ಖ್ಯಾತ ನಿರ್ದೇಶಕನ ಕಚೇರಿಯಲ್ಲಿ ದೊಡ್ಡದಾಗಿ ಹಾಕಲಾಗಿದೆ ಚಿರಂಜೀವಿ ಫೋಟೋ
ಖ್ಯಾತ ನಿರ್ದೇಶಕನ ಕಚೇರಿಯಲ್ಲಿ ಚಿರಂಜೀವಿ ಅವರ ‘ಆರಾಧನಾ’ ಚಿತ್ರದ ಐಕಾನಿಕ್ ಪೋಸ್ಟರ್ ಇದೆ. ಸಂದೀಪ್ ರೆಡ್ಡಿ ಚಿರಂಜೀವಿ ಅವರ ದೊಡ್ಡ ಅಭಿಮಾನಿ ಎಂದು ತಿಳಿದುಬಂದಿದೆ. ಚಿರಂಜೀವಿನ ಅವರು ಅನೇಕ ಸಂದರ್ಭಗಳಲ್ಲಿ ಹೊಗಳಿದ್ದಾರೆ. ಈ ಪೋಸ್ಟರ್ ಅವರ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಟಾಲಿವುಡ್ನ ಖ್ಯಾತ ನಟರಲ್ಲಿ ಚಿರಂಜೀವಿ ಅವರಿಗೂ ಸ್ಥಾನ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಹೊಸಬರದಿಂದ ಹಿಡಿದು ಎಲ್ಲಾ ರೀತಿಯ ನಿರ್ದೇಶಕರು ಹಾಗೂ ಕಲಾವಿದರನ್ನು ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಫೋಟೋ ಅನೇಕರ ಮನೆಯಲ್ಲಿ ಇದೆ. ಅದೇ ರೀತಿ ಸ್ಟಾರ್ ನಿರ್ದೇಶಕನ ಕಚೇರಿಯಲ್ಲೂ ಇವರ ಫೋಟೋ ದೊಡ್ಡದಾಗಿ ರಾರಾಜಿಸುತ್ತಿದೆ. ಅಷ್ಟಕ್ಕೂ ಯಾರು ಆ ನಿರ್ದೇಶಕರು? ಸಂದೀಪ್ ರೆಡ್ಡಿ ವಂಗ.
ಸಂದೀಪ್ ರೆಡ್ಡಿ ವಂಗ ನೀಡಿದ್ದು ಮೂರೇ ಮೂರು ಸಿನಿಮಾ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’. ಮೂರು ಸಿನಿಮಾಗಳು ಸೂಪರ್ ಡೂಪರ್ ಹಿಟ್. ಅದರಲ್ಲೂ ‘ಅನಿಮಲ್’ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಮಾಡಿದ್ದು ಗೊತ್ತೇ ಇದೆ. ಇತ್ತೀಚೆಗೆ ಸಂದೀಪ್ ರೆಡ್ಡಿ ಅವರು ತಮ್ಮ ಕಚೇರಿಯ ಚಿತ್ರ ಹಂಚಿಕೊಂಡಿದ್ದು, ಮೆಗಾಸ್ಟಾರ್ ಚಿರಂಜೀವಿ ಫೋಟೋ ಕಾಣಿಸಿದೆ.
ಇದು ಚಿರಂಜೀವಿ ಸಾಮಾನ್ಯವಾಗಿ ಪೋಸ್ ಕೊಡುತ್ತಾ ನಿಂತ ಫೋಟೋ ಅಲ್ಲವೇ ಅಲ್ಲ. ಬದಲಿಗೆ ‘ಆರಾಧನಾ’ ಚಿತ್ರದಲ್ಲಿ ಬರೋ ಒಂದು ದೃಶ್ಯದ ಪೋಸ್ಟರ್ ಆಗಿದೆ. ಈ ಪೋಸ್ಟರ್ನ ಹಿನ್ನೆಲೆಯ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲಸ ಆಗುತ್ತಿದೆ. ಅನೇಕರು ಸಂದೀಪ್ ರೆಡ್ಡಿ ವಂಗ ಅವರನ್ನು ಶ್ಲಾಘಿಸುತ್ತಿದ್ದಾರೆ. ಸಂದೀಪ್ ಅವರು ಚಿರಂಜೀವಿಯ ದೊಡ್ಡ ಅಭಿಮಾನಿ. ಅನೇಕ ಸಂದರ್ಶನದಲ್ಲಿ ಚಿರಂಜೀವಿಯನ್ನು ಹೊಗಳಿದ್ದಾರೆ. ಅವರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಇವರು ವಿವರಿಸಿದ್ದೂ ಇದೆ. ಈಗ ಅವರದ್ದೇ ಸಿನಿಮಾದ ಒಂದು ಪ್ರಮುಖ ದೃಶ್ಯವನ್ನು ಫ್ರೇಮ್ ಮಾಡಿಟ್ಟುಕೊಂಡಿದ್ದು ವಿಶೇಷ. ಇವರು ಒಟ್ಟಾಗಿ ಸಿನಿಮಾ ಮಾಡಲಿ ಎಂದು ಅನೇಕರು ಕೋರಿಕೊಂಡಿದ್ದಾರೆ.
‘ಆರಾಧಾನಾ ಸಿನಿಮಾ ಒಂದೊಳ್ಳೆಯ ಉದಾಹರಣೆ. ನಿನ್ನಯೆವರೆಗೂ ಇದೊಂದು ಸಾಮಾನ್ಯ ದೃಶ್ಯವಾಗಿತ್ತು. ಆದರೆ, ಈ ದೃಶ್ಯ ಈಗ ಐಕಾನಿಕ್ ಆಗಿದೆ. ಇದಕ್ಕೆ ಕಾರಣ ಸಂದೀಪ್ ರೆಡ್ಡಿ ವಂಗ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಚಿರಂಜೀವಿ ಬಗ್ಗೆ ಅವರಿಗೆ ಇರೋ ಪ್ರೀತಿ ವಿಶೇಷವಾದುದ್ದು ಎಂದಿದ್ದಾರೆ.
ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ಜೋಡಿ ಆಗ್ತಾರಾ ತ್ರಿಶಾ-ಪ್ರಭಾಸ್?
ಸಂದೀಪ್ ಅವರು ತಮ್ಮ ಮುಂದಿನ ಸಿನಿಮಾ ‘ಸ್ಪಿರಿಟ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ. ಅವರು, ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.