ನಾಗ ಚೈತನ್ಯ ಹಾಗೂ ಸಮಂತಾ (Samantha) ಪತಿ-ಪತ್ನಿಯರಾಗಿ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ, ಅವರು ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ಅದಾದ ಬಳಿಕ ಈವರೆಗೆ ಸಮಂತಾ ಹಾಗೂ ನಾಗ ಚೈತನ್ಯ ಮುಖಾಮುಖಿ ಆಗಿಲ್ಲ. ಈಗ ದೊಡ್ಡ ಪರದೆಮೇಲೆ ಸಮಂತಾ ಸಿನಿಮಾ ನೋಡುವ ಅಪರೂಪದ ಅವಕಾಶ ನಾಗ ಚೈತನ್ಯ ಅವರಿಗೆ ಸಿಕ್ಕಿತ್ತು. ಈ ವೇಳೆ ಅವರ ರಿಯಾಕ್ಷನ್ ನೋಡಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ಮನಂ’ ಸಿನಿಮಾ 2014ರ ಮೇ 23ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಈಗ ದಶಕಗಳ ಸಂಭ್ರಮ. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್, ಅಕ್ಕಿನೇನಿ ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಮತ್ತು ಸಮಂತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಈಗ ಸಿನಿಮಾನ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ. ತೆಲುಗು ರಾಜ್ಯಗಳಲ್ಲಿ ‘ಮನಂ’ ಸಿನಿಮಾದ ವಿಶೇಷ ಪ್ರದರ್ಶನಗಳು ನಡೆಯುತ್ತಿವೆ. ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನ ಹಲವು ಚಿತ್ರಮಂದಿರಗಳಲ್ಲಿ ‘ಮನಂ’ ಸಿನಿಮಾ ವಿಶೇಷ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: ‘ನೀವು ಗೆಲುವಿಗೆ ಅರ್ಹರು’; ಆರ್ಸಿಬಿ ಜಯಕ್ಕೆ ಪ್ರಾರ್ಥಿಸಿದ್ರಾ ಸಮಂತಾ?
ಗುರುವಾರ (ಮೇ 23) ರಾತ್ರಿ ಹೈದರಾಬಾದ್ನಲ್ಲಿ ‘ಮನಂ’ ಸಿನಿಮಾದ ವಿಶೇಷ ಪ್ರದರ್ಶನ ಇತ್ತು. ಈ ವೇಳೆ ಚಿತ್ರದ ನಿರ್ದೇಶಕ ವಿಕ್ರಮ್ ಕುಮಾರ್ ಜೊತೆಗೆ ನಾಗ ಚೈತನ್ಯ ಹಾಜರಾಗಿದ್ದರು. ಅಭಿಮಾನಿಗಳ ಮಧ್ಯೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈ ಸಿನಿಮಾದಲ್ಲಿ ಸಮಂತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ತೆರೆ ಮೇಲೆ ಸಮಂತಾ ಅವರನ್ನು ನೋಡಿದ ಅವರ ಖುಷಿಗೆ ಪಾರವೇ ಇರಲಿಲ್ಲ. ಸಮಂತಾ ದೃಶ್ಯ ಪರದೆಮೇಲೆ ಬರುತ್ತಿದ್ದಂತೆ ನಾಗ ಚೈತನ್ಯ ನಕ್ಕರು. ಈ ವಿಡಿಯೋಗಳು ವೈರಲ್ ಆಗುತ್ತಿವೆ.
@chay_akkineni reaction ❤️#Manam #NagaChaitanya #Samantha pic.twitter.com/3gEinV3Haq
— NewsWala (@NewsWalaTelugu) May 23, 2024
‘ಮನಂ’ ಚಿತ್ರದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಗಂಡ-ಹೆಂಡತಿಯಾಗಿ ನಟಿಸಿದ್ದರು. ‘ಏ ಮಾಯ ಚೇಸಾವೆ’ ಚಿತ್ರದ ಮೂಲಕ ಇಬ್ಬರ ಪರಿಚಯ ಆಗಿ, ಆ ಬಳಿಕ ಅದು ಪ್ರೀತಿಗೆ ತಿರುಗಿತ್ತು. 2017ರಲ್ಲಿ ಇವರ ಮದುವೆ ನಡೆಯಿತು. ಮದುವೆಯಾದ ನಾಲ್ಕು ವರ್ಷಗಳ ನಂತರ ಅಂದರೆ 2021ರಲ್ಲಿ ಇವರು ವಿಚ್ಛೇದನ ಪಡೆದಿರುವುದಾಗಿ ಘೋಷಿಸಿದರು. ಇವರು ಬೇರೆ ಆಗಲು ಇನ್ನೂ ಕಾರಣಗಳು ತಿಳಿದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.