‘ಬಾಸ್​ನಿಂದ ಈಗಷ್ಟೇ ಬೋರ್ಡಿಂಗ್ ಪಾಸ್ ಸಿಕ್ಕಿದೆ’; ಖ್ಯಾತ ನಿರ್ದೇಶಕನ ಬಿಗ್ ಅಪ್​ಡೇಟ್

ಚಿರಂಜೀವಿ ಮತ್ತು ಪ್ರಸಿದ್ಧ ನಿರ್ದೇಶಕ ಅನಿಲ್ ರಾವಿಪುಡಿ ಅವರು ಶೀಘ್ರದಲ್ಲೇ ಹೊಸ ಕಾಮಿಡಿ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಘೋಷಿಸಲಾಗಿದೆ. ಈ ಸಿನಿಮಾ ಬೇಸಿಗೆಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಚಿರಂಜೀವಿ ಅವರು ಈ ಚಿತ್ರವು ಅತ್ಯಂತ ಹಾಸ್ಯಮಯವಾಗಿರುತ್ತದೆ ಎಂದು ಹೇಳಿದ್ದಾರೆ. ಅನಿಲ್ ರಾವಿಪುಡಿ ಅವರು ಈ ಹಿಂದೆ ಹಲವಾರು ಸೂಪರ್ ಹಿಟ್ ಕಾಮಿಡಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

‘ಬಾಸ್​ನಿಂದ ಈಗಷ್ಟೇ ಬೋರ್ಡಿಂಗ್ ಪಾಸ್ ಸಿಕ್ಕಿದೆ’; ಖ್ಯಾತ ನಿರ್ದೇಶಕನ ಬಿಗ್ ಅಪ್​ಡೇಟ್
ಅನಿಲ್ ರವಿಪುಡಿ

Updated on: Feb 10, 2025 | 7:29 AM

ಇತ್ತೀಚೆಗಷ್ಟೇ ತೆಲುಗಿನಲ್ಲಿ ರಿಲೀಸ್ ಆದ ‘ಸಂಕ್ರಾಂತಿ ಕಿ ವಸ್ತುನ್ನಾಮ್’ ಸಿನಿಮಾ ಸಂಕ್ರಾಂತಿ ದಿನವೇ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಪಕ್ಕಾ ಕಾಮಿಡಿ ಸಿನಿಮಾ. ಈ ಚಿತ್ರದ ಮೂಲಕ ನಿರ್ದೇಶಕ ಅನಿಲ್ ರಾವಿಪುಡಿ ಅವರು ದೊಡ್ಡ ಗೆಲುವು ಕಂಡರು. ಅನಿಲ್ ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. ಈಗ ಅವರು ಮೆಗಾಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಆಗಿದೆ. ‘ಬಾಸ್ ಕಡೆಯಿಂದ ಈಗಷ್ಟೇ ಬೋರ್ಡಿಂಗ್ ಪಾಸ್ ಸಿಕ್ಕಿದೆ’ ಎಂದಿದ್ದಾರೆ ಅವರು.

ವಿಶ್ವಕ್ ಸೇನ್ ಅವರ ‘ಲೈಲಾ’ ಚಿತ್ರದ ಪ್ರೀ ರಿಲೀಸ್ ಈವೆಂಟ್​ಗೆ ಅನಿಲ್ ಅವರು ಆಗಮಿಸಿದ್ದರು. ಈ ವೇದಿಕೆ ಮೇಲೆ ಚಿರಂಜೀವಿ ಕೂಡ ಇದ್ದರು. ಚಿರಂಜೀವಿ ಅವರು ಅನಿಲ್ ಜೊತೆ ಸಿನಿಮಾ ಮಾಡೋ ಘೋಷಣೆ ಮಾಡಿಯೇ ಬಿಟ್ಟರು.

‘ನನಗೆ ಬಾಸ್ ಕಡೆಯಿಂದ ಈಗಷ್ಟೇ ಬೋರ್ಡಿಂಗ್ ಪಾಸ್ ಸಿಕ್ಕಿದೆ. ಅವರ ಜೊತೆಗಿನ ಇದು ಮೆಮೊರೆಬಲ್ ಜರ್ನಿ ಆಗಿರಲಿದೆ ಎಂಬುದು ನನ್ನ ನಂಬಿಕೆ’ ಎಂದಿದ್ದಾರೆ ಅನಿಲ್.  ಆ ಬಳಿಕ ಚಿರಂಜೀವಿ ಅವರೇ ಈ ಬಗ್ಗೆ ಅಪ್​ಡೇಟ್ ಕೊಡುವಂತೆ ಅನಿಲ್ ಕೇಳಿಕೊಂಡರು. ಚಿರಂಜೀವಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

‘ನಾನು ಶೀಘ್ರವೇ ಅನಿಲ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ರಿಲೀಸ್ ಯಾವಾಗ ಆಗುತ್ತದೆ ಎಂದು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಆದರೆ, ಈ ಬೆಸಿಗೆಯಲ್ಲಿ ಚಿತ್ರ ಆರಂಭ ಆಗುತ್ತದೆ. ಇದು ಪಕ್ಕಾ ಕಾಮಿಡಿ ಸಿನಿಮಾ. ಚಿತ್ರದ ದೃಶ್ಯವನ್ನು ಹೇಳಿದರೇ ಎಲ್ಲರೂ ನಗುತ್ತಾರೆ. ಅಷ್ಟು ಕಾಮಿಡಿ ಇದೆ’ ಎಂದು ಚಿರಂಜೀವಿ ಅವರು ರಿವೀಲ್ ಮಾಡಿದರು. ಅನಿಲ್ ರಾವಿಪುಡಿ ಕೂಡ ಖುಷಿಯಿಂದ ಈ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ಖ್ಯಾತ ನಿರ್ದೇಶಕನ ಕಚೇರಿಯಲ್ಲಿ ದೊಡ್ಡದಾಗಿ ಹಾಕಲಾಗಿದೆ ಚಿರಂಜೀವಿ ಫೋಟೋ

ತೆಲುಗು ಇಂಡಸ್ಟ್ರಿಯಲ್ಲಿ ಹಲವು ಸೂಪರ್​ ಹಿಟ್ ಕಾಮಿಡಿ ಚಿತ್ರಗಳನ್ನು ಅನಿಲ್ ನೀಡಿದ್ದಾರೆ. ಈಗ ಅವರಿಗೆ ಚಿರಂಜೀವಿ ಜೊತೆ ಸಿನಿಮಾ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ‘ಪ್ರತಿಯೊಬ್ಬ ನಿರ್ದೇಶಕ ಅಥವಾ ತಂತ್ರಜ್ಞರು ಚಿರಂಜೀವಿ ಅವರ ಸಿನಿಮಾಗಳನ್ನು ಒಮ್ಮೆಯಾದರೂ ನೋಡಿರುತ್ತಾರೆ. ಅನೇಕರು ಅವರೊಂದಿಗೆ ಕೆಲಸ ಮಾಡಲು ಬಯಸುತ್ತಾರೆ. ನನಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ’ ಎಂದಿದ್ದಾರೆ ಅನಿಲ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.