
ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ನಿರ್ದೇಶನದ ಕೊನೆಯ ಸಿನಿಮಾ ‘ಥಗ್ ಲೈಫ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ಹೀನಾಯ ಸೋಲು ಕಂಡಿತು. ಇಂದಿನ ಜನರ ಇಷ್ಟಕ್ಕೆ ತಕ್ಕಂತೆ ಅವರು ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹಲವರು ಸಲಹೆ ನೀಡಿದ್ದರು. ಹೀಗಾಗಿ, ಮಣಿರತ್ನಂ ಈಗ ತಮಗೆ ಅತ್ಯಂತ ಹಿಡಿತವಿರುವ ರೋಮ್ಯಾಂಟಿಕ್ ಕಥೆಗಳ ಜೋನರ್‌ಗೆ ಮರಳಿದ್ದಾರೆ ಎಂದು ವರದಿ ಆಗಿದೆ.
ಮಣಿರತ್ನಂ ಕೋಲ್ಕತ್ತಾದ ಹೌರಾ ಬ್ರಿಡ್ಜ್ ಹಿನ್ನೆಲೆ ಇಟ್ಟುಕೊಂಡು ಹೊಸ ಕಥೆಯೊಂದನ್ನು ಹೆಣೆಯುತ್ತಿದ್ದಾರೆ. ತಮ್ಮ ಕೊನೆಯ ಸಿನಿಮಾ ಸೋಲಿನ ಬಳಿಕ ಅವರು ಮತ್ತೊಮ್ಮೆ ಪ್ರೇಮಕಥೆಯನ್ನೇ ಕೈಗೆತ್ತಿಕೊಂಡಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸಿನಿರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕೋಲ್ಕತ್ತಾದ ಸುಂದರ ಪರಿಸರದಲ್ಲಿ ಚಿತ್ರದ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ.
ಮಣಿರತ್ನಂ ಕೊನೆಯದಾಗಿ 2009ರ ‘ರಾವಣ್’ ಸಿನಿಮಾಗಾಗಿ ಕೋಲ್ಕತ್ತಾದಲ್ಲಿ ಶೂಟಿಂಗ್ ಮಾಡಿದ್ದರು. ಈಗ ದಶಕಗಳ ಬಳಿಕ ಮತ್ತೆ ಪ್ರೇಮಕಾವ್ಯವನ್ನು ತೆರೆಗೆ ತರಲು ಈ ಸುಂದರ ನಗರವನ್ನು ಆರಿಸಿಕೊಂಡಿದ್ದಾರೆ. ಹೌರಾ ಬ್ರಿಡ್ಜ್ ಈಗಾಗಲೇ ಹಲವು ಎವರ್‌ಗ್ರೀನ್ ಪ್ರೇಮಕಥೆಗಳಿಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಮುರಿಯಿತು 34 ವರ್ಷಗಳ ಸ್ನೇಹ: ಎಆರ್ ರೆಹಮಾನ್ ಕೈಬಿಟ್ಟ ಮಣಿರತ್ನಂ
ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ಅವರು ವಿಜಯ್ ಸೇತುಪತಿ ಜೊತೆ ‘ಚೆಕ್ಕ ಚಿವಂತ ವಾನಮ್’ ಬಳಿಕ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ನಟಿ ಸಾಯಿ ಪಲ್ಲವಿ ಅವರೊಂದಿಗೆ ಮಣಿರತ್ನಂಗೆ ಇದು ಮೊದಲ ಸಿನಿಮಾವಾಗಿದೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಈ ಮೊದಲು ವೇದಿಕೆ ಒಂದರಲ್ಲಿ ಸಾಯಿ ಪಲ್ಲವಿಗೆ ವೇದಿಕೆ ಮೇಲೆಯೇ ಸಾಯಿ ಪಲ್ಲವಿಗೆ ಸಿನಿಮಾ ಆಫರ್ ಕೊಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.