Malu Nipanal Singer: ನಾ ಡ್ರೈವರಾ; ಯೂಟ್ಯೂಬ್​ಗೂ ಮೊದಲು ಟ್ರ್ಯಾಕ್ಟರ್​ನಲ್ಲೇ ವೈರಲ್​ ಆಗಿತ್ತು ಈ ಗಾಯಕನ ಸಾಂಗ್​

|

Updated on: Nov 03, 2023 | 6:40 PM

Na Driver Ni Nanna lover: ಅಚ್ಚರಿ ಏನೆಂದರೆ, ಮಾಳು ನಿಪನಾಳ ಅವರು ಸಂಗೀತ ಕಲಿತವರಲ್ಲ. ಕಾಲೇಜಿಗೆ ಹೋಗಿ ಶಿಕ್ಷಣ ಪಡೆದವರೂ ಅಲ್ಲ. ಹಾಗಿದ್ದರೂ ಕೂಡ ಉತ್ತರ ಕರ್ನಾಟಕದ ಜನರಿಗೆ ಇಷ್ಟ ಆಗುವಂತಹ ಸಾಹಿತ್ಯವನ್ನು ಬರೆದು, ಹಾಡುತ್ತಾರೆ. ಅವರಿವರ ಹಾಡುಗಳನ್ನು ಕೇಳಿಸಿಕೊಂಡೇ ತಾವೂ ಹಾಡುವುದನ್ನು ಕಲಿತಿದ್ದಾರೆ. ಜನರಿಗೆ ಅವರ ಕಂಠ ಇಷ್ಟ ಆಗಿದೆ.

Malu Nipanal Singer: ನಾ ಡ್ರೈವರಾ; ಯೂಟ್ಯೂಬ್​ಗೂ ಮೊದಲು ಟ್ರ್ಯಾಕ್ಟರ್​ನಲ್ಲೇ ವೈರಲ್​ ಆಗಿತ್ತು ಈ ಗಾಯಕನ ಸಾಂಗ್​
ಮಾಳು ನಿಪನಾಳ
Follow us on

ಉತ್ತರ ಕರ್ನಾಟಕದಲ್ಲಿ ಮಾಳು ನಿಪನಾಳ (Malu Nipanal) ಎಂದರೆ ಸಿಕ್ಕಾಪಟ್ಟೆ ಫೇಮಸ್​. ಇಡೀ ಕರುನಾಡಿನ ಮಂದಿಗೆ ಮಾಳು ನಿಪನಾಳ ಎಂದರೆ ತಕ್ಷಣಕ್ಕೆ ಗೊತ್ತಾಗದೇ ಇರಬಹುದು. ಆದರೆ ‘ನಾ ಡ್ರೈವರಾ… ನೀ ನನ್ನ ಲವ್ವರಾ..’ ಹಾಡು ಖಂಡಿತವಾಗಿಯೂ ಗೊತ್ತಿರುತ್ತದೆ. ಅಷ್ಟರಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಹವಾ ಎಬ್ಬಿಸಿದೆ. ರೀಲ್ಸ್​ನಲ್ಲಿ ಈ ಹಾಡಿನ ಕ್ರೇಜ್​ ದೊಡ್ಡ ಮಟ್ಟಕ್ಕೆ ಹಬ್ಬಿದೆ. ಸಖತ್​ ವೈರಲ್​ ಆದ ಈ ಗೀತೆ ಗಾಯಕರೇ ಮಾಳು ನಿಪನಾಳ. ಅಪ್ಪಟ ಉತ್ತರ ಕರ್ನಾಟಕ(Utthara Karnataka) ಗ್ರಾಮೀಣ ಪ್ರತಿಭೆ ಅವರು. ಮಾಳು ನಿಪನಾಳ ಅವರು ಹಾಡಿದ ‘ನಾ ಡ್ರೈವರಾ… ನೀ ನನ್ನ ಲವ್ವರಾ..’ (Na Driver Ni Nanna lover) ಸಾಂಗ್​ ಸೂಪರ್​ ಹಿಟ್​ ಆಗಿದೆ. ಯೂಟ್ಯೂಬ್​ನಲ್ಲಿಯೇ ಈ ಹಾಡು ಬರೋಬ್ಬರಿ 11.7 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇದ್ದರೂ ಕೂಡ ಅವರು ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಗಾರೆ ಕೆಲಸ ಮಾಡುವುದು, ಕಬ್ಬು ಕಡಿಯುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಳು ನಿಪನಾಳ ಮಾಡುತ್ತಿದರು. ಡೊಳ್ಳಿನ ಪದಗಳನ್ನು ಅವರು ಹಾಡುತ್ತಿದ್ದರು. ಅದು ಜನರಿಗೆ ಇಷ್ಟ ಆಗುತ್ತಿತ್ತು. ಆ ಸಂದರ್ಭದಲ್ಲೇ ಅವರ ಒಂದು ಹಾಡನ್ನು ಸ್ಡುಡಿಯೋದಲ್ಲಿ ರೆಕಾರ್ಡ್​ ಮಾಡಲಾಯಿತು. ಅದು ಒಬ್ಬರ ಮೊಬೈಲ್​ನಿಂದ ಇನ್ನೊಬ್ಬರ ಮೊಬೈಲ್​ಗೆ ದಾಡುತ್ತ, ಸಖತ್​ ಫೇಮಸ್​ ಆಯಿತು. ಉತ್ತರ ಕರ್ನಾಟದ ಮಂದಿ ಟ್ರ್ಯಾಕ್ಟರ್​ನಲ್ಲಿ, ದೇವಸ್ಥಾನದಲ್ಲಿ ಮಾಳು ನಿಪನಾಳ ಅವರ ಹಾಡುಗಳನ್ನು ಪದೇ ಪದೇ ಕೇಳಿದರು. ಯೂಟ್ಯೂಬ್​ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲದಿರುವಾಗ ಮಾಳು ನಿಪನಾಳ ಅವರ ಹಾಡುಗಳು ಟ್ರ್ಯಾಕ್ಟರ್​ನಲ್ಲೇ ವೈರಲ್​ ಆದವು.

‘ನಾ ಡ್ರೈವರಾ… ನೀ ನನ್ನ ಲವ್ವರಾ..’ ಹಾಡು ಈಗ ಫೇಮಸ್​ ಆಗಿದೆ. ಆ ಗೀತೆಯ ಮೂಲಕ ಮಾಳು ನಿಪನಾಳ ಯಾರು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಒಂದಷ್ಟು ವರ್ಷಗಳ ಹಿಂದೆಯೇ ಅವರು ಸಾವಿರಾರು ಗೀತೆಗಳಿಗೆ ಧ್ವನಿ ಆಗಿದ್ದಾರೆ. ಅವೆಲ್ಲವೂ ಟ್ರ್ಯಾಕ್ಟರ್​ನಲ್ಲಿ ಸೂಪರ್​ ಹಿಟ್​ ಆಗಿವೆ. ಈಗಾಗಲೇ ಫೇಮಸ್​ ಆಗಿದ್ದ ಸಿನಿಮಾ ಹಾಡುಗಳ ಟ್ಯೂನ್​ ಬಳಸಿಕೊಂಡು, ಅದಕ್ಕೆ ಹೊಸ ಸಾಹಿತ್ಯ ಬರೆದು ತಮ್ಮದೇ ಶೈಲಿಯಲ್ಲಿ ಮಾಳು ನಿಪ್ಪನಾಳ ಅವರು ಹಾಡು ಮಾಡುತ್ತಿದ್ದರು. ಆ ಮೂಲಕ ಅವರು ದೊಡ್ಡ ಅಭಿಮಾನಿ ಬಳಗವನ್ನು ಪಡೆದರು.

ಇದನ್ನೂ ಓದಿ: ‘ಚೋಳ’ ಟೀಸರ್​ನಲ್ಲಿ ಆ್ಯಕ್ಷನ್​ ಅಬ್ಬರ; ಉತ್ತರ ಕರ್ನಾಟಕದಿಂದ ಬಂದ ಮತ್ತೋರ್ವ ಹೀರೋ ಅಂಜನ್​

ಅಚ್ಚರಿ ಏನೆಂದರೆ, ಮಾಳು ನಿಪನಾಳ ಅವರು ಸಂಗೀತ ಕಲಿತವರಲ್ಲ. ಕಾಲೇಜಿಗೆ ಹೋಗಿ ಶಿಕ್ಷಣ ಪಡೆದವರೂ ಅಲ್ಲ. ಹಾಗಿದ್ದರೂ ಕೂಡ ಉತ್ತರ ಕರ್ನಾಟಕದ ಜನರಿಗೆ ಇಷ್ಟ ಆಗುವಂತಹ ಸಾಹಿತ್ಯವನ್ನು ಬರೆದು, ಹಾಡುತ್ತಾರೆ. ಬೇರೆಯವರ ಹಾಡುಗಳನ್ನು ಕೇಳಿಸಿಕೊಂಡೇ ತಾವೂ ಹಾಡುವುದನ್ನು ಕಲಿತಿದ್ದಾರೆ. ಜನರಿಗೆ ಅವರ ಕಂಠ ಇಷ್ಟ ಆಗಿದೆ. ಹಾಗಾಗಿ ಹೊಸದಾಗಿ ಸಂಗೀತ ಕಲಿಯುವ ಕೆಲಸಕ್ಕೆ ಅವರು ಕೈ ಹಾಕಿಲ್ಲ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಅವರು ಭಾರಿ ಫೇಮಸ್​ ಆಗಿದ್ದಾರೆ. ಅವರ ಹೊಸ ಹಾಡಿಗಾಗಿ ಜನರು ಕಾಯುವಂತಾಗಿದೆ.

ಇದನ್ನೂ ಓದಿ: ‘ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂಥದ್ದು ನಾಟು ನಾಟು ಹಾಡು’: ಆಸ್ಕರ್​ ಗೆದ್ದಿದ್ದಕ್ಕೆ ಮೋದಿ ಪ್ರಶಂಸೆ

ಕ್ರಿಯೇಟಿವ್​ ವ್ಯಕ್ತಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್​ ಒಂದು ಉತ್ತಮ ವೇದಿಕೆ ಆಗಿದೆ. ಮಾಳು ನಿಪನಾಳ ಕೂಡ ಯೂಟ್ಯೂಬ್​ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹಾಗಂತ ಅವರು ಯೂಟ್ಯೂಬ್​ ಲೋಕಕ್ಕೆ ಕಾಲಿಟ್ಟಿದ್ದು ಬಹಳ ಹಿಂದೇನೂ ಅಲ್ಲ. ಸ್ನೇಹಿತರ ಸಹಾಯದಿಂದ 2021ರಲ್ಲಿ ‘ಮಾಳು ನಿಪನಾಳ್​ ಸಿಂಗರ್​’ ಎಂಬ ಯೂಟ್ಯೂಬ್​ ಚಾನಲ್​ ಶುರು ಮಾಡಿದರು. ಈಗ ಆ ಚಾನೆಲ್​ಗೆ ಬರೋಬ್ಬರಿ 9 ಲಕ್ಷಕ್ಕೂ ಅಧಿಕ ಚಂದಾದಾರರು ಇದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ 10 ಲಕ್ಷ ಚಂದಾದಾರರು ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.