AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಿವುಡ್​ ಸೂಪರ್​ಸ್ಟಾರ್ ಮೋಹನ್​ಲಾಲ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?

Mohanlal Birthday: ಮೋಹನ್​ಲಾಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 44 ವರ್ಷಗಳು ಕಳೆದಿವೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅವರು ಸಿನಿಮಾ ನಿರ್ದೇಶನಕ್ಕೂ ಇಳಿದಿದ್ದಾರೆ.

ಮಾಲಿವುಡ್​ ಸೂಪರ್​ಸ್ಟಾರ್ ಮೋಹನ್​ಲಾಲ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?
ಮೋಹನ್​ಲಾಲ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 21, 2024 | 7:46 AM

Share

ಮಾಲಿವುಡ್​ನ ಸೂಪರ್​ಸ್ಟಾರ್ ಮೋಹನ್​ಲಾಲ್​ಗೆ (Mohanlal) ಇಂದು (ಮೇ 21) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ವಿಶ್ ತಿಳಿಸುತ್ತಿದ್ದಾರೆ. ಭಾರತ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರು ಮಲಯಾಳಂನ ಶ್ರೀಮಂತ ನಟರಲ್ಲಿ ಒಬ್ಬರು. ಅವರಿಗೆ ನಾನಾ ಕಡೆಯಿಂದ ಹಣ ಬರುತ್ತಿದೆ. ಅವರ ಬಳಿ ಹಲವು ದುಬಾರಿ ಕಾರುಗಳು ಕೂಡ ಇವೆ.  ಆ ಬಗ್ಗೆ ಇಲ್ಲಿದೆ ವಿವರ.

ಮೋಹನ್​ಲಾಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 44 ವರ್ಷಗಳು ಕಳೆದಿವೆ. ‘ಮಂಜಿಲ್ ವಿರಿಂಜ್ ಪೂಕ್ಕಲ್’ ಅವರ ನಟನೆಯ ಮೊದಲ ಸಿನಿಮಾ. ಈ ಸಿನಿಮಾ ತೆರೆಕಂಡಿದ್ದು 1980ರಲ್ಲಿ. ಆ ಬಳಿಕ ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅವರು ಸಿನಿಮಾ ನಿರ್ದೇಶನಕ್ಕೂ ಇಳಿದಿದ್ದಾರೆ.

ಮೋಹನ್​ಲಾಲ್ ಅವರ ಆಸ್ತಿ 380 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿನಿಮಾ ನಿರ್ಮಾಣ, ಬ್ರ್ಯಾಂಡ್​ಗಳ ಪ್ರಚಾರ, ಉದ್ಯಮ ಅವರ ಗಳಿಕೆಯ ಮೂಲ. ಮೋಹನ್​ಲಾಲ್ ಅವರು 10-15 ಕೋಟಿ ರೂಪಾಯಿ ಪ್ರತಿ ಚಿತ್ರಕ್ಕೆ ಪಡೆಯುತ್ತಾರೆ. ಅವರು ಅತಿ ಹೆಚ್ಚು ಸಂಭಾವನೆ ಪಡೆಯೋ ಮಲಯಾಳಂ ಹೀರೋಗಳಲ್ಲಿ ಒಬ್ಬರು. ವರ್ಷದಿಂದ ವರ್ಷಕ್ಕೆ ಅವರ ಸಂಭಾವನೆಯಲ್ಲಿ ಏರಿಕೆ ಕಂಡಿದೆ.

ಮೋಹನ್​ಲಾಲ್ ಅವರು ಹಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಜ್ಯುವೆಲರಿ, ಬಟ್ಟೆ ಮೊದಲಾದ ಕಂಪನಿಗಳಿಗೆ ಅವರು ಪ್ರಚಾರ ಮಾಡುತ್ತಾರೆ. ಇದರಿಂದ ಅವರ ಸಂಭಾವನೆ ಹೆಚ್ಚಿದೆ. ಮೋಹನ್​ಲಾಲ್ ಅವರು ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಅವರು ಅಮ್ಯೂಸ್​ಮೆಂಟ್ ಪಾರ್ಕ್ ಹೊಂದಿದ್ದಾರೆ. ಫುಟ್​ಬಾಲ್​ ಇಂಡಿಯನ್ ಸೂಪರ್ ಲೀಗ್​ನಲ್ಲಿ ‘ಕೇರಳ ಬ್ಲಾಸ್ಟರ್ ಎಫ್​ಸಿ’ ತಂಡವನ್ನು ಹೊಂದಿದ್ದಾರೆ. ಮೋಹನ್​ಲಾಲ್ ಅವರ ಬಳಿ ದುಬಾರಿ ಕಾರುಗಳಿವೆ. ಆಡಿ, ಬೆಂಜ್ ಸೇರಿ ಅನೇಕ ಕಂಪನಿಯ ಕಾರುಗಳು ಅವರ ಬಳಿ ಇವೆ. ಸಾರ್ವಜನಿಕವಾಗಿ ಅವರು ಹಲವು ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದು ಇದೆ.

ಇದನ್ನೂ ಓದಿ: ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್​ಲಾಲ್; ಇಲ್ಲಿದೆ ವಿಡಿಯೋ

ಹಲವು ಪ್ರಶಸ್ತಿಗಳನ್ನು ಮೋಹನ್​ಲಾಲ್ ಗೆದ್ದಿದ್ದಾರೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಒಲಿದಿವೆ. ನಟನೆಯಲ್ಲಿ ಅವರು ಸಾಕಷ್ಟು ಪಳಗಿದ್ದಾರೆ. ಪದ್ಮ ಶ್ರೀ, ಪದ್ಮ ಭೂಷಣ ಗೌರವ ಕೂಡ ಅವರಿಗೆ ಸಿಕ್ಕಿದೆ. ಇನ್ನೂ ಕೆಲವು ಅವಾರ್ಡ್​ಗಳು ಅವರಿಗೆ ಒಲಿದಿವೆ. ಮೋಹನ್​ಲಾಲ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಬರೋಜ್​’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ ಇದು. ತೆಲುಗಿನ ‘ಕಣ್ಣಪ್ಪ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:21 am, Tue, 21 May 24

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!