AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಮಿಂಚಿದ ಕನ್ನಡ ಸಿನಿಮಾ ‘ಮಿಥ್ಯ’

Mithya Kannada movie: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಮಮ್ಮುಟಿ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡರೆ, ಅತ್ಯುತ್ತಮ ಮನೊರಂಜನಾ ಸಿನಿಮಾ ಎನಿಸಿಕೊಂಡಿದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’. ಹಲವಾರು ದಕ್ಷಿಣ ಭಾರತದ ಸಿನಿಮಾಗಳು ಈ ಬಾರಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿವೆ. ಕನ್ನಡಕ್ಕೆ ಸಹ ಎರಡು ಪ್ರಶಸ್ತಿಗಳು ಲಭ್ಯವಾಗಿರುವುದು ವಿಶೇಷ.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಮಿಂಚಿದ ಕನ್ನಡ ಸಿನಿಮಾ ‘ಮಿಥ್ಯ’
Mithya Kannada Movie
ಮಂಜುನಾಥ ಸಿ.
|

Updated on: Jul 18, 2026 | 6:48 PM

Share

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು (ಜುಲೈ 18) ಘೋಷಿಸಲಾಗಿದೆ. ಕಳೆದ ಕೆಲವ ವರ್ಷಗಳಂತೆ ಈ ವರ್ಷವೂ ಸಹ ದಕ್ಷಿಣ ಭಾರತದ ಸಿನಿಮಾಗಳೇ ಪಾರುಪತ್ಯ ಸಾಧಿಸಿವೆ. ಮಮ್ಮುಟಿ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡರೆ, ಅತ್ಯುತ್ತಮ ಮನೊರಂಜನಾ ಸಿನಿಮಾ ಎನಿಸಿಕೊಂಡಿದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’. ಹಲವಾರು ದಕ್ಷಿಣ ಭಾರತದ ಸಿನಿಮಾಗಳು ಈ ಬಾರಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿವೆ. ಕನ್ನಡಕ್ಕೆ ಸಹ ಎರಡು ಪ್ರಶಸ್ತಿಗಳು ಲಭ್ಯವಾಗಿರುವುದು ವಿಶೇಷ.

ರಕ್ಷಿತ್ ಶೆಟ್ಟಿ ಮತ್ತು ಕೆಆರ್​​ಜಿ ಒಟ್ಟಿಗೆ ನಿರ್ಮಿಸಿರುವ ಸಿನಿಮಾ ‘ಮಿಥ್ಯ’ಕ್ಕೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಒಟ್ಟು ಮೂರು ಸಿನಿಮಾಗಳು ಧಕ್ಕಿವೆ. ಮುಖ್ಯ ಪ್ರಶಸ್ತಿ ವಿಭಾಗದಲ್ಲಿ ಮಿಥ್ಯ ಸಿನಿಮಾದ ಬಾಲನಟ ಆತಿಶ್ ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ಅವರು ಈ ಪ್ರಶಸ್ತಿಯನ್ನು ಬೆಂಗಾಲಿಯ ಬಾಲನಟರೊಂದಿಗೆ ಹಂಚಿಕೊಂಡಿದ್ದಾರೆ. ಅದೇ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ರೂಪಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅವರು ಸಹ ತಮಿಳಿನ ‘ಮಹಾರಾಜ’ ಸಿನಿಮಾದ ನಟಿ ಸಚನಾ ಅವರೊಟ್ಟಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಮಿಥ್ಯ ಸಿನಿಮಾಕ್ಕೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ, ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಸಹ ಲಭ್ಯವಾಗಿದೆ.

ಇದನ್ನೂ ಓದಿ:72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಎರಡು ಪ್ರಶಸ್ತಿ

ಮಿಥ್ಯ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. 11 ವರ್ಷದ ಬಾಲಕ ಮಿಥುನ್ ಅಲಿಯಾಸ್ ಮಿಥ್ಯನ ಜೀವನ, ಅವನ ಏಕಾಂಗಿತನ ಇನ್ನಿತರೆಗಳ ಸುತ್ತ ಸುತ್ತುವ ಕತೆಯನ್ನು ‘ಮಿಥ್ಯ’ ಒಳಗೊಂಡಿದೆ. ಪೋಷಕರನ್ನು ಕಳೆದುಕೊಂಡ ಬಾಲಕನೊಬ್ಬ ಮುಂಬೈನಿಂದ ಉಡುಪಿಗೆ ಬಂದು ಇಲ್ಲಿ ಅವನ ಚಿಕ್ಕಪ್ಪ-ಚಿಕ್ಕಮ್ಮ ಅವರ ಮಕ್ಕಳೊಡನೆ ಸಮಯ ಕಳೆಯಬೇಕಾಗುತ್ತದೆ. ಆಗ ಅವನಿಗೆ ಎದುರಾಗುವ ಸಮಸ್ಯೆ, ಕಾಡುವ ಒಂಟಿತನ ಇನ್ನಿತರೆಗಳನ್ನು ನಿರ್ದೇಶಕ ಸುಮಂತ್ ಭಟ್ ಅದ್ಭುತವಾಗಿ ತೆರೆಗೆ ತಂದಿದ್ದಾರೆ.

ಹಲವು ಸಿನಿಮೋತ್ಸವಗಳಲ್ಲಿಯೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿರುವ ‘ಮಿಥ್ಯ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us