AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಯಾಳಂ ಸೂಪರ್ ಸ್ಟಾರ್​ ಮೋಹನ್​ಲಾಲ್​ಗೆ ಟಾಸ್ಕ್ ಕೊಟ್ಟ ಕಮಲ್ ಹಾಸನ್

ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ ಹುಟ್ಟುಹಬ್ಬಕ್ಕೆ ಹಲವು ತಾರೆಯರು ಶುಭ ಹಾರೈಸಿದ್ದಾರೆ. ಆದರೆ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಭಿನ್ನವಾಗಿ ಶುಭ ಹಾರೈಸಿರುವ ಜೊತೆಗೆ ಮೋಹನ್​ಲಾಲ್​ಗೆ ಟಾಸ್ಕ್ ಒಂದನ್ನು ನೀಡಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್​ ಮೋಹನ್​ಲಾಲ್​ಗೆ ಟಾಸ್ಕ್ ಕೊಟ್ಟ ಕಮಲ್ ಹಾಸನ್
Follow us
ಮಂಜುನಾಥ ಸಿ.
|

Updated on: May 22, 2024 | 3:24 PM

ಮಲಯಾಳಂ ಸೂಪರ್ ಸ್ಟಾರ್ ಮೋಹನ್​ಲಾಲ್ (Mohanlal) ನಿನ್ನೆ (ಮೇ 21) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 40 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಮೋಹನ್​ಲಾಲ್ ಕಮರ್ಶಿಯಲ್, ಕಲಾತ್ಮಕ ಎಲ್ಲ ಬಗೆಯ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗ ಕಮರಿಹೋಗದಂತೆ ನೋಡಿಕೊಂಡ ಮಹನೀಯರಲ್ಲಿ ಮೋಹನ್​ಲಾಲ್ ಸಹ ಒಬ್ಬರು. ಮೋಹನ್​ಲಾಲ್​ರ ಹುಟ್ಟುಹಬ್ಬಕ್ಕೆ ಭಾರತೀಯ ಚಿತ್ರರಂಗದ ಹಲವು ಗಣ್ಯರು ಶುಭ ಕೋರಿದ್ದಾರೆ. ಆದರೆ ನಟ ಕಮಲ್ ಹಾಸನ್, ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ಟಾಸ್ಕ್ ಒಂದನ್ನು ಸಹ ನೀಡಿದ್ದಾರೆ.

ಮೋಹನ್​ಲಾಲ್ ಈ ವರೆಗೆ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ ನಟನಾಗಿದ್ದುಕೊಂಡು ಇಷ್ಟು ದೊಡ್ಡ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿರುವ ನಟರ ಸಂಖ್ಯೆ ಬಹಳ ಅಪರೂಪ. ಮೋಹನ್​ಲಾಲ್​ರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿರುವ ಕಮಲ್ ಹಾಸನ್ ಇದೇ ವಿಷಯವಾಗಿ ಟಾಸ್ಕ್ ಒಂದನ್ನು ಮೋಹನ್​ಲಾಲ್ ಅವರಿಗೆ ನೀಡಿದ್ದಾರೆ.

ಇದನ್ನೂ ಓದಿ:ಒಂದೇ ತಿಂಗಳಲ್ಲಿ ಕಮಲ್ ಹಾಸನ್ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್

ವಿಮರ್ಶಾತ್ಮಕ ಮತ್ತು ವಿವೇಚನಾಶೀಲ ಪ್ರೇಕ್ಷಕರಿರುವ ಕೇರಳದಂಥಹಾ ರಾಜ್ಯದಲ್ಲಿ ಕಳೆದ 40 ವರ್ಷದಿಂದಲೂ ಸ್ಟಾರ್ ನಟನಾಗಿ ನಡೆಯುತ್ತಾ ಬಂದಿರುವುದು ಸುಲಭದ ವಿಷಯವಲ್ಲ. 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದು ಸುಲಭದ ಮಾತಲ್ಲ, ಕೆಲವರು ಈ ಮಾತನ್ನು ನಂಬದೇ ಇರಲೂ ಬಹುದೇನೋ. ಆದರೆ ನಾನು ಹಾಗಲ್ಲ, ನಾನು ತುಸು ಭಿನ್ನವಾಗಿ ಮೋಹನ್​ಲಾಲ್​ರಿಂದ ಒಂದನ್ನು ನಿರೀಕ್ಷಿಸುತ್ತೇನೆ. ಮಿಸ್ಟರ್ ಪ್ರೇಮ್ ನಜೀರ್ ಅವರು 500 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ದಾಖಲೆಯನ್ನು ಮೋಹನ್​ಲಾಲ್ ಮುರಿಯಬೇಕು ಎಂಬುದು ನನ್ನ ಆಸೆ. ಅವರ ಈ ಹುಟ್ಟುಹಬ್ಬಕ್ಕೆ ಇದೇ ನನ್ನ ಆಶಯ. ಒಳ್ಳೆಯ ಆರೋಗ್ಯ ನಿಮ್ಮದಾಗಲಿ, ಇನ್ನಷ್ಟು, ಮತ್ತಷ್ಟು ದಾಖಲೆಗಳನ್ನು ಮುರಿಯಿರಿ’ ಎಂದು ಕಮಲ್ ಹಾಸನ್ ಶುಭ ಹಾರೈಸಿದ್ದಾರೆ.

1980 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮೋನ್​ಲಾಲ್ ಆಗಿನಿಂದ ಈಗಿನವರೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ 25-30 ಸಿನಿಮಾಗಳಲ್ಲಿ ನಟಿಸಿದ್ದು ಸಹ ಇದೆ. 1986 ರಲ್ಲಿ ಮೋಹನ್​ಲಾಲ್ ನಟಿಸಿದ್ದ 36 ಸಿನಿಮಾಗಳು ಬಿಡುಗಡೆ ಆಗಿದ್ದವು. ಸುಮಾರು 20 ಕ್ಕಿಂತಲೂ ಹೆಚ್ಚು ಸಿನಿಮಾಗಳು ಹಲವು ವರ್ಷಗಳು ಬಿಡುಗಡೆ ಆಗಿವೆ. 90ರ ದಶಕದ ಬಳಿಕ ಸಂಖ್ಯೆಯಲ್ಲಿ ಕಡಿಮೆಯಾಯಿತಾದರೂ ಆಗಲೂ ಸಹ ವರ್ಷಕ್ಕೆ ಆರು-ಏಳು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು ಮೋಹನ್​ಲಾಲ್. ಈಗಲೂ ಸಹ ಹಲವು ಸಿನಿಮಾಗಳಲ್ಲಿ ಮೋಹನ್​ಲಾಲ್ ಬ್ಯುಸಿಯಾಗಿದ್ದಾರೆ. 2024ರಲ್ಲಿ ಒಂದು ಸಿನಿಮಾ ಬಿಡುಗಡೆ ಆಗಿದ್ದು, ಇನ್ನೂ ಐದು ಸಿನಿಮಾಗಳು ಬಿಡುಗಡೆ ಆಗಬೇಕಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ