗಳ ಸಂಬಂಧದ ಬಗ್ಗೆ ಅಶ್ಲೀಲ ಮಾತುಗಳನ್ನಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಟಾಲಿವುಡ್​ನ ಹಲವು ನಟ-ನಟಿಯರು ಈ ವಿಡಿಯೋದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಟ, ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಸಹ ಈ ವಿಡಿಯೋಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಮಂಚು ವಿಷ್ಣು, ಎಲ್ಲ ಕಂಟೆಂಟ್ ಕ್ರಿಯೇಟರ್​, ಯೂಟ್ಯೂಬರ್​ಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಯಾವುದೇ ನಟ ಅಥವಾ ನಟಿಯರ ವಿಡಿಯೋ, ಚಿತ್ರಗಳನ್ನು ಬಳಸಿ ಅಸಹ್ಯಕರ ಮೀಮ್​ಗಳು, ಟ್ರೋಲ್ ಗಳು, ವಿಡಿಯೋಗಳನ್ನು ಮಾಡುತ್ತಿರುವುದನ್ನು ವಿರೋಧಿಸಿರುವ ಮಂಚು ವಿಷ್ಣು, ಆ ಎಲ್ಲ ವಿಡಿಯೋಗಳು, ಮೀಮ್​ಗಳನ್ನು ಎರಡು ದಿನದ ಒಳಗಾಗಿ ಡಿಲೀಟ್ ಮಾಡಬೇಕು ಇಲ್ಲವಾದರೆ ಕಲಾವಿದರ ಸಂಘ (ಮಾ) ವತಿಯಿಂದ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ’ ಎಂದಿದ್ದಾರೆ. ಹಲವು ನಟ-ನಟಿಯರು, ಮೀಮ್, ಟ್ರೋಲ್ ಇತರೆ ವಿಡಿಯೋಗಳಿಗೆ ತಮ್ಮ ಚಿತ್ರ, ವಿಡಿಯೋಗಳನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಸಹ ವಿಡಿಯೋನಲ್ಲಿ ಮಂಚು ವಿಷ್ಣು ಹೇಳಿದ್ದಾರೆ.

ಅಸಲಿಗೆ ಮಂಚು ವಿಷ್ಣು ಬಗ್ಗೆಯೂ ಸಹ ಹಲವು ಟ್ರೋಲ್​ಗಳಿವೆ. ಅವರು ಈ ಹಿಂದೆ ಮಾಧ್ಯಮಗಳ ಬಳಿ ಮಾತನಾಡುತ್ತಾ ಆಡಿರುವ ಮಾತುಗಳನ್ನೇ ಇಟ್ಟುಕೊಂಡು ಟ್ರೋಲ್ ವಿಡಿಯೋಗಳನ್ನು ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆ ಆದ ‘ಕಣ್ಣಪ್ಪ’ ಸಿನಿಮಾದ ಟ್ರೈಲರ್​ನ ಕೆಲ ದೃಶ್ಯಗಳನ್ನು ತೆಗೆದುಕೊಂಡು ಸಹ ಟ್ರೋಲ್ ವಿಡಿಯೋಗಳನ್ನು ಮಾಡಲಾಗಿದೆ. ಅಸಲಿಗೆ ಟಾಲಿವುಡ್​ನಲ್ಲಿ ಅತಿಯಾಗಿ ಟ್ರೋಲ್ ಆಗುವ ನಟರಲ್ಲಿ ಮಂಚು ವಿಷ್ಣು ಪ್ರಮುಖರು. ಹಾಗಾಗಿಯೇ ಮಂಚು ವಿಷ್ಣು ಈಗ ಕಂಟೆಂಟ್ ಕ್ರಿಯೇಟರ್​ಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರೇವ್ ಪಾರ್ಟಿ: ನಟಿ ಹೇಮಾ ಬೆಂಬಲಕ್ಕೆ ನಟ ಮಂಚು ವಿಷ್ಣು ಮತ್ತು ಕಲಾವಿದರ ಸಂಘ

ವಿಡಿಯೋನಲ್ಲಿ ಹಿರಿಯ ನಟ ಬ್ರಹ್ಮಾನಂದಂ ಅವರ ಬಗ್ಗೆಯೂ ಮಾತನಾಡಿರುವ ಮಂಚು ವಿಷ್ಣು, ಬ್ರಹ್ಮಾನಂದಂ ಅವರ ಚಿತ್ರಗಳನ್ನು ಬಳಸಿ ಹಲವು ಮೀಮ್​ಗಳನ್ನು ಮಾಡಲಾಗುತ್ತಿದೆ. ಅವರಿಗೆ ಇದು ಇಷ್ಟವಿಲ್ಲ. ಈ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ನಟ-ನಟಿಯರು ಈ ಮೀಮ್, ಟ್ರೋಲ್​ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಕೂಡಲೇ ಆ ವಿಡಿಯೋಗಳನ್ನು, ಚಿತ್ರಗಳನ್ನು ಡಿಲೀಟ್ ಮಾಡಿ, ಇಲ್ಲವಾದರೆ ಕಾನೂನು ಕ್ರಮ ಎದುರಿಸಿ ಎಂದಿದ್ದಾರೆ ಮಂಚು ವಿಷ್ಣು.

ತಂದೆ-ಮಗಳ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಯೂಟ್ಯೂಬರ್ ವಿರುದ್ಧ ಹಲವು ದೂರುಗಳು ತೆಲಂಗಾಣದಲ್ಲಿ ದಾಖಲಾಗಿದ್ದವು. ಕೊನೆಗೆ ತೆಲಂಗಾಣ ಸೈಬರ್ ವಿಭಾಗದ ಪೊಲೀಸರು ಯೂಟ್ಯೂಬರ್ ಪ್ರಣೀತ್ ಹನುಮಂತು ಅನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆ ಪ್ರಕರಣದ ಬಳಿಕ ಕಂಟೆಂಟ್ ಕ್ರಿಯೇಟರ್​ಗಳ ಅಶ್ಲೀಲ ಕಂಟೆಂಟ್​ಗಳ ಬಗ್ಗೆ ತೀವ್ರ ಆಕ್ರೋಶ ಸ್ಪೋಟಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು