Salman Khan: ‘ಫ್ಯಾಮಿಲಿ ಎಂಟರ್​ಟೇನರ್​’; ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

|

Updated on: Apr 21, 2023 | 10:34 AM

Kisi Ka Bhai Kisi Ki Jaan Movie Twitter Review: ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಲ್ಮಾನ್ ಖಾನ್ ನಟನೆಯ ಈ ಚಿತ್ರ ವಿನ್ನರ್ ಎಂದು ಫ್ಯಾನ್ಸ್ ಕರೆದಿದ್ದಾರೆ.

Salman Khan: ‘ಫ್ಯಾಮಿಲಿ ಎಂಟರ್​ಟೇನರ್​’; ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಕಿಸಿ ಕ ಭಾಯ್ ಕಿಸಿ ಕಿ ಜಾನ್ ಪೋಸ್ಟರ್
Follow us on

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi Ki Jaan) ಇಂದು (ಏಪ್ರಿಲ್ 21) ರಿಲೀಸ್ ಆಗಿದೆ. ಕೊವಿಡ್ ಮತ್ತಿತ್ಯಾದಿ ಕಾರಣದಿಂದ ಸಲ್ಮಾನ್ ಖಾನ್ (Salman Khan) ಸಿನಿಮಾಗಳು ದೊಡ್ಡಮಟ್ಟದಲ್ಲಿ ಥಿಯೇಟರ್​ನಲ್ಲಿ ರಿಲೀಸ್ ಆಗಿರಲಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಅವರು ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಮಾಸ್ ಎಂಟರ್​​ಟೇನರ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಈ ಮೂಲಕ ಸಿನಿಮಾ ಗೆಲ್ಲುವ ಸೂಚನೆ ಸಿಕ್ಕಿದೆ. ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಸಿಕ್ಕರೆ ಸಿನಿಮಾದ ಭವಿಷ್ಯದ ಬಗ್ಗೆ ಚಿತ್ರಣ ಸಿಗಲಿದೆ.

ಬಾಲಿವುಡ್​​ನಲ್ಲಿ ರಿಮೇಕ್ ಚಿತ್ರಗಳು ಸದ್ದು ಮಾಡುತ್ತಿಲ್ಲ. ಈ ವರ್ಷ ರಿಲೀಸ್ ಆದ ಅನೇಕ ರಿಮೇಕ್ ಸಿನಿಮಾಗಳು ಸೋತಿವೆ. ಆದಾಗ್ಯೂ ಸಲ್ಮಾನ್ ಖಾನ್ ಅವರು 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಮೂಲ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇತ್ತು. ಈ ಕಾರಣಕ್ಕೆ ಸಲ್ಲು ಇದನ್ನು ರಿಮೇಕ್ ಮಾಡುವ ನಿರ್ಧಾರಕ್ಕೆ ಬಂದರು. ಹೋಂ ಬ್ಯಾನರ್​ನಲ್ಲಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗಿದೆ.

ಇದನ್ನೂ ಓದಿ: ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಲಿದೆ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ?

‘ಕಿಸಿ ಕ ಭಾಯ್ ಕಿಸಿ ಜಾನ್’ ಸಿನಿಮಾ ವಿನ್ನರ್. ನಿರೀಕ್ಷೆಗೂ ಮೀರಿ ಈ ಸಿನಿಮಾ ಇದೆ. ಸಲ್ಮಾನ್ ಖಾನ್ ಅವರದ್ದು ಔಟ್​ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್’ ಎಂದು ಸಲ್ಲು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ‘ಸಲ್ಮಾನ್ ಖಾನ್ ಚಿತ್ರ ಎಂಟರ್​ಟೇನಿಂಗ್ ಆಗಿದೆ. ಸಾಂಗ್ ಹಾಗೂ ಬಿಜಿಎಂ ಅದ್ಭುತ. ಸಲ್ಮಾನ್ ಖಾನ್ ನಟನೆ ಮೆಚ್ಚುವಂಥದ್ದು. ಛಾಯಾಗ್ರಹಣ, ಡೈಲಾಗ್ ಡೆಲಿವರಿ, ಸ್ಕ್ರೀನ್​ಪ್ಲೇ ಎಲ್ಲವೂ ಪರ್ಫೆಕ್ಟ್​’ ಆಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಬೆಡಗಿ ಪೂಜಾ ಹೆಗ್ಡೆ

ಸಲ್ಮಾನ್ ಖಾನ್ ಚಿತ್ರಗಳಲ್ಲಿ ಆ್ಯಕ್ಷನ್ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ. ಈ ಚಿತ್ರದಲ್ಲಿ ಆ್ಯಕ್ಷನ್ ಕೊಂಚ ಹೆಚ್ಚೇ ಇದೆ. ಇದರ ಜೊತೆಗೆ ಫ್ಯಾಮಿಲಿ ಡ್ರಾಮಾ ಕೂಡ ಇದೆ. ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಅಶ್ಲೀಲತೆಗೆ ಜಾಗ ಇಲ್ಲ. ಅದು ಈ ಚಿತ್ರದಲ್ಲೂ ಮುಂದುವರಿದಿದೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್​ಗೆ ಅವರು ಹೆಚ್ಚು ಇಷ್ಟ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ