Salaar Movie: ಹೇಗಿದೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್​ ‘ಸಲಾರ್’ ಚಿತ್ರದ ಮೊದಲಾರ್ಧ?

| Updated By: Ganapathi Sharma

Updated on: Dec 22, 2023 | 6:35 AM

Salaar First Half Review: ‘ಸಲಾರ್’ ಸಿನಿಮಾ ಇಂದು ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಈ ನಿರೀಕ್ಷೆಯ ಕಥೆ ಏನಾಯಿತು? ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯಿತೇ? ಸಿನಿಮಾ ಮೊದಲಾರ್ಧದ ವಿಮರ್ಶೆ ಇಲ್ಲಿದೆ. 

Salaar Movie: ಹೇಗಿದೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್​ ‘ಸಲಾರ್’ ಚಿತ್ರದ ಮೊದಲಾರ್ಧ?
ಪ್ರಭಾಸ್
Follow us on

‘ಸಲಾರ್’ ಸಿನಿಮಾ (Salaar Movie) ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳು ಇವೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಕೆಜಿಎಫ್’ ಅಂಥ ಸೂಪರ್ ಹಿಟ್ ಚಿತ್ರ ನೀಡಿದ ‘ಹೊಂಬಾಳೆ ಫಿಲ್ಮ್ಸ್​​’ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಭಾಸ್ ಜೊತೆ ಪೃಥ್ವಿರಾಜ್​ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ದೊಡ್ಡ ಪಾತ್ರವರ್ಗ ಇದೆ. ‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಈ ನಿರೀಕ್ಷೆಯ ಕಥೆ ಏನಾಯಿತು? ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯಿತೇ? ಸಿನಿಮಾ ಮೊದಲಾರ್ಧದ ವಿಮರ್ಶೆ ಇಲ್ಲಿದೆ.

  1. ಆರಂಭದಲ್ಲಿ ಬಾಲ್ಯದ ಕಥೆಯನ್ನು ತೋರಿಸಲಾಗಿದೆ. ದೇವ ಹಾಗೂ ವರದರಾಜ್ ಸ್ನೇಹ ಅವರ ಗೆಳೆತನ ಹೈಲೈಟ್ ಆಗಿದೆ.
  2. ಪ್ರಭಾಸ್ ಅವರ ಎಂಟ್ರಿ ಮಾಸ್ ಆಗಿಲ್ಲ. ಆದರೆ, ಅಭಿಮಾನಿಗಳು ಯಾವ ರೀತಿಯಲ್ಲಿ ನಿರೀಕ್ಷಿಸಿದ್ದರೋ ಅದೇ ರೀತಿಯಲ್ಲಿ ಪ್ರಭಾಸ್ ಅವರ ಎಂಟ್ರಿ ಇದೆ.
  3. ಟ್ರೇಲರ್ನಲ್ಲಿ ಡಾರ್ಕ್ ಶೇಡ್ ಹೆಚ್ಚಿತ್ತು. ಸಿನಿಮಾದ ಮೊದಲಾರ್ಧ ಅದೇ ರೀತಿಯಲ್ಲಿ ಸಾಗಿದೆ. ಡಾರ್ಕ್ ಶೇಡ್ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ.
  4. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಎ ಪ್ರಮಾಣ ಪತ್ರ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದಲ್ಲಿ ಭರ್ಜರಿ ವೈಲೆನ್ಸ್ ತೋರಿಸಲಾಗಿದೆ.
  5. ಪ್ರಶಾಂತ್ ನೀಲ್ ಅವರು ಆ್ಯಕ್ಷನ್ ಇರುವ ಪವರ್ಫುಲ್ ಸಿನಿಮಾ ಮಾಡಿದ್ದಾರೆ. ಮೊದಲಾರ್ಧದುದ್ದಕ್ಕೂ ಆ್ಯಕ್ಷನ್ ಹೈಲೈಟ್ ಆಗಿದೆ.
  6. ಪ್ರಭಾಸ್ ಅವರು ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ಅವರ ಪಾತ್ರ ಇಷ್ಟವಾಗುತ್ತದೆ.
  7. ರವಿ ಬಸ್ರೂರು ಅವರ ಬಿಜಿಎಂ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಒಂದು ಹಾಡು ಕೂಡ ಇಷ್ಟ ಆಗುತ್ತದೆ.
  8. ಪೃಥ್ವಿರಾಜ್ ಸುಕುಮಾರನ್ ಒಮ್ಮೆ ಮಾತ್ರ ಕಾಣುತ್ತಾರೆ.‌ ಮೊದಲಾರ್ಧದಲ್ಲಿ ಬಾಲ್ಯದ ಕಥೆ ಹೈಲೈಟ್ ಆಗಿದೆ.
  9. ‘ಉಗ್ರಂ’ ಸಿನಿಮಾದ ರಿಮೇಕ್ ಅಲ್ಲ ಎಂದು ತಂಡ ಹೇಳಿತ್ತು.‌ ಆದರೆ ಅದು ಸುಳ್ಳಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ