AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಸಿಪ್​​ಗಳ ನಡುವೆ ಒಟ್ಟಿಗೆ ನಟಿಸಲಿರುವ ಧನುಶ್-ಮೃಣಾಲ್ ಠಾಕೂರ್

Mrunal-Dhanush: ಮೃಣಾಲ್ ಠಾಕೂರ್ ಮತ್ತು ಧನುಶ್ ಅವರು ಪರಸ್ಪರ ಪ್ರೀತಿಯಲ್ಲಿದ್ದು, ಶೀಘ್ರವೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು. ನಟಿ ಮೃಣಾಲ್ ಠಾಕೂರ್ ‘ಡಕಾಯತ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಗಾಳಿಸುದ್ದಿಯನ್ನು ಅಲ್ಲಗಳೆದರು. ಆದರೆ ಇದೀಗ ಧನುಶ್ ಮತ್ತು ಮೃಣಾಲ್ ಕುರಿತಂತೆ ಮತ್ತೊಂದು ಸುದ್ದಿ ಹರಿದಾಡಲು ಆರಂಭವಾಗಿದೆ.

ಗಾಸಿಪ್​​ಗಳ ನಡುವೆ ಒಟ್ಟಿಗೆ ನಟಿಸಲಿರುವ ಧನುಶ್-ಮೃಣಾಲ್ ಠಾಕೂರ್
Mrunal Dhanush
ಮಂಜುನಾಥ ಸಿ.
|

Updated on: Apr 21, 2026 | 11:36 AM

Share

ಕೆಲ ವಾರಗಳ ಹಿಂದಷ್ಟೆ ಮೃಣಾಲ್ ಠಾಕೂರ್ (Mrunal Thakur) ಮತ್ತು ತಮಿಳು ಸ್ಟಾರ್ ನಟ ಧನುಶ್ ಕುರಿತು ಸುದ್ದಿಗಳು ಹರಿದಾಡಿದ್ದವು. ಮೃಣಾಲ್ ಠಾಕೂರ್ ಮತ್ತು ಧನುಶ್ ಅವರು ಪರಸ್ಪರ ಪ್ರೀತಿಯಲ್ಲಿದ್ದು, ಶೀಘ್ರವೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು. ನಟಿ ಮೃಣಾಲ್ ಠಾಕೂರ್ ‘ಡಕಾಯತ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಗಾಳಿಸುದ್ದಿಯನ್ನು ಅಲ್ಲಗಳೆದರು. ಆದರೆ ಇದೀಗ ಧನುಶ್ ಮತ್ತು ಮೃಣಾಲ್ ಕುರಿತಂತೆ ಮತ್ತೊಂದು ಸುದ್ದಿ ಹರಿದಾಡಲು ಆರಂಭವಾಗಿದೆ.

ಮೃಣಾಲ್ ಠಾಕೂರ್ ಮತ್ತು ಧನುಶ್ ಒಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದ್ದು, ಸಿನಿಮಾ ಅನ್ನು ಧನುಶ್ ಅವರೇ ನಿರ್ದೇಶನ ಸಹ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಮೃಣಾಲ್ ಠಾಕೂರ್ ಅವರು ತೆಲುಗು, ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಈ ವರೆಗೆ ಯಾವುದೇ ತಮಿಳು ಸಿನಿಮಾನಲ್ಲಿ ನಟಿಸಿಲ್ಲ. ಆದರೆ ಇದೀಗ ಧನುಶ್ ಅವರೊಟ್ಟಿಗೆ ಮೊದಲ ಬಾರಿಗೆ ತಮಿಳು ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ ಮೃಣಾಲ್ ಠಾಕೂರ್.

ಇದನ್ನೂ ಓದಿ:ಪದೇ ಪದೇ ಕೇಳಿಬಂದ ಮದುವೆ, ಡೇಟಿಂಗ್ ವದಂತಿಗೆ ಮೃಣಾಲ್ ಠಾಕೂರ್ ಬ್ರೇಕ್

ಮೃಣಾಲ್ ಠಾಕೂತ್ ಅವರು ಧನುಶ್ ಅವರೊಟ್ಟಿಗಿನ ಸಂಭಂದದ ಸುದ್ದಿಯನ್ನು ಅಲ್ಲಗಳೆದಿದ್ದಾರಾದರೂ ಈಗ ಇಬ್ಬರೂ ಒಟ್ಟಿಗೆ ನಟಿಸುತ್ತಿರುವುದು ಆ ಹಳೆಯ ಸುದ್ದಿಗೆ ಮತ್ತೆ ಮರುಜೀವ ನೀಡಿದೆ. ಅದರಲ್ಲೂ ಮೃಣಾಲ್ ಅವರ ಸಿನಿಮಾವನ್ನು ಧನುಶ್ ನಿರ್ದೇಶನ ಮಾಡಲು ಮುಂದಾಗಿರುವುದು ಇಬ್ಬರ ನಡುವಿನ ಆತ್ಮೀಯತೆ ಸುದ್ದಿಗೆ ಇನ್ನಷ್ಟು ಇಂಬು ನೀಡಿದೆ. ಧನುಶ್ ಅವರು ಇತ್ತೀಚೆಗಷ್ಟೆ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಮೃಣಾಲ್ ಅವರಿಗೆ ಇನ್ನೂ ಮದುವೆ ಆಗಿಲ್ಲ.

ಧನುಶ್ ಅವರು ರಜನೀಕಾಂತ್ ಅವರ ಪುತ್ರಿಯನ್ನು ವಿವಾಹವಾಗಿದ್ದರು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 20 ವರ್ಷದ ದಾಂಪತ್ಯದ ಬಳಿಕ ಇತ್ತೀಚೆಗಷ್ಟೆ ಇಬ್ಬರೂ ದೂರಾಗಿದ್ದಾರೆ. ಧನುಶ್ ಪ್ರಸ್ತುತ ‘ಕಾರಾ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಹಿಂದಿಯಲ್ಲಿ ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲಿದ್ದಾರೆ. ಇಳಯರಾಜ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇನ್ನು ಮೃಣಾಲ್ ಠಾಕೂರ್ ಹಿಂದಿಯಲ್ಲಿ ವರುಣ್ ಧವನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪೂಜಾ ಮೇರಿ ಜಾನ್’ ಎಂಬ ಮತ್ತೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ‘ರಾಕಾ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ