‘ಪೊನ್ನಿಯಿನ್ ಸೆಲ್ವನ್​ 2’ ಸಿನಿಮಾ ಅವಧಿ ಇಷ್ಟೊಂದಾ? ಸೀಟ್​ ಮೇಲೆ ಕೂರೋದೆ ಚಾಲೆಂಜ್

Ponniyin Selvan: Part Two: ಈಗಾಗಲೇ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾಗೆ ಪ್ರಮೋಷನ್ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

‘ಪೊನ್ನಿಯಿನ್ ಸೆಲ್ವನ್​ 2’ ಸಿನಿಮಾ ಅವಧಿ ಇಷ್ಟೊಂದಾ? ಸೀಟ್​ ಮೇಲೆ ಕೂರೋದೆ ಚಾಲೆಂಜ್
ಪೊನ್ನಿಯಿನ್ ಸೆಲ್ವನ್ ಪೋಸ್ಟರ್

Updated on: Mar 28, 2023 | 7:18 AM

ಮುಖ್ಯಾಂಶಗಳು

  • ‘ಪೊನ್ನಿಯಿನ್ ಸೆಲ್ವನ್ 2’ ತೆರೆಗೆ ಬರೋಕೆ ರೆಡಿ ಇದೆ
  • ಈಗಾಗಲೇ ಸಿನಿಮಾಗೆ ಶುರುವಾಗಿದೆ ಪ್ರಮೋಷನ್
  • ಸಿನಿಮಾದ ಅವಧಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ

ಐಶ್ವರ್ಯಾ ರೈ (Aishwarya Rai), ತ್ರಿಷಾ ಕೃಷ್ಣನ್, ಕಾರ್ತಿ, ವಿಕ್ರಂ ಮೊದಲಾದವರು ನಟಿಸಿದ್ದ ‘ಪೊನ್ನಿಯಿನ್ ಸೆಲ್ವನ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಮಣಿರತ್ನಂ. ಈ ಕಾರಣಕ್ಕೂ ಸಿನಿಮಾ ಗಮನ ಸೆಳೆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಮಾಯಿ ಮಾಡಿತು. ಈಗ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan: Part Two) ಬರೋಕೆ ರೆಡಿ ಆಗಿದೆ. ಏಪ್ರಿಲ್ 28ರಂದು ಸಿನಿಮಾ ರಿಲೀಸ್ ಆಗಲಿದ್ದು, ಮಾರ್ಚ್ 29ರಂದು ಟ್ರೇಲರ್ ರಿಲೀಸ್ ಆಗಲಿದೆ. ಇದಕ್ಕೂ ಮೊದಲು ಸಿನಿಮಾದ ಅವಧಿ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಇದನ್ನು ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

ಈಗಾಗಲೇ ಸಿನಿಮಾಗೆ ಪ್ರಮೋಷನ್ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಮಣಿರತ್ನಂ ಆ್ಯಂಡ್ ಟೀಂ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡಲಿದೆ. ಇದಕ್ಕೂ ಮೊದಲು ಸಿನಿಮಾ ಅವಧಿ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಚಿತ್ರದ ಅವಧಿ ಸದ್ಯ 4 ಗಂಟೆ ಇದೆಯಂತೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕತ್ತರಿ ಹಾಕಲು ಅವಕಾಶ ನಿರ್ದೇಶಕರಿಗೆ ಇದೆ. ಹೀಗಾಗಿ, ಸಿನಿಮಾದ ಅವಧಿ 3 ಗಂಟೆ 53 ನಿಮಿಷ ಆಗಿರಲಿದೆ. ಇದು ಪ್ರೇಕ್ಷಕರ ಚಿಂತೆಗೆ ಕಾರಣ ಆಗಿದೆ.

ಇದನ್ನೂ ಓದಿ: ಐಶ್ವರ್ಯಾ ರೈ ಸೀರೆಯುಟ್ಟು ಮಿಂಚಿದ್ದ ಅಪರೂಪದ ಪೋಟೋಗಳು ಇಲ್ಲಿವೆ

ಸಿನಿಮಾದ ಅವಧಿ ಎರಡು ಗಂಟೆಯಿಂದ ಎರಡೂವರೆ ಗಂಟೆವರೆಗೆ ಇದ್ದರೆ ಪ್ರೇಕ್ಷಕನಿಗೆ ಆಯಾಸ ಎನಿಸುವುದಿಲ್ಲ. ಕೆಲವೊಮ್ಮೆ ಕಥೆ ಬೇಡಿದರೆ ಸಿನಿಮಾದ ಅವಧಿ ಮೂರು ಗಂಟೆ ಆಗುತ್ತದೆ. ಆದರೆ, ‘ಪೊನ್ನಿಯಿನ್ ಸೆಲ್ವನ್’ ಸಿನಿಮಾಗಾಗಿ ಪ್ರೇಕ್ಷಕ ನಾಲ್ಕ ಗಂಟೆ ಚಿತ್ರಮಂದಿರದಲ್ಲಿ ಕೂರಬೇಕು ಎಂದರೆ ಅದು ಚಾಲೆಂಜ್ ಎನಿಸಬಹುದು. ಮೊದಲ ಭಾಗವನ್ನು ಇಷ್ಟಪಟ್ಟ ಪ್ರೇಕ್ಷಕರು ಎರಡನೇ ಭಾಗವನ್ನೂ ಇಷ್ಟಪಡಬಹುದು ಎಂದು ಊಹಿಸಲಾಗುತ್ತಿದೆ.

ಇದನ್ನೂ ಓದಿ: 4 ದಿನಕ್ಕೆ 250 ಕೋಟಿ ರೂಪಾಯಿ ಬಾಚಿದ ‘ಪೊನ್ನಿಯಿನ್​ ಸೆಲ್ವನ್’; ಇದು ಮಣಿರತ್ನಂ ಮ್ಯಾಜಿಕ್

‘ಪೊನ್ನಿಯಿನ್ ಸೆಲ್ವನ್​’ ಸಿನಿಮಾದ ಮೇಕಿಂಗ್, ಅದ್ದೂರಿತನ ಗಮನ ಸೆಳೆದಿದೆ. ಈ ಕಾರಣಕ್ಕೆ ಎರಡನೇ ಭಾಗದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಪೊನ್ನಿಯಿನ್ ಸೆಲ್ವನ್ ಹಾಗೂ ವಂದಿಯಾ ದೇವನ್​ಗೆ ಏನಾಯಿತು ಎಂದು ತಿಳಿದುಕೊಳ್ಳುವ ಕಾತುರ ಮೂಡಿದೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us