ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಈ ಕಾರಣದಿಂದಲೇ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಪ್ರಕರಣದಿಂದ ಹೊರಗೆ ಬರೋದು ಅವರಿಗೆ ಅಷ್ಟು ಸುಲಭವಿಲ್ಲ. ಅವರ ವಿರುದ್ಧ ಕೇಳಿ ಬಂದಿರೋದು ಗಂಭೀರ ಕೊಲೆ ಆರೋಪ. ಹೀಗಾಗಿ, ಆಪ್ತರು ಎನಿಸಿಕೊಂಡವರು ಸೈಲೆಂಟ್ ಆಗಿದ್ದಾರೆ. ದರ್ಶನ್ ಪರ ಪೋಸ್ಟ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗಲೇ ದರ್ಶನ್ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ. ಇದರಿಂದ ಅವರು ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ತೆಲುಗು ಮಂದಿ ಕೂಡ ನಾಗ ಶೌರ್ಯ ಅವರನ್ನು ಟೀಕಿಸುತ್ತಿದ್ದಾರೆ.
ನಾಗ ಶೌರ್ಯ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಅನೇಕ ಬಾರಿ ಇವರು ಭೇಟಿ ಆಗಿದ್ದು ಇದೆ. ನಾಗ ಶೌರ್ಯ ಅವರು ಬೆಂಗಳೂರಿಗೆ ಬಂದಾಗ ದರ್ಶನ್ನ ಅವರು ಭೇಟಿ ಮಾಡಿದ್ದು ಇದೆ. ಈ ಬಾಡಿಂಗ್ ಕಾರಣದಿಂದಲೇ ನಾಗ ಶೌರ್ಯ ಅವರು ಪೋಸ್ಟ್ ಒಂದನ್ನು ಮಾಡಿದ್ದರು. ಇದರಲ್ಲಿ ಅವರು ದರ್ಶನ್ನ ಬೆಂಬಲಿಸಿದ್ದರು. ‘ದರ್ಶನ್ ಕನಸಿನಲ್ಲೂ ಯಾರಿಗೂ ಕೆಟ್ಟದನ್ನು ಬಯಸುವವರಲ್ಲ’ ಎಂದು ಪೋಸ್ಟ್ ಮಾಡಿದ್ದರು. ಜೊತೆಗೆ ದರ್ಶನ್ ಮಾಡಿದ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿದ್ದರು. ಈಗಲೇ ನಿರ್ಧಾರಕ್ಕೆ ಬರೋದು ಸರಿ ಅಲ್ಲ ಎಂದು ಕೂಡ ಹೇಳಿದ್ದರು.
ದರ್ಶನ್ ಪ್ರಕರಣ ಇನ್ನೂ ತನಿಖೆಯಲ್ಲಿದೆ. ಅವರು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಆಪ್ತಾರದ ಸುಮಲತಾ ಅಂಬರೀಷ್, ರಾಕ್ಲೈನ್ ವೆಂಕಟೇಶ್ ಸೇರಿ ಅನೇಕರು ಮೌನ ತಾಳಿದ್ದಾರೆ. ಆದರೆ, ನಾಗಶೌರ್ಯ ಅವರು ದರ್ಶನ್ನ ಬೆಂಬಲಿಸಿ ಸುಖಾಸುಮ್ಮನೆ ಟೀಕೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
‘ನಾಗಶೌರ್ಯ ಅವರು ಈ ರೀತಿ ಹೇಳಿಕೆ ನೀಡಬಾರದು. ದರ್ಶನ್ ಗಂಭೀರ ಆರೋಪಗಳನ್ನು ಹೊತ್ತಿದ್ದಾರೆ. ಅವರ ವಿರುದ್ಧವೇ ಎಲ್ಲಾ ಸಾಕ್ಷ್ಯಗಳು ಇವೆ. ಹೀಗಾಗಿ, ನಾಗ ಶೌರ್ಯ ಈ ರೀತಿ ಹೇಳಿಕೆ ನೀಡಬಾರದಿತ್ತು’ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ದರ್ಶನಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ’; ನಾಗ ಶೌರ್ಯ
ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದರಿಂದ ಸಿಟ್ಟಾದ ದರ್ಶನ್ ಅವರು ತಾವೇ ಕಾನೂನು ಕ್ರಮ ಕೈಗೊಂಡಿದ್ದರು. ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಈಗ ಈ ಪ್ರಕರಣದಲ್ಲಿ ಅವರು ಅರೆಸ್ಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.