
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಸರ್ಕಾರು ವಾರಿ ಪಾಟ’ (Sarkaru Vaari Paata) ಚಿತ್ರ ಇಂದು (ಮೇ 12) ಬಿಡುಗಡೆ ಆಗಿದೆ. ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇತ್ತು. ಅಂತಿಮವಾಗಿ ಈಗ ಬಿಡುಗಡೆ ಆಗಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡಿ ಖುಷಿ ಪಟ್ಟಿದ್ದಾರೆ ಮಹೇಶ್ ಬಾಬು (Mahesh Babu) ಅಭಿಮಾನಿಗಳು. ಅನೇಕ ಕಡೆಗಳಲ್ಲಿ ನಸುಕಿನಲ್ಲೇ ಶೋ ಆರಂಭ ಆಯಿತು. ಪರಶುರಾಮ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಮಾಸ್ ಗೆಟಪ್ ಧರಿಸಿದ್ದಾರೆ. ಒಟ್ಟಾರೆ ಈ ಚಿತ್ರ ಒನ್ ಮ್ಯಾನ್ ಶೋ ರೀತಿ ಇದೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಕೆಲವರು ಈ ಚಿತ್ರವನ್ನು ಸೂಪರ್ ಎಂದಿದ್ದಾರೆ. ಮತ್ತೆ ಕೆಲವರು ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಒಟ್ಟಿನಲ್ಲಿ ಮೊದಲ ದಿನವೇ ‘ಸರ್ಕಾರು ವಾರಿ ಪಾಟ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ಈ ಚಿತ್ರದ ಟ್ವಿಟರ್ ವಿಮರ್ಶೆ (Twitter Review) ಇಲ್ಲಿದೆ..
ಇದೊಂದು ಮಾಮೂಲಿ ಕಮರ್ಷಿಯಲ್ ಸಿನಿಮಾ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಸರಳವಾದ ಕಥೆಯನ್ನು ಎಂದಿನ ಸಿದ್ಧಸೂತ್ರಗಳ ಶೈಲಿಯಲ್ಲಿ ಹೇಳಲಾಗಿದೆ. ಮೊದಲಾರ್ಧದಲ್ಲಿ ಕಾಮಿಡಿ ಮೂಲಕ ಹೆಚ್ಚು ಮನರಂಜನೆ ಸಿಗುತ್ತದೆ. ಮಹೇಶ್ ಬಾಬು ಅವರು ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಸಿನಿಮಾದ ಸೆಕೆಂಡ್ ಹಾಫ್ ಚೆನ್ನಾಗಿಲ್ಲ. ತುಂಬ ನಿರಾಸೆ ಆಯಿತು ಎಂದು ಕೆಲವರು ಬರೆದುಕೊಂಡಿದ್ದಾರೆ. ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಕೇವಲ ಮಹೇಶ್ ಬಾಬು ಅವರಿಗೋಸ್ಕರ ಸಿನಿಮಾ ನೋಡಬೇಕು ಎಂದು ಜನರು ಟ್ವೀಟ್ ಮಾಡಿದ್ದಾರೆ. ‘ಕಥೆಯಲ್ಲಿ ಸ್ವಲ್ಪವೂ ಲಾಜಿಕ್ ಇಲ್ಲ. ಕೆಲವು ದೃಶ್ಯಗಳು ರೋಮಾಂಚನಕಾರಿ ಆಗಿವೆ ಅಷ್ಟೇ. ಕಾಮಿಡಿ ದೃಶ್ಯಗಳು ಕಥೆಯನ್ನು ಮೀರಿ ಹೋಗಿವೆ’ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಗಳಿಗೆ ‘ಸರ್ಕಾರು ವಾರಿ ಪಾಟ’ ಸಿನಿಮಾ ಹೆಚ್ಚು ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ನೆಗೆಟಿವ್ ವಿಮರ್ಶೆಗಳನ್ನು ನಂಬಬೇಡಿ. ನೇರವಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಎಂದು ಫ್ಯಾನ್ಸ್ ಮನವಿ ಮಾಡಿಕೊಂಡಿದ್ದಾರೆ.
ಅದ್ದೂರಿ ಮೇಕಿಂಗ್ ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಆ್ಯಕ್ಷನ್ ದೃಶ್ಯಗಳು ಕೂಡ ಕಿಕ್ ನೋಡಿವೆ. ಆದರೆ ಲಾಜಿಕ್ ಇಲ್ಲ ಎಂದು ಅನೇಕರು ಟೀಕೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:58 pm, Thu, 12 May 22