‘ಚಿತೆಯಿಂದ ಎದ್ದು ಬಂದವಳು’; ಭವ್ಯಾ ಸಾಧನೆ ಹೊಗಳಿದ ಸೃಜನ್ ಲೋಕೇಶ್
ಭವ್ಯಾ ಗೌಡ ಅವರು 'ಗೀತಾ' ಧಾರಾವಾಹಿ ಮತ್ತು ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳು ಜನರ ಗಮನ ಸೆಳೆದಿವೆ. ಬಿಗ್ ಬಾಸ್ ನಂತರ ಅವರ ಜನಪ್ರಿಯತೆ ಹೆಚ್ಚಾಗಿದೆ. 'ಬಾಯ್ಸ್ vs ಗರ್ಲ್ಸ್' ಶೋನಲ್ಲಿ ಪಾಲ್ಗೊಳ್ಳಲು ಅವರು ಅನಾರೋಗ್ಯದಿಂದ ವಿಫಲರಾಗಿದ್ದರು.

ಭವ್ಯಾ ಗೌಡ ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ‘ಗೀತಾ’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ಈ ಧಾರಾವಾಹಿಯಲ್ಲಿ ಗೀತಾ ಹೆಸರಿನ ಪಾತ್ರ ಮಾಡಿದ್ದರು. ಅಲ್ಲಿ ಅವರು ಆ್ಯಕ್ಷನ್ ಮೆರೆದ ಉದಾಹರಣೆಯೂ ಇದೆ. ಈ ಬಗ್ಗೆ ಅವರು ಸಾಕಷ್ಟು ಟ್ರೋಲ್ ಕೂಡ ಆಗಿದ್ದರು. ಈಗ ಇದನ್ನು ಸೃಜನ್ ಲೋಕೇಶ್ ಅವರು ನೆನಪಿಸಿಕೊಂಡಿದ್ದಾರೆ. ಅವರ ಬಗ್ಗೆ ಆದ ಟ್ರೋಲ್ಗಳನ್ನು ನೆನಪಿಸಿಕೊಂಡಿದ್ದಾರೆ. ಹಳೆಯದನ್ನು ಮರೆಯವಂತೆ ಭವ್ಯಾ ಕೋರಿದ್ದಾರೆ.
‘ನನಗೆ ಶೋ ಶುರುವಾದ ತಕ್ಷಣ ಭವ್ಯಾ ಫೈನಲ್ವರೆಗೆ ಬರ್ತಾಳೆ ಅಂತ ಗೊತ್ತಿತ್ತು.. ಫೈನಲ್ಗೆ ಬಂದೆ ತಾನೇ’ ಎಂದು ಸೃಜನ್ ಲೋಕೇಶ್ ಅವರಿ ಹೇಳಿದರು. ಇದಕ್ಕೆ ಭವ್ಯಾ ಅವರು ಟಾಪ್ 6ಗೆ ಬಂದೆ ಎಂದರು. ‘ಕಳೆದ ನಾಲ್ಕೈದು ವರ್ಷಗಳಲ್ಲಿ ಇವರು ಮಾಡಿರೋ ಪಾತ್ರ ಸಣ್ಣದಲ್ಲ. ಸತ್ತೋಗಿದಾಳೆ, ಕರೆದುಕೊಂಡು ಹೋಗಿ ಚಿತೆಯಲ್ಲಿ ಮಲಗಿಸಿಯೂ ಆಗಿದೆ. ಸುಡುತ್ತಾ ಇರುವ ಚಿತೆಯಿಂದ ಎದ್ದು ಬಂದಿದ್ದಾಳೆ’ ಎಂದು ‘ಗೀತಾ’ ಧಾರಾವಾಹಿ ಬಗ್ಗೆ ಹೇಳಿದರು ಸೃಜನ್.
‘ಅದು ಹಳೆಯದಾಯ್ತು, ಹೊಸ ಶೋ ಬಗ್ಗೆ ಹೇಳಿ’ ಎಂದರು ಭವ್ಯಾ. ಇದಕ್ಕೆ ಸೃಜನ್ ಲೋಕೇಶ್ ಒಪ್ಪಿಲ್ಲ ‘ತ್ರಿಲ್ಲರ್ ಮಂಜು ಬಿಟ್ಟರೇ ನೀವೇ. ನೀವು ಲೆಜೆಂಡರಿ. ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾಸ್ಟರ್ ಆಗಿದ್ದರು, ಅದಕ್ಕೂ ಮೊದಲು ಫೈಟ್ ಮಾಸ್ಟರ್ ಆಗಿದ್ದರು’ ಎಂದು ಭವ್ಯಾ ಗೌಡ ಅವರ ಕಾಲೆಳೆದರು ಸೃಜನ್ ಲೋಕೇಶ್.
ಇದನ್ನೂ ಓದಿ: ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ಭವ್ಯಾ ಗೌಡ ಅವರಿಗೆ ಇರೋ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಈಗ ಅವರು ಸಿನಿಮಾ ಮಾಡುವ ಕನಸು ಕಾಣುತ್ತಿದ್ದಾರೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಬೇಕಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ಅವರು ಈ ಶೋಗೆ ಬಂದಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಆ ಬಳಿಕ ಸಂದರ್ಶನಗಳಲ್ಲಿ ಈ ಬಗ್ಗೆ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.