ಜಾತಿ ನಿಂದನೆ ಆರೋಪದಡಿ ಕಾಲಿವುಡ್ ನಟಿ, ಮಾಡೆಲ್ ಹಾಗೂ ತಮಿಳು ಬಿಗ್ ಬಾಸ್ ಮಾಜಿ ಸ್ಪರ್ಧಿ ಮೀರಾ ಮಿಥುನ್ ಅವರನ್ನು ಕೇಂದ್ರ ಅಪರಾಧ ತನಿಖಾ ದಳ ಇಂದು (ಆಗಸ್ಟ್ 14) ಬಂಧಿಸಿದೆ. ಇದಕ್ಕೂ ಮೊದಲು ಅವರು ಕೂಗಾಟ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.
‘ಅನೈತಿಕ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಂಡಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಾರೆ. ಕಾರಣ ಇಲ್ಲದೇ ಯಾರೂ ಯಾರ ಬಗ್ಗೆಯೂ ಕೆಟ್ಟದ್ದು ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಕಾರಣ. ಅಂಥವರನ್ನೆಲ್ಲ ಚಿತ್ರರಂಗದಿಂದ ತೊಲಗಿಸಲು ಇದು ಸರಿಯಾದ ಸಮಯ ಅಂತ ನನಗೆ ಅನಿಸುತ್ತದೆ’ ಎಂದು ಸಂದರ್ಶನವೊಂದರಲ್ಲಿ ಮೀರಾ ಹೇಳಿಕೆ ನೀಡಿದ್ದರು.
ಮೀರಾ ಮಿಥುನ್ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಜಾತಿ ನಿಂದನೆ ಆರೋಪದಡಿಯಲ್ಲಿ ಮೀರಾ ವಿರುದ್ಧ ಸಾಕಷ್ಟು ಪ್ರಕರಣಗಳು ಕೂಡ ದಾಖಲಾಗಿದ್ದವು. ಈ ಸಂಬಂಧ ಪೊಲೀಸರು ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಈಗ ಮೀರಾ ಬಂಧನ ನಡೆದಿದೆ. ನಟಿ ವಿರುದ್ಧ ಐಪಿಸಿ ಸೆಕ್ಷನ್ 153, 153ಎ(1)(ಎ), 505(1)(ಬಿ), 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಬಂಧನಕ್ಕೂ ಮೊದಲು ಮೀರಾ ಲೈವ್ ಬಂದಿದ್ದಾರೆ. ಈ ವೇಳೆ ಪೊಲೀಸರು ಮೊಬೈಲ್ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಮೀರಾ ನಿರಾಕರಿಸಿದ್ದಾರೆ. ಅಲ್ಲದೆ, ಪೊಲೀಸರು ನನಗೆ ಕಿರುಕುಳ ನೀಡೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ, ರಂಪಾಟ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಕೂಡ ವೈರಲ್ ಆಗಿದೆ.
மீரா மிதுன் கேரளாவில் கைது. பட்டியலினத்தவர்களை அவதூறாக பேசியதால் மத்திய குற்றப்பிரிவினர் கைது செய்தனர்.
கைதுக்கு முன் மீரா வெளியிட்ட வீடியோ..#MeeraMitun pic.twitter.com/hzQKT1zKrH
— Anandakumar Murugesan (@AnandAathiraa) August 14, 2021
ಮೀರಾ ಕಾಲಿವುಡ್ನಲ್ಲಿ ಅಷ್ಟು ಚಿರಪರಿಚಿತ ಮುಖವಲ್ಲ. ಅವರು ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು. ಮೀರಾಗೆ, ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ. ತಮಿಳು ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ಮೀರಾ ಎಂಟ್ರಿ ಕೊಟ್ಟಿದ್ದರು. ನಂತರ ಅವರ ಜನಪ್ರಿಯತೆ ಕೊಂಚ ಹೆಚ್ಚಿತ್ತು.
ಇದನ್ನೂ ಓದಿ: ‘ಪರಿಶಿಷ್ಟ ಜಾತಿ ಜನರನ್ನು ಚಿತ್ರರಂಗದಿಂದ ಓಡಿಸಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಮೀರಾ ವಿರುದ್ಧ ಕೇಸ್
ಬಿಗ್ ಬಾಸ್ ಮಿನಿ ಸೀಸನ್ ನಿರೂಪಣೆಗೆ ಸುದೀಪ್ ಬರೋದು ಪಕ್ಕಾ; ಆದರೆ ಯಾವಾಗ?