ಶೆಫಾಲಿ ಸತ್ತಿದ್ದು ಹೃದಯಾಘಾತದಿಂದ ಅಲ್ಲ; ಶಾಕಿಂಗ್ ವಿಚಾರ ತಿಳಿಸಿದ ಪೊಲೀಸರು

ಪ್ರಸಿದ್ಧ ಕನ್ನಡ ಹಾಡು "ಪಂಕಜಾ" ದಲ್ಲಿ ನಟಿಸಿದ್ದ ನಟಿ ಶೆಫಾಲಿ ಜರಿವಾಲಾ ಅವರ ನಿಧನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೃದಯಾಘಾತ ಎಂದು ಹೇಳಲಾಗಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೆಫಾಲಿ ಅವರು 42 ವರ್ಷ ವಯಸ್ಸಿನವರಾಗಿದ್ದು, ಆರೋಗ್ಯವಾಗಿಯೇ ಇದ್ದರು ಎನ್ನಲಾಗಿದೆ.

ಶೆಫಾಲಿ ಸತ್ತಿದ್ದು ಹೃದಯಾಘಾತದಿಂದ ಅಲ್ಲ; ಶಾಕಿಂಗ್ ವಿಚಾರ ತಿಳಿಸಿದ ಪೊಲೀಸರು
ಶೆಫಾಲಿ

Updated on: Jun 28, 2025 | 2:49 PM

ಕನ್ನಡದಲ್ಲಿ ‘ಪಂಕಜಾ..’ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದ ನಟಿ ಶೆಫಾಲಿ ಜರಿವಾಲಾ (Shefali Jariwala) ಸಾವಿನ ವಿಚಾರವಾಗಿ ಶಾಕಿಂಗ್ ಅಪ್​ಡೇಟ್ ಒಂದು ಸಿಕ್ಕಿದೆ. ಆರಂಭದಲ್ಲಿ ಇದು ಹೃದಯಾಘಾತದಿಂದ ಆದ ಸಾವು ಎಂದು ಹೇಳಲಾಗಿತ್ತು. ಈಗ ಪೊಲೀಸರು ನಟಿಯ ನಿಧನದ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಹಾರ್ಟ್ ಅಟ್ಯಾಕ್​ನಿಂದಲೇ ಅವರು ನಿಧನ ಹೊಂದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.  ಇದರಿಂದ ಅನುಮಾನ ಹೆಚ್ಚಾಗಿದೆ.

ಶೆಫಾಲಿ ಜರಿವಾಲಾಗೆ ಈಗಿನ್ನು 42 ವರ್ಷ ವಯಸ್ಸು. ಅವರು ಮುಂಬೈನ ಅಂದೇರಿಯಲ್ಲಿ ಪತಿ ಪರಾಗ್ ತ್ಯಾಗಿ ಜೊತೆ ವಾಸವಾಗಿದ್ದರು. ಅವರು ಅಸ್ವಸ್ಥಗೊಂಡ ಕಾರಣ ಮಧ್ಯರಾತ್ರಿ ಮುಂಬೈನ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆತರುವ ಮುನ್ನವೇ ನಟಿ ನಿಧನ ಹೊಂದಿದ್ದರು ಎನ್ನಲಾಗಿದೆ. ಆರಂಭದಲ್ಲಿ ಇದು ಹೃದಯಾಘಾತ ಎಂದು ಹೇಳಲಾಗಿತ್ತು. ಆದರೆ, ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.

ನಟಿಯ ಸಾವಿನ ಹಿಂದೆ ಹಲವು ಅನುಮಾನ..

ನಟಿ ಆರೋಗ್ಯವಾಗಿಯೇ ಇದ್ದರು. ಅವರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಆದಾಗ್ಯೂ ಅವರು ನಿಧನ ಹೊಂದಿದ್ದಾರೆ ಎಂದಾಗ ಸಹಜವಾಗಿಯೇ ಅನುಮಾನ ಹೆಚ್ಚಾಗುತ್ತದೆ. ಈ ಕಾರಣದಿಂದ ಸದ್ಯ ಪೊಲೀಸರು ನಟಿಯ ಮನೆಯನ್ನು ಪರಿಶೀಲಿಸಿದ್ದಾರೆ. ಕೆಲವರನ್ನು ಕರೆದು ಹೇಳಿಕೆ ಕೂಡ ದಾಖಲಿಸಿಕೊಂಡಿದ್ದಾರೆ. ಶೆಫಾಲಿ ಶವ ಕೂಪರ್ ಆಸ್ಪತ್ರೆಯಲ್ಲಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ
‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು  
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ

ಇದನ್ನೂ ಓದಿ: ಶೆಫಾಲಿ ಕೊನೆಯ ದಿನಗಳು ಎಷ್ಟು ಖುಷಿಯಿಂದ ಇದ್ದವು ನೋಡಿ

ಸಿನಿ ಬದುಕು

ಶೆಫಾಲಿ ಅವರು ಚಿತ್ರರಂಗದಲ್ಲಿ ಹೇಳುವಂಥ ಹೆಸರು ಮಾಡಿದವರಲ್ಲ. ಆದರೆ, ಹಾಡುಗಳೇ ಅವರ ಬದುಕನ್ನು ಬದಲಾಯಿಸಿತು. ‘ಕಾಂಟಾ ಲಗಾ..’ ಹಾಡು ಭರ್ಜರಿ ಹಿಟ್ ಆಯಿತು. ಈ ಹಾಡಿನ ಯಶಸ್ಸು ಅವರನ್ನು ಬೇರೆ ಹಂತಕ್ಕೆ ಕರೆದುಕೊಂಡು ಹೋಯಿತು. ಕನ್ನಡದ ‘ಪಂಕಜಾ..’ ಹಾಡಿನಲ್ಲಿ ಅವರು ಪುನೀತ್ ಜೊತೆ ಸ್ಟೆಪ್ ಹಾಕಿದ್ದರು. ಈಗ ಅವರು ನಿಧನ ಹೊಂದಿರೋ ವಿಚಾರ ಅನೇಕರಿಂದ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.