Salaga Movie: ‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​; ದುನಿಯಾ ವಿಜಯ್​ ಸಿನಿಮಾದಲ್ಲಿ ಇಂಟರ್​ವಲ್​ ತನಕ ಏನುಂಟು ಏನಿಲ್ಲ?

| Updated By: shivaprasad.hs

Updated on: Oct 14, 2021 | 11:56 AM

ಭಾರಿ ನಿರೀಕ್ಷೆ ಮೂಡಿಸಿದ್ದ ‘ಸಲಗ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್​ ಅವರ ನಟನೆ ಮತ್ತು ನಿರ್ದೇಶನ ಹೇಗಿದೆ? ಮಧ್ಯಂತರದವರೆಗೆ ಈ ಸಿನಿಮಾದಲ್ಲಿ ಏನುಂಟು ಏನಿಲ್ಲ ಅಂತ ತಿಳಿಯಲು ಈ ರಿಪೋರ್ಟ್​ ಓದಿ.

Salaga Movie: ‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​; ದುನಿಯಾ ವಿಜಯ್​ ಸಿನಿಮಾದಲ್ಲಿ ಇಂಟರ್​ವಲ್​ ತನಕ ಏನುಂಟು ಏನಿಲ್ಲ?
ಧನಂಜಯ, ದುನಿಯಾ ವಿಜಯ್​
Follow us on

ರಾಜ್ಯಾದ್ಯಂತ ‘ಸಲಗ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ನಟ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು ಸಹಜ. ಚಿತ್ರಮಂದಿರದ ಮುಂದೆ ಅಪ್ಪಟ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಕಟೌಟ್​ಗಳಿಗೆ ಹಾರ ಹಾಕಿ, ಅಭಿಷೇಕ ಮಾಡಿ ‘ಸಲಗ’ಕ್ಕೆ ಅದ್ದೂರಿ ಸ್ವಾಗತ ಕೋರಲಾಗಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಫಸ್ಟ್​ ಶೋ ಪ್ರಾರಂಭ ಆಗಿದೆ. ಮಧ್ಯಂತರದವರೆಗೆ ಸಿನಿಮಾ ಹೇಗಿದೆ ಎಂಬುದರ ರಿಪೋರ್ಟ್​ ಇಲ್ಲಿದೆ.

  • ‘ಸಲಗ’ ಒಂದು ಪಕ್ಕಾ ಮಾಸ್ ಎಂಟರ್​ಟೈನರ್ ಸಿನಿಮಾ. ಟ್ರೈಲರ್​ನಲ್ಲಿ ನೋಡಿರುವುದಕ್ಕಿಂತ ಮತ್ತೂ ಹೆಚ್ಚಾಗಿ ಚಿತ್ರದ ಮೊದಲಾರ್ಧ ಮೂಡಿಬಂದಿದೆ.
  • ಅಂಡರ್​ವರ್ಲ್ಡ್ ಜಗತ್ತನ್ನು ತೀರ ನೇರವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ. ಅದಕ್ಕೆ ಸರಿಹೊಂದುವಂತಹ ಡೈಲಾಗ್ಸ್ ಹಾಗೂ ದೃಶ್ಯಗಳಿವೆ. ಇದು ಫ್ಯಾಮಿಲಿ ಆಡಿಯನ್ಸ್​ಗಿಂತ ಮಾಸ್ ಆಡಿಯನ್ಸ್​ಗೆ ಹೆಚ್ಚು ಕನೆಕ್ಟ್ ಆಗುವ ರೀತಿಯಲ್ಲಿದೆ.
  • ‘ಸಲಗ’ದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಅದಕ್ಕೆ ತಕ್ಕಂತೆ ಭರ್ಜರಿ 3 ಆಕ್ಷನ್ ದೃಶ್ಯಗಳು ಚಿತ್ರದ ಮೊದಲಾರ್ಧದಲ್ಲಿದೆ.
  • ಚಿತ್ರದ ರಿಲೀಸ್​ಗೂ ಮೊದಲೇ ಸಿನಿಮಾದ ಹಾಡುಗಳು ಸಾಕಷ್ಟು ಹೈಪ್ ಸೃಷ್ಟಿಸಿದ್ದವು. ಅದರಲ್ಲಿ ಯಾವ ಹಾಡು ಮೊದಲಾರ್ಧಲ್ಲಿದೆ ಎಂಬ ಕುತೂಹಲವಿತ್ತು. ಅದಕ್ಕೆ ಮೊದಲಾರ್ಧದಲ್ಲಿ ಉತ್ತರ ಸಿಕ್ಕಿದೆ.
  • ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ‘ಸೂರಿ ಅಣ್ಣ’, ಸಲಗದ ಟೈಟಲ್ ಟ್ರ್ಯಾಕ್ ಹಾಗೂ ಸಂಜನಾ, ವಿಜಯ್ ಕಾಣಿಸಿಕೊಂಡಿರುವ ‘ಮಳೆಯೇ ಮಳೆಯೇ’ ಹಾಡು ಚಿತ್ರದ ಫರ್ಸ್ಟ್ ಹಾಫ್​ನಲ್ಲಿದೆ.
  •  ಚಿತ್ರ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣವಾಗಿದ್ದ ಡಾಲಿ ಧನಂಜಯ್ ಅವರ ಖಡಕ್ ಪೊಲೀಸ್ ಪಾತ್ರವೂ ಮೊದಲಾರ್ಧಲ್ಲಿದ್ದು, ವಿಜಯ್ ಹಾಗೂ ಧನಂಜಯ್ ಮುಖಾಮುಖಿಯಾಗುವ ದೃಶ್ಯಗಳಿವೆ.
  • ನಾಯಕಿ ಸಂಜನಾ ಆನಂದ್ ಮೊದಲಾರ್ಧದಲ್ಲಿ ಕೆಲವೇ ಕೆಲವು ದೃಶ್ಯಗಳಲ್ಲಿ ಬಂದುಹೋಗುತ್ತಾರೆ. ಅವರ ಫ್ಲಾಶ್ ಬ್ಯಾಕ್ ಕಥೆಗೆ ಪ್ರೇಕ್ಷಕರು ಸೆಕೆಂಡ್ ಹಾಫ್​ಗೆ ಕಾಯಲೇಬೇಕು.
  • ಮಾಸ್ತಿ ಅವರ ಸಂಭಾಷಣೆಗಳು ಮಾಸ್ ದೃಶ್ಯಗಳಲ್ಲಿ ಖಡಕ್ ಆಗಿ ಮೂಡಿಬಂದಿವೆ. ಹಾಗೆಯೇ ಹಾಸ್ಯದ ದೃಶ್ಯಗಳಲ್ಲಿ ಡೈಲಾಗ್ಸ್ ನಗು ಮೂಡಿಸಲು ಶಕ್ತವಾಗಿವೆ.

ಇದನ್ನೂ ಓದಿ:

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ