ಮೋಹನ್​ಲಾಲ್ ನಟನೆಯ ‘ಎಲ್2:ಎಂಪುರಾನ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

|

Updated on: Mar 27, 2025 | 11:54 AM

L2:Empuraan: ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ ನಟಿಸಿ, ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿರುವ ‘ಎಲ್​2:ಎಂಪುರಾನ್’ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ ಇಂದು (ಮಾರ್ಚ್ 27) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಜನಕ್ಕೆ ಇಷ್ಟವಾಯ್ತಾ? ಇಲ್ಲಿದೆ ಮಾಹಿತಿ...

ಮೋಹನ್​ಲಾಲ್ ನಟನೆಯ ‘ಎಲ್2:ಎಂಪುರಾನ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
L2 Empuraan
Follow us on

ಮಲಯಾಳಂ (Malayalam) ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿ, ಅದೇ ಚಿತ್ರರಂಗದ ಮತ್ತೊಬ್ಬ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಸಿನಿಮಾ ‘ಎಲ್​2:ಎಂಪುರನ್’ ಇಂದು (ಮಾರ್ಚ್ 27) ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಈ ಸಿನಿಮಾ ತೆರೆಗೆ ಬಂದಿದ್ದು, ಹಲವು ಕಡೆ ಬೆಳ್ಳಂಬೆಳಿಗ್ಗೆ ಶೋಗಳು ನಡೆದಿವೆ. ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ…

ಮಲಯಾಳಂ ಚಿತ್ರರಂಗದ ನಟ ಎಬಿ ಜಾರ್ಜ್, ಬೆಳ್ಳಂಬೆಳಿಗ್ಗೆ ‘ಎಲ್​2, ಎಂಪುರಾನ್’ ಸಿನಿಮಾ ನೋಡಿದ್ದಾರೆ. ಅದೂ ತುಂಬಿದ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸೇರಿ ಸಿನಿಮಾ ವೀಕ್ಷಿಸಿದ್ದು, ಟ್ವಿಟ್ಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಎಂಪುರಾನ್’ ಸಿನಿಮಾ ಸಾಧಾರಣವಾದ ಮಾಸ್ ಮಸಾಲ ಸಿನಿಮಾ. ಪೃಥ್ವಿರಾಜ್ ಸುಕುಮಾರ್ ಅದ್ಭುತವಾಗಿ ಮೇಕಿಂಗ್ ಮಾಡಿದ್ದಾರೆ. ಮೋಹನ್​ಲಾಲ್ ಅಭಿಮಾನಿಗಳಿಗೆ ಕೆಲವು ಒಳ್ಳೆಯ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ನಾಲ್ಕೈದು ಸೀನ್​ಗಳಂತೂ ಅದ್ಭುತವಾಗಿವೆ’ ಎಂದಿದ್ದಾರೆ.

ಫೋರಮ್ಸ್ ರೀಲ್ಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲಾಗಿರುವ ‘ಎಂಪುರಾನ್’ ಸಿನಿಮಾ ಕುರಿತ ಟ್ವೀಟ್​ ಆಸಕ್ತಿಕರವಾಗಿದೆ. ‘ಮೊದಲಾರ್ಧ ಗಟ್ಟಿಯಾಗಿದೆ. ಹಲವು ಕುತೂಹಲಗಳನ್ನು ಹುಟ್ಟಿಸುತ್ತದೆ. ದ್ವೀತಾಯರ್ಧ ಮೊದಲಾರ್ಧಕ್ಕೆ ಪೂರಾಕವಾಗಿದೆ. ಸುಜಿತ್ ವಾಸುದೇವನ್ ಅವರ ಸಿನಿಮಾಟೊಗ್ರಫಿ ಅದ್ಭುತವಾಗಿದೆ. ಮೊದಲಾರ್ಧದಲ್ಲಿ ಮೋಹನ್​ಲಾಲ್​ಗೆ ಹೆಚ್ಚಿನ ಸ್ಕ್ರೀನ್ ಟೈಂ ಇಲ್ಲ. ಆದರೆ ಎರಡನೇ ಅರ್ಧದಲ್ಲಿ ಅವರೇ ಹೆಚ್ಚಾಗಿದ್ದಾರೆ. ಕಾಡಿನಲ್ಲಿ ನಡೆಯುವ ದೃಶ್ಯ ಇಡೀ ಸಿನಿಮಾದ ಹೈಲೆಟ್, ಸಿನಿಮಾದಲ್ಲಿ ಬರುವ ಅತಿಥಿ ಪಾತ್ರವಂತೂ ಅದ್ಭುತವಾಗಿದೆ’ ಎಂದಿದ್ದಾರೆ.

ಸ್ಮಾರ್ತ್ ಬರಾನಿ ಎಂಬುವರು ಟ್ವೀಟ್ ಮಾಡಿ, ‘ಅಚ್ಚಕಟ್ಟಾದ ಕತೆ, ಚಿತ್ರಕತೆ ಸಿನಿಮಾದಲ್ಲಿದೆ. ಅದ್ಭುತವಾದ ಸಿನಿಮಾಟೊಗ್ರಫಿ ಮತ್ತು ಅದ್ಧೂರಿ ಆಕ್ಷನ್ ಸನ್ನಿವೇಶಗಳು ಸಿನಿಮಾದಲ್ಲಿವೆ. ಮೊದಲು 30 ನಿಮಿಷದಲ್ಲಿ ಬರುವ ಕೆಲವು ಹಿಂಸೆ ಸೀನ್​ಗಳನ್ನು ನೋಡುವುದು ಕಷ್ಟ ಅನಿಸುತ್ತದೆ. ಸಿನಿಮಾದ ಎಲ್ಲ ಪಾತ್ರಗಳಿಗೂ ಒಳ್ಳೆಯ ಸ್ಕ್ರೀನ್ ಸ್ಪೇಸ್ ಮತ್ತು ಮಹತ್ವ ಇದೆ. ಒಟ್ಟಾರೆಯಾಗಿ ಇದೊಂದು ಬಹಳ ಒಳ್ಳೆಯ ಸಿನಿಮಾ ಎಂದಿದ್ದಾರೆ.

ಫೋರಮ್ ಕೇರಳಂ ಟ್ವೀಟ್ ಮಾಡಿ, ಮೇಕಿಂಗ್ ಚೆನ್ನಾಗಿದೆ ಆದರೆ ಕತೆಯಲ್ಲಿ ಹೆಚ್ಚನ ಧಮ್ ಇಲ್ಲ ಎಂದಿದೆ. ಕತೆಗಿಂತಲೂ ಹೆಚ್ಚಾಗಿ ಮೇಕಿಂಗ್, ಆಕ್ಷನ್ ಅಂಥಹಾ ಕಮರ್ಶಿಯಲ್ ಅಂಶಗಳ ಮೇಲೆ ಹೆಚ್ಚು ನಿರ್ಭರವಾಗಿದ್ದಾರೆ ನಿರ್ದೇಶಕ. ಕೆಲ ದೃಶ್ಯಗಳು ಬಹಳ ಚೆನ್ನಾಗಿವೆ, ಉಳಿದ ದೃಶ್ಯಗಳು ನೀರಸವಾಗಿವೆ. ಒಳ್ಳೆಯ ಮೇಕಿಂಗ್, ಸಿನಿಮಾಟೊಗ್ರಫಿ ಸಹ ಅದ್ಧೂರಿಯಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 am, Thu, 27 March 25