AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಾರಕೀಶ್ ನಿರ್ಮಾಣದ ಸಿನಿಮಾದಲ್ಲಿ ನಟಿಸಬೇಕಿತ್ತು ವಿಷ್ಣು-ಶ್ರೀದೇವಿ; ಸಿನಿಮಾ ನಿಂತಿದ್ದೇಕೆ?

ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದ ‘ಆಪ್ತಮಿತ್ರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಗುಂಗು ಹೋದ ಬಳಿಕವೇ ಮತ್ತೊಂದು ಸಿನಿಮಾ ಮಾಡಬೇಕು ಎಂಬುದು ದ್ವಾರಕೀಶ್ ನಿರ್ಧಾರ ಆಗಿತ್ತು. ಇಲ್ಲವಾದರೆ ಎಲ್ಲರೂ ಎರಡೂ ಚಿತ್ರಗಳ ಮಧ್ಯೆ ಹೋಲಿಕೆ ಮಾಡುತ್ತಾರೆ ಎಂಬ ಭಯ ಇತ್ತು. ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಯಿತು. ಆದರೆ, ಸಿನಿಮಾ ಸೆಟ್ಟೇರಲೇ ಇಲ್ಲ.

ದ್ವಾರಕೀಶ್ ನಿರ್ಮಾಣದ ಸಿನಿಮಾದಲ್ಲಿ ನಟಿಸಬೇಕಿತ್ತು ವಿಷ್ಣು-ಶ್ರೀದೇವಿ; ಸಿನಿಮಾ ನಿಂತಿದ್ದೇಕೆ?
ಶ್ರೀದೇವಿ-ವಿಷ್ಣುವರ್ಧನ್
ರಾಜೇಶ್ ದುಗ್ಗುಮನೆ
|

Updated on: Jun 28, 2025 | 11:56 AM

Share

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (Dwarakeesh) ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ನಿರ್ಮಾಪಕರಾಗಿ ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದರು. ವಿಷ್ಣುವರ್ಧನ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಇಬ್ಬರೂ ಒಟ್ಟಾಗಿ ಮಾಡಿದ ಚಿತ್ರಗಳು ಹಲವು. ಅವರು ವಿಷ್ಣುವರ್ಧನ್ ಹಾಗೂ ಬಹುಭಾಷಾ ನಟಿ ಶ್ರೀದೇವಿಯನ್ನು ಒಟ್ಟಿಗೆ ತರೋ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಆ ಬಗ್ಗೆ ದ್ವಾರಕೀಶ್ ಮಗ ಯೋಗಿ ಮಾತನಾಡಿದ್ದಾರೆ.

ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದ ‘ಆಪ್ತಮಿತ್ರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಗುಂಗು ಹೋದ ಬಳಿಕವೇ ಮತ್ತೊಂದು ಸಿನಿಮಾ ಮಾಡಬೇಕು ಎಂಬುದು ದ್ವಾರಕೀಶ್ ನಿರ್ಧಾರ ಆಗಿತ್ತು. ಇಲ್ಲವಾದರೆ ಎಲ್ಲರೂ ಎರಡೂ ಚಿತ್ರಗಳ ಮಧ್ಯೆ ಹೋಲಿಕೆ ಮಾಡುತ್ತಾರೆ ಎಂಬ ಭಯ ಇತ್ತು. ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಯಿತು. ಆದರೆ, ಸಿನಿಮಾ ಸೆಟ್ಟೇರಲೇ ಇಲ್ಲ.

ಇದನ್ನೂ ಓದಿ
Image
‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು  
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
Image
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
Image
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ

‘ಜನರು ಆಪ್ತಮಿತ್ರ ಸಿನಿಮಾ ಮರೀಬೇಕಿತ್ತು. ಮರೀಬೇಕು ಎಂದರೆ ಸೂಪರ್ ಹಿಟ್ ಚಿತ್ರಗಳು ಬರಬೇಕು. ಆಗ ಜೋಗಿ, ದುನಿಯಾ, ಮುಂಗಾರುಮಳೆ ಹಿಟ್ ಬಂತು. 2008ರ ಕೊನೆಯಲ್ಲಿ ನಾವು ಸಿನಿಮಾ ಮಾಡಬೇಕು ಎಂದುಕೊಂಡೆವು. ಆಲದಮರ ಸಿನಿಮಾ ಟೈಟಲ್ ನೋದಂಣಿ ಮಾಡಿಸಿದೆವು. ಈ ಚಿತ್ರದಲ್ಲಿ ವಿಷ್ಣುವರ್ಧನ್, ಶ್ರೀದೇವಿ, ಅಪ್ಪಾಜಿ, ಪ್ರಕಾಶ್ ರಾಜ್ ನಟಿಸಬೇಕಿತ್ತು. ಈ ಸಿನಿಮಾಗೆ ಅಪ್ಪಾಜಿ ಅವರೇ ನಿರ್ದೇಶನ ಮಾಡಬೇಕಿತ್ತು’ ಎಂದು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಯೋಗಿ ಹೇಳಿದ್ದಾರೆ.

‘ಈ ಚಿತ್ರದಲ್ಲಿ ವಿಲನ್​ಗಳೇ ಇರಲಿಲ್ಲ. ಯಜಮಾನ ಸಿನಿಮಾ ರೀತಿಯೇ ಕಥೆ ಇತ್ತು. ಇದು ತಮಿಳು ನಿರ್ದೇಶಕ ವಿಕ್ರಮ್ ಕಥೆ ಬರೆಯಬೇಕಿತ್ತು. ಆದರೆ, 2009ರಲ್ಲಿ ವಿಷ್ಣುವರ್ಧನ್ ನಿಧನ ಹೊಂದಿದರು. ಹೀಗಾಗಿ, ಸಿನಿಮಾ ಸೆಟ್ಟೇರಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ; ಹೀಗಿದೆ ಕಾರ್ಯಕ್ರಮದ ರೂಪುರೇಷೆ

2009ರ ಕೊನೆಯಲ್ಲಿ ವಿಷ್ಣುವರ್ಧನ್ ನಿಧನ ಹೊಂದಿದರು. ಅವರ  ಸಾವು ಸಾಕಷ್ಟು ಶಾಕಿಂಗ್ ಆಗಿತ್ತು. ಸೆಪ್ಟೆಂಬರ್ 18ಕ್ಕೆ ಅವರ ಜನ್ಮದಿನ. ಅವರು ಜನಿಸಿ 75 ವರ್ಷ ತುಂಬಲಿದೆ. ಈ ಕಾರಣಕ್ಕೆ ‘ಯಜಮಾನರ ಅಮೃತ ಮಹೋತ್ಸವ’ ಎಂದು ಆಚರಿಸಲು ನಿರ್ಧರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.