AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಯೂಟ್ಯೂಬ್ ವಿಡಿಯೋ ಯಾವುದು ಗೊತ್ತೆ?

Most viewed video: ವಿಶ್ವದಲ್ಲೇ ಅತಿ ಹೆಚ್ಚು ಹಣವನ್ನು ಯೂಟ್ಯೂಬ್, ತನ್ನ ಕಂಟೆಂಟ್ ಕ್ರಿಯೇಟರ್​​ಗಳಿಗೆ ಕೊಡುತ್ತದೆ. ಈ ಹಣ ಪಾವತಿಸುವ ಲೆಕ್ಕಾಚಾರ ವಿಡಿಯೋಗಳು ಗಳಿಸುವ ಒಟ್ಟು ವೀವ್ಸ್ ಅನ್ನು ಆಧರಿಸಿರುತ್ತದೆ. ಅಂದಹಾಗೆ ಭಾರತದಲ್ಲಿ ಯಾವ ಯೂಟ್ಯೂಬ್​​ ವಿಡಿಯೋಗೆ ಅತಿ ಹೆಚ್ಚು ವೀವ್ಸ್ ಇದೆ. ಪಟ್ಟಿ ನಿಮಗೆ ಆಶ್ಚರ್ಯ ತರುವುದು ಖಾತ್ರಿ.

ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಯೂಟ್ಯೂಬ್ ವಿಡಿಯೋ ಯಾವುದು ಗೊತ್ತೆ?
Youtube India1
ಮಂಜುನಾಥ ಸಿ.
|

Updated on: Jun 21, 2026 | 6:46 PM

Share

ಯೂಟ್ಯೂಬ್ (YouTube) ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಅಪ್ಲಿಕೇಶನ್​​ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಬಳಕೆದಾರರಿಗೆ ಅಥವಾ ಕಂಟೆಂಟ್ ಕ್ರಿಯೇಟರ್​​ಗಳಿಗೆ ಹಣ ಕೊಡುವುದರಲ್ಲಿ ಯುಟ್ಯೂಬ್​​ಗೆ ನಂಬರ್ 1 ಸ್ಥಾನ. ವಿಶ್ವದಲ್ಲೇ ಅತಿ ಹೆಚ್ಚು ಹಣವನ್ನು ಯೂಟ್ಯೂಬ್, ತನ್ನ ಕಂಟೆಂಟ್ ಕ್ರಿಯೇಟರ್​​ಗಳಿಗೆ ಕೊಡುತ್ತದೆ. ಈ ಹಣ ಪಾವತಿಸುವ ಲೆಕ್ಕಾಚಾರ ವಿಡಿಯೋಗಳು ಗಳಿಸುವ ಒಟ್ಟು ವೀವ್ಸ್ ಅನ್ನು ಆಧರಿಸಿರುತ್ತದೆ. ಅಂದಹಾಗೆ ಭಾರತದಲ್ಲಿ ಯಾವ ಯೂಟ್ಯೂಬ್​​ ವಿಡಿಯೋಗೆ ಅತಿ ಹೆಚ್ಚು ವೀವ್ಸ್ ಇದೆ. ಪಟ್ಟಿ ನಿಮಗೆ ಆಶ್ಚರ್ಯ ತರುವುದು ಖಾತ್ರಿ.

ಭಾರತದಲ್ಲಿ ಈ ವರೆಗೆ ಅತಿ ಹೆಚ್ಚು ವೀವ್ಸ್ ಪಡೆದಿರುವ ವಿಡಿಯೋ ‘ಚುಚು ಟಿವಿ’ಯ ಮಕ್ಕಳ ರೈಮ್ಸ್ ವಿಡಿಯೋ. ‘ಫೋನಿಕ್ ಸಾಂಗ್ ವಿತ್ ಟು ವರ್ಡ್ಸ್’ (Phonics Song with Two Words) ಟೈಟಲ್ ಹೊಂದಿರುವ ಈ ವಿಡಿಯೋ ಈ ವರೆಗೆ 690 ಕೋಟಿ ವೀವ್ಸ್ ಪಡೆದುಕೊಂಡಿದೆ. ಇಷ್ಟು ಸಂಖ್ಯೆಯ ವೀವ್ಸ್ ಪಡೆದಿರುವ ಭಾರತದ ಇನ್ನೊಂದು ಯೂಟ್ಯೂಬ್ ವಿಡಿಯೋ ಇಲ್ಲ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಯೂಟ್ಯೂಬ್ ವಿಡಿಯೋಗಳ ಪಟ್ಟಿಯಲ್ಲಿಯೂ ಸಹ ಈ ವಿಡಿಯೋ ಇದ್ದು, ವಿಶ್ವ ಪಟ್ಟಿಯಲ್ಲಿ ಈ ವಿಡಿಯೋಕ್ಕೆ ಆರನೇ ಸ್ಥಾನ. ಇದು ಮಾತ್ರವೇ ಅಲ್ಲದೆ, ಅತಿ ಹೆಚ್ಚು ವೀವ್ಸ್ ಪಡೆದ ವಿಡಿಯೋಗಳ ಪಟ್ಟಿಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮಕ್ಕಳ ವಿಡಿಯೋಗಳೇ ಹೆಚ್ಚಾಗಿವೆ.

ಇದನ್ನೂ ಓದಿ:ಚಿರಂಜೀವಿ ಬಗ್ಗೆ ಸುಳ್ಳು ಸುದ್ದಿ ಯೂಟ್ಯೂಬ್ ವಿರುದ್ಧ ದೂರು ದಾಖಲು

ಭಾರತದಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವುದು ಹನುಮಾನ್ ಚಾಳೀಸ. ಟಿ-ಸೀರೀಸ್ ಭಕ್ತಿ ಚಾನೆಲ್​​ನಲ್ಲಿ 15 ವರ್ಷಗಳ ಹಿಂದೆಯೇ ಅಪ್​​ಲೋಡ್ ಆಗಿರುವ ಹನುಮಾನ್ ಚಾಳೀಸ ವಿಡಿಯೋ ಈ ವರೆಗೆ 540 ಕೋಟಿ ವೀವ್ಸ್ ಪಡೆದುಕೊಂಡಿದೆ.

ಮಕ್ಕಳ ವಿಡಿಯೋಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಅತಿ ಹೆಚ್ಚು ವೀವ್ಸ್ ಪಡೆಯುವುದು ಹಾಡುಗಳು. ಭಾರತದಲ್ಲೇ ನಿರ್ಮಾಣವಾಗಿ ಭಾರತದಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವ ಹಾಡು ಅಥವಾ ಮ್ಯೂಸಿಕ್ ಸಿಂಗಲ್ ಹಿಂದಿಯದ್ದಲ್ಲ ಬದಲಿಗೆ ಪಂಜಾಬಿಯದ್ದು. ಜಾಸ್ ಮನಕ್ ಎಂಬುವರು ರಚಿಸಿ, ಹಾಡಿರುವ ‘ಲೆಹಂಗಾ’ ಹೆಸರಿನ ಪಂಜಾಬಿ ಹಾಡು ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಯೂಟ್ಯೂಬ್ ವಿಡಿಯೋ. ಈ ಹಾಡನ್ನು ಈ ವರೆಗೆ 180 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಮ್ಯೂಸಿಕ್ ಸಿಂಗಲ್​​ಗಳ ವಿಭಾಗದಲ್ಲಿ ‘ವಾಸ್ತೆ’ ಎಂಬ ಹಿಂದಿ ಆಲ್ಬಂ ಹಾಡನ್ನು 170 ಕೋಟಿ ಬಾರಿ ವೀಕ್ಷಿಸಲಾಗಿದೆ. ಈ ಹಾಡು ಟಿ-ಸೀರೀಸ್ ಅವರದ್ದಾಗಿದೆ. ಟಿ-ಸೀರೀಸ್​​ನವರದ್ದೇ ಆದ ಮತ್ತೊಂದು ಸಿಂಗಲ್, ‘ಲುಟ್ ಗಯೇ’ ಹಾಡು ಸಹ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಪಟ್ಟಿಯಲ್ಲಿದ್ದು, ಈ ಹಾಡನ್ನು 150 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಅತಿ ಹೆಚ್ಚು ಬಾರಿ ವೀಕ್ಷಿಸಲಾದ ಸಿನಿಮಾ ಹಾಡುಗಳ ವಿಭಾಗದಲ್ಲಿ ಟಾಪ್​​ನಲ್ಲಿರುವುದು ದಕ್ಷಿಣದ ಸಿನಿಮಾ ಒಂದರ ಹಾಡು. ಅದುವೇ ಸಾಯಿ ಪಲ್ಲವಿ ಮತ್ತು ಧನುಶ್ ನಟಿಸಿರುವ ‘ರೌಡಿ ಬೇಬಿ’ ಹಾಡು. ‘ಮಾರಿ 2’ ಸಿನಿಮಾದ ಈ ಹಾಡನ್ನು 170 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಹಾಡು ಈಗಲೂ ಟ್ರೆಂಡಿಂಗ್​​ನಲ್ಲಿದೆ. ಈ ಹಾಡನ್ನು ಧನುಶ್ ಅವರ ವಾಂಡರ್​​ಬಾರ್ ಫಿಲಮ್ಸ್ ಯೂಟ್ಯೂಬ್ ವಿಡಿಯೋನಲ್ಲಿ ಅಪ್​ಲೋಡ್ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್