AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈಸೂರು ಸ್ಟುಡಿಯೋ’ ಪೋಸ್ಟರ್ ರಿಲೀಸ್; ಗತವೈಭವದ ಘಮವಿರುವ ಸಿನಿಮಾ

ರಿಷಿಕೇಶ್, ಧನಂಜಯ್, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಯುದಿತ್ ಶೆಟ್ಟಿ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್ ಮುಂತಾದವರು ‘ಮೈಸೂರು ಸ್ಟುಡಿಯೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರವೀಣ್ ಎಂ. ಪ್ರಭು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಯಿತು.

‘ಮೈಸೂರು ಸ್ಟುಡಿಯೋ’ ಪೋಸ್ಟರ್ ರಿಲೀಸ್; ಗತವೈಭವದ ಘಮವಿರುವ ಸಿನಿಮಾ
Mysore Studio Poster
ಮದನ್​ ಕುಮಾರ್​
|

Updated on:Oct 23, 2026 | 6:06 PM

Share

‘ಪ್ರೇಮದ ಊರಲಿ’ ರೀತಿಯ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ಎದ್ದಿದೆ. ಹೈ5 ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್‌ಡಿ ಫಿಲ್ಮ್ಸ್ ಆ್ಯಂಡ್ ಮೀಡಿಯಾ ನಿರ್ಮಾಣದ ‘ಮೈಸೂರು ಸ್ಟುಡಿಯೋ’ ಆ ಅಲೆಗೆ ಮತ್ತಷ್ಟು ಚೈತನ್ಯ ತುಂಬುವ ಭರವಸೆ ಮೂಡಿಸಿದೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್, ಮೈಸೂರು ಮಹಾರಾಜರ ಕಾಲದ ನಂಟಿರುವ ಕಥೆಯ ಕುತೂಹಲಕಾರಿ ಝಲಕ್ ತೆರೆದಿಟ್ಟಂತಿದೆ. ಛಾಯಾಗ್ರಾಹಕರಾಗಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡು ಮೆಚ್ಚುಗೆ ಗಳಿಸಿರುವ ಪ್ರವೀಣ್ ಎಂ. ಪ್ರಭು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

150 ವರ್ಷಗಳ ಹಿಂದೆ ಮೈಸೂರು ಮಹಾರಾಜರಿಂದ ಕುಟುಂಬವೊಂದಕ್ಕೆ ಉಡುಗೊರೆಯಾಗಿ ಸಿಕ್ಕ ಅಪರೂಪದ ಕ್ಯಾಮೆರಾ, ಅದಕ್ಕಂಟಿಕೊಂಡೇ 4 ತಲೆಮಾರುಗಳನ್ನು ಬೆಳೆದು ಬಂದ ನೆನಪುಗಳು ಮತ್ತು ಹೊಸ ತಲೆಮಾರಿನ 10 ವರ್ಷದ ಹುಡುಗನ ಮನಸಲ್ಲಿ ಟಿಸಿಲೊಡೆಯುವ ಹಂಬಲ, ಸಾಮಾನ್ಯವಾಗಿ ಫೋಟೋಗಳ ನೆನಪುಗಳನ್ನು ಕಾಯ್ದಿಟ್ಟುಕೊಳ್ಳುತ್ತವೆ. ಅಂತಹ ಕೆಲವು ನೆನಪುಗಳು ಕೆಲವು ಅಚ್ಚರಿಗಳಿಗೂ ಕಾರಣವಾಗುತ್ತವೆ. ಇಂತಹ ಹಲವಾರು ತಲೆಮಾರುಗಳ ಗಟ್ಟಿ ಕಥೆಯೊಂದಿಗೆ ನಿರ್ದೇಶಕ ಪ್ರವೀಣ್ ಎಂ. ಪ್ರಭು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಸಂಕೀರ್ಣ ಕಥೆಯೊಂದನ್ನು ದೃಶ್ಯರೂಪಕ್ಕಿಳಿಸಿರುವ ಸುಳಿವು ಕೊಟ್ಟಿದ್ದಾರೆ.

10 ವರ್ಷದಿಂದೀಚೆಗೆ ಛಾಯಾಗ್ರಾಹಕನಾಗಿ ಚಿತ್ರರಂಗದ ಭಾಗವಾಗಿದ್ದವರು ಪ್ರವೀಣ್ ಎಂ. ಪ್ರಭು. ಛಾಯಾಗ್ರಾಹಕರಾಗಿ ಅವರು ಕಾರ್ಯನಿರ್ವಹಿಸಿದ್ದ ‘ರಂಕಲ್ ರಾಟೆ’, ‘ಕಪಾಲ’, ‘ಮತ್ಸ್ಯಗಂಧ’ ಮುಂತಾದ ಚಿತ್ರಗಳು ಸಿನಿಮಾಟೋಗ್ರಫಿ ವಿಚಾರದಲ್ಲಿ ಗಮನ ಸೆಳೆದಿದ್ದವು. ಈ ನಡುವೆ ನಿರ್ದೇಶಕರಾಗುವ ಇರಾದೆಯಿಂದ ಎರಡು ಕಿರುಚಿತ್ರಗಳನ್ನೂ ಪ್ರವೀಣ್ ನಿರ್ದೇಶನ ಮಾಡಿದ್ದರು. ಅದರಲ್ಲೊಂದಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಆ ಕಥೆಯನ್ನೇ ‘ಮೈಸೂರು ಸ್ಟುಡಿಯೋ’ ಚಿತ್ರವಾಗಿಸಿದ್ದಾರೆ.

ಈಗ ಈ ಸಿನಿಮಾ ತಂಡ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಸಂಗೀತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಪ್ರವೀಣ್ ಕವಿತಾ, ಸತ್ಯ ಶ್ರೀನಿವಾಸನ್, ದಿವಾಕರ್ ದಯಾಳ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಎಂ. ಪ್ರಭು ಸಹನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್, ಡ್ಯಾನಿ ಕಣಿಕರಾಜ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ

ಲಿಂಗರಾಜ್ ಇತಿಹಾಸ್, ಅವಿನಾಶ್ ಕಳಸ, ಪ್ರವೀಣ್ ಎಂ. ಪ್ರಭು ಸಂಭಾಷಣೆ ಬರೆದಿದ್ದಾರೆ. ಅಜಿತ್ ಕೇಶವ ಅವರ ಸಾಹಿತ್ಯ, ಕೆ. ಯೇಸು ಅವರ ಸಂಕಲನ ಈ ಚಿತ್ರಕ್ಕಿದೆ. ‘ಎಲ್ಟು ಮುತ್ತ’, ‘ಹುಬ್ಳಿ ಹಂಟರ್ಸ್’ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಸನ್ನ ಕೇಶವ ಕೆ.ಎಸ್. ಅವರು ಸಂಗೀತ ನೀಡಿದ್ದಾರೆ. ಪ್ರವೀಣ್ ಎಂ. ಪ್ರಭು ಅವರೇ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:15 pm, Fri, 23 October 26

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More