AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಮಾದರಿಯಲ್ಲಿ ‘ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌ ಸೀಸನ್‌ 3’ ಆಟಗಾರರ ಹರಾಜು ಪ್ರಕ್ರಿಯೆ

ನಟಿ ರಾಗಿಣಿ ದ್ವಿವೇದಿ ಅವರು ‘ಟೆಲಿವಿಷನ್ ಪ್ರೀಮಿಯರ್ ಲೀಗ್’ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. 3ನೇ ಸೀಸನ್​ಗೆ ಸಿದ್ಧತೆ ನಡೆಯುತ್ತಿದೆ. ಅದರ ಪ್ರಮುಖ ಹಂತವಾಗಿ ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅತಿಥಿಯಾಗಿ ಬಂದು ಶುಭ ಕೋರಿದ್ದಾರೆ.

ಮದನ್​ ಕುಮಾರ್​
|

Updated on: Nov 03, 2023 | 3:42 PM

Share
ಕ್ರಿಕೆಟ್‌ ಜಗತ್ತಿಗೂ ಸಿನಿಮಾ ಲೋಕಕ್ಕೂ ಹತ್ತಿರದ ನಂಟಿದೆ. ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ ಕಲಾವಿದರ ಪೈಕಿ ಎಷ್ಟೋ ಜನರಿಗೆ ಕ್ರಿಕೆಟ್​ ಬಗ್ಗೆ ಆಸಕ್ತಿ ಇದೆ. ತಾವೂ ಕೂಡ ಉತ್ತಮ ಕ್ರಿಕೆಟರ್​ ಆಗಬೇಕು ಎಂದು ಬಯಸಿದವರಿದ್ದಾರೆ. ಎಲ್ಲ ಭಾಷೆಯ ಕಲಾವಿದರು ಸಹ ಕ್ರಿಕೆಟ್‌ ಆಡಲು ಬಯಸುತ್ತಾರೆ. ಅಂಥವರಿಗೆ ಕೆಲವು ಅವಕಾಶಗಳು ಇವೆ. ಕಿರುತೆರೆ ಕಲಾವಿದರು ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಕಳೆದ ಎರಡು ವರ್ಷದಿಂದ ‘ಟೆಲಿವಿಷನ್‌ ಪ್ರೀಮಿಯರ್‌ ಲೀಗ್‌’ ನಡೆಸಲಾಗುತ್ತಿದೆ. ಈಗ ಇದರ ಮೂರನೇ ಆವೃತ್ತಿಯ ಪ್ರಾರಂಭಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.

1 / 6
2024ರ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ‘ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3’ ಪಂದ್ಯಗಳು ನಡೆಯಲಿವೆ. ವಿಶೇಷ ಏನೆಂದರೆ, ಕಲಾವಿದರು ಹಾಗೂ ತಂತ್ರಜ್ಞರ ಜೀವನಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಈ ಲೀಗ್​ ನಡೆಯುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಆವೃತ್ತಿಗಳು ಮುಗಿದಿದೆ. ಈಗ 3ನೇ ಸೀಸನ್​ಗೆ ಸಿದ್ಧತೆ ನಡೆಯುತ್ತಿದೆ. ಅದರ ಪ್ರಮುಖ ಹಂತವಾಗಿ ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ.

2 / 6
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ಇವೆಂಟ್​ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಟೂರ್ನಮೆಂಟ್​ಗೆ ಅವರು ಶುಭ ಕೋರಿದರು. ನಟಿ ರಾಗಿಣಿ ದ್ವಿವೇದಿ ಅವರು ‘ಟೆಲಿವಿಷನ್ ಪ್ರೀಮಿಯರ್ ಲೀಗ್’ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಟಿಪಿಎಲ್​ಗೆ ಬಗ್ಗೆ ಬಸವರಾಜ್ ಹೊರಟ್ಟಿ ಮಾತನಾಡಿದರು. ‘ಬಹಳ ಸಂತೋಷ ಎನಿಸುತ್ತಿದೆ. ಎರಡು ಪ್ರಕಾರದ ವ್ಯಕ್ತಿಗಳನ್ನು ನೋಡುತ್ತೀರಿ. ಸತ್ತರೂ ಬದುಕಿದ್ದ ಹಾಗೆ ಇರುವವರು ಒಂದು ಪ್ರಕಾರದವರು. ಬದುಕಿದ್ದೂ ಸತ್ತಂತೆ ಇರುವವರು ಮತ್ತೊಂದು ಪ್ರಕಾರದವರ. ಸತ್ತೂ ಬದುಕಿರುವವರು ಪುನೀತ್. ಅಪ್ಪು ನನ್ನೊಂದಿಗೆ ಆತ್ಮೀಯವಾಗಿ ಇದ್ದವರು’ ಎಂದು ಅವರು ಹೇಳಿದರು.

3 / 6
‘ಮಾಧ್ಯಮದವರು ಮತ್ತು ಕಿರುತೆರೆಯವರು ಜೊತೆಗೂಡಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುತ್ತಿರುವುದು ತುಂಬ ಹೆಮ್ಮೆಯ ಸಂಗತಿ. ನಾವು ಕೂಡ ಜೀವನದಲ್ಲಿ ಕ್ರಿಕೆಟ್ ಆಡುತ್ತಿದ್ವಿ. ಅದು ಮನುಷ್ಯನಿಗೆ ಆರಾಮ ನೀಡುತ್ತದೆ. ನಿಮಗೆ ಏನು ಅನುಕೂಲ ಬೇಕಾದರೂ ಸಾಧ್ಯವಾದಷ್ಟು ನಾನು ನೀಡುತ್ತೇನೆ. ನೀವು ಏನಾದರೂ ಹೊಸದನ್ನು ಮಾಡಬೇಕು. ಜೀವನದಲ್ಲಿ ಏನೇ ಮಾಡಿ, ನಿಮ್ಮನ್ನು ಜನರು ನೆನಪಿಡುವಂತಹ ಕೆಲಸ ಮಾಡಿ’ ಎಂದು ಬಸವರಾಜ್ ಹೊರಟ್ಟಿ  ಹೇಳಿದರು.

4 / 6
ಐಪಿಎಲ್ ಮಾದರಿಯಲ್ಲಿ ಟಿಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಗಿದೆ. 150 ಆಟಗಾರರ ಪೈಕಿ ಹೆಚ್ಚು ಬಿಡ್​ಗೆ ಆಯ್ಕೆಯಾದ ಆಟಗಾರರಿಗೆ N1 ಅಕಾಡೆಮಿ ವತಿಯಿಂದ ನಗದು ರೂಪದಲ್ಲಿ ಬಹುಮಾನ ನೀಡಲಾಗಿದೆ. ಗೋಲ್ಡನ್ ಈಗಲ್, ಅಶ್ವಸೂರ್ಯ ರೈಡರ್ಸ್, ಕೆಕೆಆರ್‌ ಮೀಡಿಯಾ ಹೌಸ್, ಎವಿಆರ್ ಟಸ್ಕರ್ಸ್‌, ಬಯೋಟಾಪ್ ಲೈಫ್ ಸೇವಿಯರ್ಸ್, ರಾಸು ವಾರಿಯರ್, ದಿ ಬುಲ್‌ ಸ್ಕ್ವಾಡ್‌, ಭಜರಂಗಿ ಬಾಯ್ಸ್, ಜಿಎಲ್‌ಆರ್‌ ವಾರಿಯರ್ಸ್, ಇನ್‌ಸೇನ್‌ ಕ್ರಿಕೆಟ್‌ ಟೀಂ ಸೇರಿದಂತೆ 10 ತಂಡಗಳಲ್ಲಿ ಒಟ್ಟು 150 ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಎಲ್ಲ ಹತ್ತು ಟೀಮ್​ಗಳಿಗೂ ಅಂಬಾಸಿಡರ್ ಮತ್ತು ಓನರ್‌ ಇರಲಿದ್ದಾರೆ. ಹೆಚ್. ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

5 / 6
ಅಶ್ವಸೂರ್ಯ ರೈಡರ್ಸ್ ಟೀಮ್​ಗೆ ಹರ್ಷ ಸಿಎಂ ಗೌಡ ಕ್ಯಾಪ್ಟನ್​. ರಂಜಿತ್ ಕುಮಾರ್ ಎಸ್ ಓನರ್ ಆಗಿದ್ದಾರೆ. ಜಿಎಲ್‌ಆರ್‌ ವಾರಿಯರ್ಸ್ ತಂಡಕ್ಕೆ ಲೂಸ್ ಮಾದ ಯೋಗಿ ನಾಯಕ. ರಾಜೇಶ್ ಎಲ್. ಓನರ್ ಆಗಿದ್ದಾರೆ. ಇನ್‌ಸೇನ್‌ ಕ್ರಿಕೆಟ್‌ ಟೀಂಗೆ ರವಿಶಂಕರ್ ಗೌಡ ಅವರು ನಾಯಕನಾಗಿದ್ದು, ಫೈಜಾನ್ ಖಾನ್ ಮಾಲಿಕರಾಗಿದ್ದರೆ. ದಿ ಬುಲ್‌ ಸ್ಕ್ವಾಡ್‌ ಟೀಮ್​ಗೆ ಶರತ್ ಪದ್ಮನಾಭ್ ನಾಯಕ ಹಾಗೂ ಮೋನಿಶ್ ಓನರ್ ಆಗಿದ್ದಾರೆ. ಭಜರಂಗಿ ಬಾಯ್ಸ್ ತಂಡವನ್ನು ಸಾಗರ್ ಬಿಳಿಗೌಡ ನಾಯಕನಾಗಿ ಮುನ್ನಡೆಸುತ್ತಾರೆ. ಅದಕ್ಕೆ ಸ್ವಸ್ತಿಕ್ ಆರ್ಯ ಮಾಲಿಕರಾಗಿದ್ದಾರೆ. ದೀಕ್ಷಿತ್ ಶೆಟ್ಟಿ ಅವರು ರಾಸು ವಾರಿಯರ್ಸ್ ಟೀಂಗೆ ನಾಯಕನಾಗಿದ್ದು, ರಘು ಭಟ್ ಮತ್ತು ಸುಗುಣ ಓನರ್ ಆಗಿದ್ದಾರೆ. ಎವಿಆರ್‌ ಟಸ್ಕರ್ಸ್‌ ತಂಡಕ್ಕೆ  ಚೇತನ್ ಸೂರ್ಯ ಕ್ಯಾಪ್ಟನ್​ ಆಗಿದ್ದು, ಅರವಿಂದ್ ವೆಂಕಟ್ ರೆಡ್ಡಿ ಓನರ್ ಆಗಿದ್ದಾರೆ. ಬಯೋಟಾಪ್ ಲೈಫ್ ಸೇವಿಯರ್ಸ್ ತಂಡಕ್ಕೆ ಅಲಕಾ ನಂದ ಶ್ರೀನಿವಾಸ್ ನಾಯಕನಾಗಿದ್ದಾರೆ. ಡಾ. ವಿಶ್ವನಾಥ್ ಸಿದ್ದರಾಮರೆಡ್ಡಿ ಮತ್ತು ಪ್ರಸನ್ನ ಓನರ್‌. ಮೀಡಿಯಾ ಹೌಸ್‌ಗೆ ಅರುಣ್ ರಾಮ್ ಗೌಡ ನಾಯಕನಾಗಿದ್ದು, ಲಕ್ಷ್ಮೀ ಕಾಂತ್ ರೆಡ್ಡಿ ಓನರ್ ಆಗಿದ್ದಾರೆ. ಗೋಲ್ಡನ್ ಈಗಲ್​ಗೆ ವಿಹಾನ್ ಕ್ಯಾಪ್ಟನ್​ ಆಗಿದ್ದು, ಕುಶಾಲ್ ಗೌಡ ಮಾಲಿಕರಾಗಿದ್ದಾರೆ.

6 / 6
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್