Bheema First Half Review:‘ ಭೀಮ’ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ವಿವರ
Bheema Movie Review: ‘ಭೀಮ’ ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ. ಅವರ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಅವರು ಭರ್ಜರಿ ಯಶಸ್ಸು ಕಂಡರು. ಈಗ ಅವರು ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಭೀಮ ಸಿನಿಮಾ
Follow us on
ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಯಶಸ್ಸು ಕಂಡಿತ್ತು. ಆ ಬಳಿಕ ಅವರು ಕೈಗೆತ್ತಿಕೊಂಡಿದ್ದು ‘ಭೀಮ’ ಚಿತ್ರವನ್ನು. ಈ ಸಿನಿಮಾ ಕೂಡ ಪಕ್ಕಾ ರೌಡಿಸಂ ಕಥೆ ಅನ್ನೋದು ಟ್ರೇಲರ್ ನೋಡಿದವರಿಗೆ ಗೊತ್ತಾಗಿದೆ. ಇಂದು (ಆಗಸ್ಟ್ 9) ಸಿನಿಮಾ ಬಿಡುಗಡೆ ಕಂಡಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾದರೆ ಈ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಸಿನಿಮಾದಲ್ಲಿ ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಭೀಮ ಸಿನಿಮಾನಲ್ಲಿ ಬೆಂಗಳೂರಿನ ಗಲ್ಲಿಗಳ ಕತೆಯನ್ನು ಅನಾವರಣ ಮಾಡಿರುವ ದುನಿಯಾ ವಿಜಯ್.
ಗಾಂಜಾ ಮೋಹ ಮತ್ತು ಬೆಂಗಳೂರಿನ ಸ್ಲಂ ಯುವಕರನ್ನು ರೌಡಿಗಳು ಬಳಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೋರಿಸಲಾಗಿದೆ.
ಸಿನಿಮಾದ ಆರಂಭದಲ್ಲಿ ಮುಖ್ಯ ಪಾತ್ರಗಳ ಪರಿಚಯ ಮತ್ತು ಅವರ ವ್ಯಕ್ತಿತ್ವ ಅನಾವರಣ ಮಾಡಿದ್ದಾರೆ ನಿರ್ದೇಶಕ ವಿಜಿ. ಸಿನಿಮಾದ ವಿಲನ್ ಪಾತ್ರಕ್ಕೆ ನೀಡಿರುವ ಹಿನ್ನೆಲೆ ಚೆನ್ನಾಗಿದೆ.
ದುನಿಯಾ ವಿಜಯ್ ಎಂಟ್ರಿ ಮಾಸ್ ಹಾಡಿನ ಮೂಲಕ ಆಗುತ್ತದೆ. ಸೆಂಟಿಮೆಂಟ್ ದೃಶ್ಯದಲ್ಲಿ ಮಾಸ್ ಹಾಡಿನ ಮೂಲಕ ಎಂಟ್ರಿ ಕೊಡುವ ದುನಿಯಾ ವಿಜಿ.
ಸಿನಿಮಾದಲ್ಲಿ ಫಿಲ್ಟರ್ ಇಲ್ಲದೆ ಬೈಗುಳಗಳನ್ನು ಬಳಸಲಾಗಿದೆ. ಅಮ್ಮ-ಅಕ್ಕ ಬೈಗುಳಗಳು ಪದೇ ಪದೇ ಕಿವಿ ಮೇಲೆ ಬೀಳುತ್ತಲೇ ಇರುತ್ತವೆ.
ಆರಂಭದಲ್ಲಿ ಬರುವ ಕೆಲವು ಹಾಡುಗಳು ಗಮನ ಸೆಳೆಯುತ್ತವೆ. ಹಾಡುಗಳಲ್ಲಿ ಬೆಂಗಳೂರಿನ ಗಲ್ಲಿಗಳನ್ನು ಇದ್ದಂತೆ ತೋರಿಸಿದ್ದಾರೆ ವಿಜಿ.
ಸಿನಿಮಾದ ಮೊದಲಾರ್ಧದಲ್ಲಿ ಕೆಲವು ಹಾಸ್ಯ ಸನ್ನಿವೇಶಗಳು ಬಹಳ ನಗಿಸುತ್ತವೆ. ಆದರೆ ಕೆಲವು ದೃಶ್ಯಗಳು, ಸಂಭಾಷಣೆ ಮುಜುಗರವನ್ನೂ ತರುತ್ತವೆ.
ಸಿನಿಮಾದ ನಾಯಕಿಗೆ ಹಾಗೂ ನಾಯಕನ ಗೆಳೆಯರಿಗೆ ಹೆಚ್ಚೇನು ಕೆಲಸವಿಲ್ಲ. ನಾಯಕನ ಫೈಟ್ ಗಳನ್ನು ನೋಡಿ ಚಪ್ಪಾಳೆ ತಟ್ಟುವುದಷ್ಟೆ ಅವರ ಕೆಲಸ.
ಸಿನಿಮಾದ ಮಧ್ಯಾರ್ಧದ ಬರುವ ಮುಂಚೆ ಖಡಕ್ ಪೊಲೀಸ್ ಅಧಿಕಾರಿ ಕತೆಗೆ ಎಂಟ್ರಿ. ನಾಯಕ ಹಾಗೂ ಖಡಕ್ ಅಧಿಕಾರಿ ಸೇರಿ ಗಾಂಜಾ ವಿತರಕರ ಮೇಲೆ ಸಮರ ಸಾರಿದ್ದಾರೆ.
ಸಿನಿಮಾದ ಮಧ್ಯಾರ್ಧದ ವೇಳೆಗೆ ನಾಯಕ ದುನಿಯಾ ವಿಜಯ್ ಮೇಲುಗೈ ಆಗಿ, ವಿಲನ್ ಜೈಲಿಗೆ ಹೋಗಿದ್ದಾನೆ. ಇನ್ನು ಮುಂದೆ ಇದು ದ್ವೇಷದ ಕತೆಯಾಗಿ ತಿರುವು ಪಡೆಯುವ ಸಾಧ್ಯತೆ ಇದೆ.