AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿಕೆ ದ್ರೋಹ ಮಾಡಿದರು: ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ

Son Of Sardar 2: ಮೃಣಾಲ್ ಠಾಕೂರ್, ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಅವರಿಗೆ ಹೆಚ್ಚು ಹಿಟ್ ನೀಡಿರುವುದು ಮತ್ತು ಒಳ್ಳೆಯ, ನೆನಪುಳಿಯುವ ಪಾತ್ರಗಳನ್ನು ನೀಡಿರುವುದು ತೆಲುಗು ಚಿತ್ರರಂಗ. ಮೂಲತಃ ಮರಾಠಿ ನಟಿಯಾದರೂ ಹಾಗೂ ನಟನೆಗೆ ಪ್ರವೇಶವನ್ನು ಹಿಂದಿ ಚಿತ್ರರಂಗದಿಂದ ಮಾಡಿದ್ದರೂ ಸಹ ಬಾಲಿವುಡ್ ಮೇಲೆ ಅವರಿಗೆ ಬೇಸರ ಇದೆ. ಇದೀಗ ಅವರು ಬಾಲಿವುಡ್​ನ ಸಿನಿಮಾ ತಂಡವೊಂದು ತಮಗೆ ದೊಡ್ಡ ನಂಬಿಕೆ ದ್ರೋಹ ಮಾಡಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಂಬಿಕೆ ದ್ರೋಹ ಮಾಡಿದರು: ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ
Mrunal Thakur
ಮಂಜುನಾಥ ಸಿ.
|

Updated on: Apr 16, 2026 | 10:48 AM

Share

ಪ್ಯಾನ್ ಇಂಡಿಯಾ ನಟಿ ಮೃಣಾಲ್ ಠಾಕೂರ್ (Mrunal Thakur), ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಅವರಿಗೆ ಹೆಚ್ಚು ಹಿಟ್ ನೀಡಿರುವುದು ಮತ್ತು ಒಳ್ಳೆಯ, ನೆನಪುಳಿಯುವ ಪಾತ್ರಗಳನ್ನು ನೀಡಿರುವುದು ತೆಲುಗು ಚಿತ್ರರಂಗ. ಮೂಲತಃ ಮರಾಠಿ ನಟಿಯಾದರೂ ಹಾಗೂ ನಟನೆಗೆ ಪ್ರವೇಶವನ್ನು ಹಿಂದಿ ಚಿತ್ರರಂಗದಿಂದ ಮಾಡಿದ್ದರೂ ಸಹ ಬಾಲಿವುಡ್ ಮೇಲೆ ಅವರಿಗೆ ಬೇಸರ ಇದೆ. ಇದೀಗ ಅವರು ಬಾಲಿವುಡ್​ನ ಸಿನಿಮಾ ತಂಡವೊಂದು ತಮಗೆ ದೊಡ್ಡ ನಂಬಿಕೆ ದ್ರೋಹ ಮಾಡಿದೆ ಎಂದು ನಟಿ ಮೃಣಾಲ್ ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಜಯ್ ದೇವಗನ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮೃಣಾಲ್ ಠಾಕೂರ್ ಮಾತನಾಡಿದ್ದಾರೆ.

‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ಅವರು ರಾಬಿಯಾ ಅಖ್ತರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅವರ ಪತಿಯ ಪಾತ್ರದಲ್ಲಿ ಹಿರಿಯ ನಟ ಚಂಕಿ ಪಾಂಡೆ ಡ್ಯಾನಿಶ್ ಪಾತ್ರದಲ್ಲಿ ನಟಿಸಿದ್ದಾರೆ. ಮೃಣಾಲ್ ಪ್ರಕಾರ, ಚಿತ್ರಕ್ಕೆ ಸಹಿ ಮಾಡುವಾಗ ಅಥವಾ ಚಿತ್ರೀಕರಣದ ಆರಂಭದಲ್ಲಿ ತಮ್ಮ ಪತಿಯ ಪಾತ್ರದಲ್ಲಿ ಇಷ್ಟು ಹಿರಿಯ ನಟ ನಟಿಸುತ್ತಾರೆ ಎಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅವರಿಗೆ ಈ ಬಗ್ಗೆ ಹೇಳಿರಲಿಲ್ಲವಂತೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಅವರು, ‘ಒಬ್ಬ ಹಿರಿಯ ನಟ ನನ್ನ ಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ನನಗೆ ಮೊದಲೇ ತಿಳಿದಿರಲಿಲ್ಲ. ಈ ಒಂದು ನಿರ್ಧಾರ ನನ್ನ ಪಾತ್ರದ ಗತಿಯನ್ನೇ ಬದಲಿಸಿತು. ಇದು ನಾನು ನಿರೀಕ್ಷಿಸಿದ್ದಲ್ಲ, ಇದರಿಂದಾಗಿ ಚಿತ್ರತಂಡದ ಮೇಲಿದ್ದ ನನ್ನ ನಂಬಿಕೆ ಅಲುಗಾಡಿತು’ ಎಂದು ಹೇಳಿದ್ದಾರೆ. ಆದರೂ, ಇದು ನನಗೆ ಒಂದು ರೀತಿಯ ಪಾಠವಾಗಿತ್ತು, ಈ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ತೆಲುಗು ಕುಟುಂಬದ ಸೊಸೆ ಆಗುತ್ತಾರಾ ಮೃಣಾಲ್ ಠಾಕೂರ್?

ಕೇವಲ ಪಾತ್ರವರ್ಗದ ಆಯ್ಕೆ ಮಾತ್ರವಲ್ಲದೆ, ಚಿತ್ರದ ಎಡಿಟಿಂಗ್ ಹಂತದಲ್ಲಿ ತಮ್ಮ ಕೆಲವು ಪ್ರಮುಖ ಭಾವನಾತ್ಮಕ ದೃಶ್ಯಗಳನ್ನು ಕತ್ತರಿಸಿರುವುದಕ್ಕೆ ಮೃಣಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರೋಶ್ನಿ ವಾಲಿಯಾ (ಚಿತ್ರದಲ್ಲಿ ಅವರ ಮಗಳ ಪಾತ್ರ) ಜೊತೆಗಿನ ತಾಯಿ-ಮಗಳ ಬಾಂಧವ್ಯದ ಸುಂದರ ದೃಶ್ಯಗಳು ಸಿನಿಮಾದಿಂದ ತೆಗೆಯಲಾಗಿದೆ. ‘ತಾನು ಜನ್ಮ ನೀಡದಿದ್ದರೂ ಮಗುವನ್ನು ಹೇಗೆ ಪ್ರೀತಿಸುತ್ತೇನೆ ಎಂಬ ಭಾವನಾತ್ಮಕ ಅಂಶ ಚಿತ್ರದಲ್ಲಿ ಮಿಸ್ ಆಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ಅಜಯ್ ದೇವಗನ್, ನೀರು ಬಾಜ್ವಾ, ರವಿ ಕಿಶನ್ ಮತ್ತು ಸಂಜಯ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂಜಯ್ ದತ್ ಅವರಿಗೆ ವೀಸಾ ಸಮಸ್ಯೆ ಎದುರಾದ ಕಾರಣ ಅವರ ಬದಲಿಗೆ ರವಿ ಕಿಶನ್ ಈ ಚಿತ್ರಕ್ಕೆ ಬಂದಿದ್ದರು. ಕಳೆದ ವರ್ಷ ಆಗಸ್ಟ್ 1 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸುಮಾರು 32 ಕೋಟಿ ರೂಪಾಯಿಗಳ ಸಾಧಾರಣ ಗಳಿಕೆಯನ್ನು ಮಾಡಿತು. ಇತ್ತೀಚೆಗಷ್ಟೆ ತೆಲುಗು ನಟ ಅಡಿವಿ ಶೇಷ್ ಜೊತೆ ‘ಡಕಾಯ್ತ್’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಮತ್ತು ‘ಪೂಜಾ ಮೇರಿ ಜಾನ್’ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us