- TV9 Kannada Kannada News Photos Shiva Rajkumar suffered from fever took treatment and taking rest now
ಶಿವರಾಜ್ ಕುಮಾರ್ಗೆ ಅನಾರೋಗ್ಯ: ಆತಂಕದ ಅಗತ್ಯವಿಲ್ಲವೆಂದ ವೈದ್ಯರು
Shiva Rajkumar: ಸಣ್ಣ ಮಟ್ಟಿಗಿನ ಆರೋಗ್ಯ ವ್ಯತ್ಯಯದಿಂದ ಬಳಲಿದ್ದ ಶಿವರಾಜ್ ಕುಮಾರ್, ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಜೊತೆಗೆ ಸಾಮಾನ್ಯ ಆರೋಗ್ಯ ತಪಾಸಣೆಯನ್ನೂ ಮಾಡಿಸಿಕೊಂಡಿದ್ದಾರೆ.
Updated on: Nov 03, 2023 | 8:36 PM

ನಟ ಶಿವರಾಜ್ ಕುಮಾರ್ ಅವರು ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದ ಕೆಲವು ದಿನಗಳಿಂದಲೂ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು, ಇಂದು ಜ್ವರ ತುಸು ಹೆಚ್ಚಾದ ಕಾರಣ ಅವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು.

ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದರು. ತಜ್ಞ ವೈದ್ಯರು ಶಿವರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದರು. ಜೊತೆಗೆ ಸಾಮಾನ್ಯ ಆರೋಗ್ಯ ತಪಾಸಣೆ ಸಹ ಮಾಡಲಾಯ್ತು.

ಚಿಕಿತ್ಸೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಬಳಿಕ ಮಧ್ಯಾಹ್ನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವರಾಜ್ ಕುಮಾರ್.

61 ವರ್ಷ ವಯಸ್ಸಿನಲ್ಲಿಯೂ ಎನರ್ಜೆಟಿಕ್ ಆಗಿದ್ದಾರೆ ಶಿವರಾಜ್ ಕುಮಾರ್. ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುತ್ತಾರೆ.


ಶಿವರಾಜ್ ಕುಮಾರ್ ಅವರಿಗೆ ಕೆಲ ವರ್ಷದ ಹಿಂದೆ ಹೃದಯ ಸಂಬಂಧಿ ಸಣ್ಣ ಶಸ್ತ್ರಚಿಕಿತ್ಸೆಯೊಂದು ಸಹ ಆಗಿದೆ. ಹಾಗಿದ್ದರೂ ಸಹ ಈಗಲೂ ಯುವಕರಂತೆ ನರ್ತಿಸುತ್ತಾರೆ, ಫೈಟ್ ಮಾಡುತ್ತಾರೆ. ಯುವಕರನ್ನು ನಾಚಿಸುವ ಎನರ್ಜಿ ಶಿವಣ್ಣನದ್ದು.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



