ಇಳಯರಾಜ ನೊಟೀಸ್​ಗೆ ಪ್ರತಿಕ್ರಿಯಿಸಿದ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕ

‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾನಲ್ಲಿ ತಾವು ರಾಗ ಸಂಯೋಜಿಸಿದ ‘ಕಣ್ಮಣಿ’ ಹಾಡು ಬಳಸಿದ್ದಕ್ಕೆ ಸಂಗೀತ ನಿರ್ದೇಶಕ ಇಳಯರಾಜ ನೊಟೀಸ್ ಕಳುಹಿಸಿದ್ದು, ಸಿನಿಮಾದ ನಿರ್ಮಾಪಕರು ನೊಟೀಸ್​ ಬಗ್ಗೆ ಮಾತನಾಡಿದ್ದಾರೆ.

ಇಳಯರಾಜ ನೊಟೀಸ್​ಗೆ ಪ್ರತಿಕ್ರಿಯಿಸಿದ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕ
Follow us
ಮಂಜುನಾಥ ಸಿ.
|

Updated on: May 24, 2024 | 5:06 PM

ಮಲಯಾಳಂ (Malayalam) ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’ (Manjummel boys) ಸೂಪರ್ ಡೂಪರ್ ಹಿಟ್ ಆಗಿದೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಆಗಿದ್ದು, ಕಮಲ್ ಹಾಸನ್ ನಟನೆಯ ತಮಿಳಿನ ‘ಗುಣ’ ಸಿನಿಮಾದ ಕನೆಕ್ಷನ್ ಈ ಸಿನಿಮಾಕ್ಕಿದೆ. ‘ಗುಣ’ ಸಿನಿಮಾದ ಚಿತ್ರೀಕರಣ ನಡೆದಿದ್ದ ಗುಹೆಗೆ ಹೋದಾಗ ನಡೆದ ಅವಘಡ ಹಾಗೂ ಆ ಅನಿರೀಕ್ಷಿತ ಅವಘಡದಿಂದ ಒಂದು ಸ್ನೇಹಿತರ ತಂಡ ಹೇಗೆ ಹೊರಗೆ ಬರುತ್ತದೆ ಎಂಬುದೇ ಈ ಸಿನಿಮಾದ ಕತೆ. ಸಿನಿಮಾದಲ್ಲಿ ತಮಿಳಿನ ಗುಣ ಸಿನಿಮಾದ ಸೂಪರ್ ಹಿಟ್ ಹಾಡು ‘ಕಣ್ಮನಿ’ಯನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದ ಹೈಲೆಟ್ ಆ ಹಾಡು. ಆದರೆ ‘ಗುಣ’ ಸಿನಿಮಾದ ಸಂಗೀತ ನಿರ್ದೇಶಕ ಇಳಯರಾಜ ತಮ್ಮ ಹಾಡನ್ನು ಅನುಮತಿ ಇಲ್ಲದೇ ಬಳಸಿರುವುದಕ್ಕೆ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರಿಗೆ ನೊಟೀಸ್ ನೀಡಿದ್ದರು. ಇದೀಗ ನಿರ್ಮಾಪಕರು ಇಳಯರಾಜ ಅವರ ನೊಟೀಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರಿಗೆ ನೊಟೀಸ್ ನೀಡಿದ್ದ ಇಳಯರಾಜ, ತಮ್ಮ ಎಲ್ಲ ಹಾಡುಗಳಿಗೂ ಮೂಲ ಮಾಲೀಕ ತಾವೇ ಆಗಿದ್ದು, ಕ್ರಿಯಾತ್ಮಕ ಹಕ್ಕು ತಮ್ಮದೇ ಆಗಿರುತ್ತದೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರು ನನ್ನ ಸಂಗೀತ ಸಂಯೋಜನೆಯ ಹಾಡನ್ನು ತಮ್ಮ ಸಿನಿಮಾದಲ್ಲಿ ಬಳಸಲು ನನ್ನ ಅನುಮತಿ ಪಡೆದಿಲ್ಲ, ಟೈಟಲ್ ಕಾರ್ಡ್​ನಲ್ಲಿ ನನ್ನ ಹೆಸರು ಬಳಸಿರುವುದು ನನ್ನ ಅನುಮತಿ ದೊರೆತಿದೆ ಎಂದರ್ಥವಲ್ಲ’ ಎಂದಿದ್ದರು.

ಇದನ್ನೂ ಓದಿ:ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್​ಲಾಲ್; ಇಲ್ಲಿದೆ ವಿಡಿಯೋ

ಇದೀಗ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ಶಾನ್ ಆಂಟೊನಿ ಈ ಬಗ್ಗೆ ಮಾತನಾಡಿದ್ದು, ‘ಗುಣ’ ಸಿನಿಮಾದ ಆಡಿಯೋ ಹಕ್ಕುಗಳು ಎರಡು ಸಂಸ್ಥೆಗಳ ಬಳಿ ಇದ್ದವು. ಎರಡೂ ಸಂಸ್ಥೆಗಳಿಂದಲೂ ನಾವು ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ನಾಯಕ ಕಮಲ್ ಹಾಸನ್ ಅವರೊಂದಿಗೆ ಸಂವಾದವನ್ನು ಸಹ ಚಿತ್ರತಂಡ ಮಾಡಿತ್ತು.

ಇಳಯರಾಜ, ಈ ಮೊದಲು ಸಹ ಹಲವರಿಗೆ ಇದೇ ರೀತಿಯ ನೊಟೀಸ್​ಗಳನ್ನು ಕಳುಹಿಸಿದ್ದಾರೆ. ತಾವು ರಾಗ ಸಂಯೋಜಿಸಿದ ಹಾಡುಗಳನ್ನು ಬಳಸಿದ್ದಕ್ಕೆ, ಹೆಸರು ಬಳಸಿದ್ದಕ್ಕೆ ಮಾತ್ರವೇ ಅಲ್ಲದೆ ಲೈವ್ ಶೋಗಳಲ್ಲಿ ತಮ್ಮ ಹಾಡುಗಳನ್ನು ಹಾಡಿದವರಿಗೂ ಸಹ ನೊಟೀಸ್​ಗಳನ್ನು ಇಳಯರಾಜ ಕಳಿಸಿದ್ದರು. ಅವರ ಆತ್ಮೀಯ ಸ್ನೇಹಿತ ಎಸ್​ಪಿ ಬಾಲಸುಬ್ರಹ್ಮಣ್ಯಂಗೆ ಸಹ ಇಳಯರಾಜ ನೊಟೀಸ್​ ನೀಡಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ