Veera Simha Reddy First Half Review: ದುನಿಯಾ ವಿಜಯ್ ಅವರು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಆದ್ದರಿಂದ ಅವರ ಫ್ಯಾನ್ಸ್ ವಲಯದಲ್ಲೂ ಈ ಚಿತ್ರದ ಕ್ರೇಜ್ ಜೋರಾಗಿದೆ.
ನಂದಮೂರಿ ಬಾಲಕೃಷ್ಣ
Follow us on
ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವೀರ ಸಿಂಹ ರೆಡ್ಡಿ’ ಇಂದು (ಜ.12) ಬಿಡುಗಡೆ ಆಗಿದೆ. ತೆಲುಗಿನ ಈ ಸಿನಿಮಾಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ಬಾಲಯ್ಯ (Balayya) ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ದುನಿಯಾ ವಿಜಯ್ (Duniya Vijay) ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಕರ್ನಾಟಕದಲ್ಲೂ ಚಿತ್ರದ ಹೈಪ್ ಹೆಚ್ಚಾಗಿದೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾದ ಫಸ್ಟ್ ಹಾಫ್ ಹೇಗಿದೆ ಎಂಬುದು ಈಗ ರಿವೀಲ್ ಆಗಿದೆ.
ವೀರ ಸಿಂಹ ರೆಡ್ಡಿ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಹೈಲೈಟ್ ಆಗಿದೆ?
ಪಕ್ಕಾ ಮಾಸ್ ಶೈಲಿಯಲ್ಲಿ ವೀರ ಸಿಂಹ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಆ ರೀತಿಯ ಮನರಂಜನೆ ಬಯಸುವವರಿಗೆ ಸಿನಿಮಾ ಹೇಳಿ ಮಾಡಿಸಿದಂತಿದೆ.
ನಂದಮೂರಿ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಅವರು ಮಿಂಚಿದ್ದಾರೆ.
ಭಯ ಹುಟ್ಟಿಸುವಂತಹ ವಿಲನ್ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆಯುತ್ತಿದೆ. ಮ್ಯಾನರಿಸಂ ಭಿನ್ನವಾಗಿದೆ.
ದುನಿಯಾ ವಿಜಯ್ ಹಾಗೂ ನಂದಮೂರಿ ಮುಖಾಮುಖಿ ಆಗುವುದನ್ನು ನೋಡಬೇಕು ಎಂದು ಪ್ರೇಕ್ಷಕರು ಕಾದಿದ್ದರು. ಅದು ಮೊದಲಾರ್ಧದಲ್ಲೇ ಸಿಗುತ್ತದೆ. ಅನೇಕ ಬಾರಿ ಇಬ್ಬರ ಮಧ್ಯೆ ಫೈಟ್ ನಡೆಯುತ್ತದೆ.
ಇದನ್ನೂ ಓದಿ
ಇಸ್ತಾಂಬೂಲ್ ಹಾಗೂ ಆಂಧ್ರ ಪ್ರದೇಶದಲ್ಲಿ ಕಥೆ ಸಾಗುತ್ತದೆ. ಮಾಸ್ ಶೈಲಿಯಲ್ಲಿ ಮೊದಲಾರ್ಧ ಮೂಡಿ ಬಂದಿದೆ.
ತಂದೆ ಹಾಗೂ ಮಗನ ಪಾತ್ರದ ಎಂಟ್ರಿ ಫೈಟಿಂಗ್ ಮೂಲಕವೇ ಆಗುತ್ತದೆ. ಇದು ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡುತ್ತದೆ.
ಮೊದಲಾರ್ಧದಲ್ಲಿ ಶ್ರುತಿ ಹಾಸನ್ಗೆ ಹೆಚ್ಚಿನ ಸ್ಕ್ರೀನ್ಸ್ಪೇಸ್ ಇಲ್ಲ. ಅವರ ಎಂಟ್ರಿ ದೃಶ್ಯ ಕಾಮಿಡಿಯಾಗಿದೆ.
ವರಲಕ್ಷ್ಮೀ ಶರತ್ಕುಮಾರ್ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಮಧ್ಯಂತರದಲ್ಲಿ ಅವರು ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತಾರೆ.
ಮೊದಲಾರ್ಧದಲ್ಲಿ ಐದಾರು ಫೈಟ್ ದೃಶ್ಯಗಳಿವೆ. ಬಾಲಯ್ಯ ಅವರು ತಮ್ಮ ಮಾಸ್ ಅವತಾರ ತೋರಿಸುವುದರ ಜತೆಗೆ ಡೈಲಾಗ್ ಮೂಲಕ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.