ನಾಗ ಚೈತನ್ಯ ನನಗಿಷ್ಟ, ಅವರನ್ನು ಮದುವೆ ಆಗೊದೇ ನನ್ನ ಟಾರ್ಗೆಟ್ ಎಂದ ನಟಿ

ನಾಗ ಚೈತನ್ಯ ಬಗ್ಗೆ ಹರಿದಾಡುತ್ತಿರುವ ವಿಚಾರಗಳು ಒಂದೆರಡಲ್ಲ. ಶೋಭಿತಾ ಜೊತೆ ನಾಗ ಚೈತನ್ಯ ರಿಲೇಶನ್​ಶಿಪ್ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಗ ಚೈತನ್ಯ ನನಗಿಷ್ಟ, ಅವರನ್ನು ಮದುವೆ ಆಗೊದೇ ನನ್ನ ಟಾರ್ಗೆಟ್ ಎಂದ ನಟಿ
ರೀತು-ನಾಗ ಚೈತನ್ಯ

Updated on: Sep 26, 2023 | 10:33 AM

ನಾಗ ಚೈತನ್ಯ (Naga Chaitanya) ಅವರು ಟಾಲಿವುಡ್​ನ ಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಸಮಂತಾ ಅವರಿಂದ 2021ರಲ್ಲಿ ಅವರು ವಿಚ್ಛೇದನ ಪಡೆದರು. ನಾಗ ಚೈತನ್ಯ ರಿಲೇಶನ್​ಶಿಪ್ ಸ್ಟೇಟಸ್ ಬಗ್ಗೆ ಹಲವು ವಿಚಾರಗಳು ಹರಿದಾಡುತ್ತಿವೆ. ಹೀಗಿರುವಾಗಲೇ ನಟಿಯೊಬ್ಬರು, ‘ನಾಗ ಚೈತನ್ಯ ಅವರನ್ನು ಮದುವೆ ಆಗೋದೇ ನನ್ನ ಟಾರ್ಗೆಟ್’ ಎಂದು ಹೇಳಿದ್ದಾರೆ. ಅವರು ಬೇರಾರು ಅಲ್ಲ ನಟಿ ರೀತು ಚೌಧರಿ. ಸದ್ಯ ಅವರ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ.

ಸಂದರ್ಶನ ಒಂದರಲ್ಲಿ ರೀತು ಚೌಧರಿ ಮಾತನಾಡಿದ್ದಾರೆ. ‘ನನಗೆ ನಾಗ ಚೈತನ್ಯ ಸಖತ್ ಇಷ್ಟ. ಅವರನ್ನು ಮದುವೆ ಆಗೋದೇ ನನ್ನ ಜೀವನದ ಟಾರ್ಗೆಟ್’ ಎಂದು ಅವರು ಹೇಳಿದ್ದಾರೆ. ಇನ್ನು ಡಿವೋರ್ಸ್ ಆದ ವ್ಯಕ್ತಿಯನ್ನು ಮದುವೆ ಆಗುವ ಬಗ್ಗೆ ಇರುವ ಅಭಿಪ್ರಾಯ ಏನು ಎಂದು ಅವರಿಗೆ ಕೇಳಲಾಯಿತು. ‘ನನಗೆ ಆ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ’ ಎಂದಿದ್ದಾರೆ.

ಈ ವಿಚಾರದಲ್ಲಿ ನಾಗ ಚೈತನ್ಯ ಅವರು ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರೀತು ಅವರು ‘ಗೋರಿಂಟಕು’ ಧಾರಾವಾಹಿ ಮೂಲಕ ಖ್ಯಾತಿ ಪಡೆದರು. ಗಾಯತ್ರಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ.

ನಾಗ ಚೈತನ್ಯ ಬಗ್ಗೆ ಹರಿದಾಡುತ್ತಿರುವ ವಿಚಾರಗಳು ಒಂದೆರಡಲ್ಲ. ಶೋಭಿತಾ ಜೊತೆ ನಾಗ ಚೈತನ್ಯ ರಿಲೇಶನ್​ಶಿಪ್ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ನಾಗ ಚೈತನ್ಯ ಅವರು ಉದ್ಯಮಿ ಕುಟುಂಬದ ಹುಡುಗಿಯನ್ನು ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಯಿತು. ಆದರೆ, ಈ ವಿಚಾರದಲ್ಲಿ ಸತ್ಯ ಇಲ್ಲ.


ಇದನ್ನೂ ಓದಿ: ಸಾಯಿ ಪಲ್ಲವಿ ಹೊಸ ಸಿನಿಮಾ ಘೋಷಣೆ: ನಾಗ ಚೈತನ್ಯ ಅದೃಷ್ಟ ಬದಲಾಗುತ್ತಾ?

ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ವಿಚ್ಛೇದನ ಪಡೆದ ಬಳಿಕ ತಮ್ಮ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಬ್ಬರೂ ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ಡಿವೋರ್ಸ್ ಏಕಾಯಿತು ಎಂಬುದಕ್ಕೆ ಯಾವುದೇ ಕಾರಣ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ