‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಿಮಗೆ ಬೀಳಲ್ಲ’; ನೇರವಾಗಿ ಹೇಳಿದ ರಚಿತಾ ರಾಮ್
ರಚಿತಾ ರಾಮ್ ಅವರು ಜೀ ಕನ್ನಡದ ಹೊಸ ರಿಯಾಲಿಟಿ ಶೋ ‘ಭರ್ಜರಿ ಬ್ಯಾಚುಲರ್ಸ್’ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೋನ ಪ್ರೋಮೋದಲ್ಲಿ ರಚಿತಾ ರಾಮ್ ಅವರು ತಮ್ಮನ್ನು ಗೆಲ್ಲಲು ಪ್ರಯತ್ನಿಸುವವರಿಗೆ ‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಾನು ನಿಮಗೆ ಬೀಳಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ನಟಿ ರಚಿತಾ ರಾಮ್ ಅವರಿಗೆ ಈಗ 32 ವರ್ಷ ವಯಸ್ಸು. ಈವರೆಗೆ ಅವರು ವಿವಾಹ ಆಗಿಲ್ಲ. ಚಿತ್ರರಂಗದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೈ ತುಂಬಾ ಸಿನಿಮಾ ಇರೋ ಕಾರಣಕ್ಕೆ ಸದ್ಯಕ್ಕಂತೂ ಅವರು ವಿವಾಹದ ಬಗ್ಗೆ ಆಲೋಚಿಸಿಲ್ಲ. ಈಗ ಅವರು ಒಂದು ಮಾತನ್ನು ನೇರವಾಗಿ ಹೇಳಿದ್ದಾರೆ. ‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಾನು ನಿಮಗೆ ಬೀಳಲ್ಲ’ ಎಂದಿದ್ದಾರೆ. ಅಷ್ಟಕ್ಕೂ ರಚಿತಾ ರಾಮ್ ಅವರು ಹೀಗೆ ಹೇಳಲು ಕಾರಣವೇನು? ಆ ಬಗ್ಗೆ ಇಲ್ಲಿದೆ ವಿವರ.
ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಆರಂಭ ಆಗುತ್ತಿದೆ. ಇದಕ್ಕೆ ರಚಿತಾ ರಾಮ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇದರ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಭಿನ್ನವಾಗಿ ಈ ಪ್ರೋಮೋನ ಮಾಡಲಾಗಿದ್ದು, ಗಮನ ಸೆಳೆದಿದೆ. ತಮ್ಮನ್ನು ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದವರಿಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
‘10 ಸಾವಿರ ವರ್ಷಗಳ ಹಿಂದೆ ಸುಂದರಿಯನ್ನು ಪಟಾಯಿಸಲು ಆದಿ ಮಾನವ ಗಾಲಿಯನ್ನು ಕಂಡು ಹಿಡಿದ. ಗಾಲಿ ಮನದಾಳದ ಬದಲು ಪಾತಾಳಕ್ಕೆ ಇಳಿಯಿತು. ಪ್ರೀತಿಯ ಕಿಚ್ಚು ಹಚ್ಚಲು ಬಂದವ ಬೆಂಕಿಯಲ್ಲಿ ಮರೆಯಾಗಿ ಹೋದ. ಹೂವು ತಂದವ ಮಿಂಚಿನಂತೆ ಮರೆಯಾದ. ಇವರ ಪ್ರೀತಿಯ ಹಸಿವು ಸ್ವಯಂವರಕ್ಕೂ ಕಾಲಿಟ್ಟಿತು. ಕಾಡಿನಿಂದ ನಾಡಿಗೆ ಬಂದರೂ ಬ್ಯಾಚುಲರ್ಗಳಾಗಿಯೇ ಉಳಿದರು’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
View this post on Instagram
ಇವರೆಲ್ಲ ಮದುವೆ ಆಗೋಕೆ ಪ್ರಯತ್ನಿಸುತ್ತಿರೋದು ರಚಿತಾ ರಾಮ್ ಅವರನ್ನು! ಇದಕ್ಕೆ ರಚಿತಾ ರಾಮ್, ‘ನೀವುಗಳು ನನ್ನ ಹಿಂದೆ ಎಷ್ಟೇ ವರ್ಷ ಬಂದರೂ ನಾನು ನಿಮಗೆ ಬೀಳಲ್ಲ’ ಎಂದಿದ್ದಾರೆ. ಈ ವೇಳೆ ರವಿಚಂದ್ರನ್ ಎಂಟ್ರಿ ಆಗುತ್ತದೆ. ಈ ರೀತಿಯಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಪ್ರೋಮೋ ಮೂಡಿ ಬಂದಿದೆ.
ಇದನ್ನೂ ಓದಿ: ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್’ ಶೋಗೆ ಕಾಲಿಟ್ಟ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್
ಡ್ರೋನ್ ಪ್ರತಾಪ್, ಹುಲಿ ಪ್ರತಾಪ್, ಉಲ್ಲಾಸ್, ಪ್ರವೀಣ್ ಜೈನ್ ಮೊದಲಾದವರು ‘ಭರ್ಜರಿ ಬ್ಯಾಚುಲರ್ಸ್’ ಶೋನ ಭಾಗವಾಗಲಿದ್ದಾರೆ. ಈ ಬಾರಿ ಈ ರಿಯಾಲಿಟಿ ಶೋ ಯಾವ ರೀತಿಯಲ್ಲಿ ಮನರಂಜನೆ ನೀಡಲಿದೆ ಎನ್ನುವ ಕುತೂಹಲ ಮೂಡಿದೆ. ರಚಿತಾ ರಾಮ್ ಹಾಗೂ ರವಿಚಂದ್ರನ್ ಜಡ್ಜ್ ಸ್ಥಾನದಲ್ಲಿ ಇರೋದ್ರಿಂದ ಮನರಂಜನೆ ಡಬಲ್ ಆಗೋದು ಗ್ಯಾರಂಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.